ಭಾರತ–ಆಸ್ಟ್ರೇಲಿಯಾ ಟಿ–20 ಸರಣಿ: ಗೆಲುವಿನ ವಿಶ್ವಾಸದಲ್ಲಿ ಕೊಹ್ಲಿ ಪಡೆ

ಕರಾವಳಿ ಕರ್ನಾಟಕ ವರದಿ

ರಾಂಚಿ:
ಭಾರತ-ಆಸ್ಟ್ರೇಲಿಯಾ ನಡುವಿನ ಟಿ–20 ಸರಣಿಯ ಮೊದಲ ಪಂದ್ಯ ಇಂದು ನಡೆಯಲಿದ್ದು, ಏಕದಿನ ಸರಣಿ ಗೆದ್ದು ಬೀಗುತ್ತಿರುವ ಭಾರತ ತಂಡ ಇದೀಗ ಟಿ–20 ಸರಣಿಯಲ್ಲೂ ಆಸ್ಟ್ರೇಲಿಯಾ ವಿರುದ್ದ ಜಯ ಗಳಿಸಲು ಕಾತುರದಲ್ಲಿದೆ.

ಟಿ–20 ಮಾದರಿಯಲ್ಲಿ ಉಭಯ ತಂಡಗಳು 12 ಬಾರಿ ಮುಖಾಮುಖಿಯಾಗಿದ್ದು ಕೊಹ್ಲಿ ಪಡೆ 8–4ರ ಗೆಲುವಿನ ದಾಖಲೆ ಬರೆದಿದೆ. ಕಳೆದ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ 3 ಪಂದ್ಯಗಳ ಸರಣಿಯಲ್ಲಿ ಭಾರತ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತ್ತು.

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ಆಶಿಶ್‌ ನೆಹ್ರಾ ಮತ್ತು ಅಕ್ಷರ್‌ ಪಟೇಲ್‌.

ಆಸ್ಟ್ರೇಲಿಯಾ: ಸ್ಟೀವ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌ (ಉಪ ನಾಯಕ), ಜೇಸನ್‌ ಬೆಹರೆನ್‌ಡೊರ್ಫ್‌, ಡೇನ್‌ ಕ್ರಿಸ್ಟಿಯನ್‌, ನೇಥನ್‌ ಕೌಲ್ಟರ್‌ ನೈಲ್‌, ಪ್ಯಾಟ್ರಿಕ್‌ ಕಮಿನ್ಸ್‌, ಆ್ಯರನ್‌ ಫಿಂಚ್‌, ಟ್ರಾವಿಸ್‌ ಹೆಡ್‌, ಟ್ರಾವಿಸ್‌ ಹೆಡ್‌, ಮೊಯಿಸಸ್‌ ಹೆನ್ರಿಕ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಟಿಮ್‌ ಪೇನ್‌, ಕೇನ್‌ ರಿಚರ್ಡ್‌ಸನ್‌ ಮತ್ತು ಆ್ಯಡಮ್‌ ಜಂಪಾ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಝುಬೈರ್ ಹತ್ಯೆ: ಸಚಿವ ಖಾದರ್‌ಗೆ ಘೇರಾವ್ ಹಾಕಿದ ಸ್ಥಳೀಯರು:
http://bit.ly/2xYwNi9
►►ಗೌರಿ ಲಂಕೇಶ್ ಹತ್ಯೆ: ಸನಾತನ ಸಂಸ್ಥೆಯ ಐವರು ಕಾರ್ಯಕರ್ತರ ಮೇಲೆ ಶಂಕೆ: http://bit.ly/2ggYc4R
►►ಮಂಗಳೂರಿನಲ್ಲಿ ಐಸಿಸ್ ತರಬೇತಿ ಎಂದವರ ತನಿಖೆಯಾಗಲಿ: ಖಾದರ್: http://bit.ly/2yLjzlA
►►ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಕಂಡಿದ್ದ ವಿದ್ಯಾರ್ಥಿ: http://bit.ly/2ysa3aI

Related Tags: India vs Australia, 1st T20, Virat Kohli, Smith, Cricket News, Sports News, Kannada New
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ