ವಿಲ್ಸನ್ ಕಟೀಲ್‌ಗೆ ವಿಮಲ ವಿ. ಪೈ ಕಾವ್ಯಪುರಸ್ಕಾರ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಖ್ಯಾತ ಕೊಂಕಣಿ ಕವಿ, ಗೀತ ರಚನಕಾರ, ಲೇಖಕ ಮತ್ತು ಚಿಂತಕ ವಿಲ್ಸನ್ ಕಟೀಲ್ ಅವರ ‘ಎನ್ಕೌಂಟರ್’ ಕವನ ಸಂಕಲನಕ್ಕೆ ವಿಶ್ವ ಕೊಂಕಣಿ ಕೇಂದ್ರ ಕೊಡಮಾಡುವ ಪ್ರತಿಷ್ಠಿತ ವಿಮಲ ವಿ. ಪೈ ಕಾವ್ಯಪುರಸ್ಕಾರ ಪ್ರಾಪ್ತಿಯಾಗಿದೆ.

ಗೋವಾದ ಖ್ಯಾತ ಲೇಖಕ ಗಜಾನನ ಜೋಗ ಇವರ ‘ಖಾಂದ್ ಆನಿ ಹೆರ್ ಕಥಾ’ ಸಣ್ಣ ಕತೆಗಳ ಸಂಕಲನ ಕೊಂಕಣಿ ಪುಸ್ತಕ ವಿಭಾಗದಲ್ಲಿ ಆಯ್ಕೆಯಾಗಿದೆ.

ಖ್ಯಾತ ಕವಿ, ಕೊಂಕಣಿ ಸಂಶೋಧಕ ಮತ್ತು ಹೋರಾಟಗಾರರಾದ ಗೋವಾದ ಡಾ. ತಾನಾಜಿ ಹಳರಣಕರ ಅವರು ಈ ವರ್ಷದ ‘ವಿಶ್ವ ಕೊಂಕಣಿ ಜೀವನ ಸಿದ್ಧಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಈ ಪುರಸ್ಕಾರಗಳು ಒಂದು ಲಕ್ಷ ರೂ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ, ಶಾಲು ಮುಂತಾದ ಗೌರವವನ್ನು ಒಳಗೊಂಡಿವೆ. ನವೆಂಬರ್ ಇಪ್ಪತ್ತರಂದು ಮಂಗಳೂರಿನ ರಮಣ ವಿ. ಪೈ ಹಾಲ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.ಪ್ರಶಸ್ತಿಗಳ ಪ್ರಾಯೋಜಕರಾದ ಟಿ.ವಿ ಮೋಹನದಾಸ ಪೈ ಅವರು ಅಂದು ಉಪಸ್ಥಿತರಿರುತ್ತಾರೆ ಎಂದು ವಿಶ್ವ ಕೊಂಕಣಿ ಕೇಂದ್ರ ತಿಳಿಸಿದೆ.

Related Tags: Wilson Kateel, Vimala V Pai Poetry Award, ‘Encounter’, Gajanana Jog, Khand Ani Her Katha, Dr Tanaji Halranakar Goa, Ramana V. Pai Hall, T V Mohandas Pai, Vishwa Konkani Kendra, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ