ಗೌರಿ ಲಂಕೇಶ್‌ಗೆ ಆನಾ ಪೊಲಿತ್ಕೋವಾಸಾಯ ಅಂತಾರಾಷ್ಟ್ರೀಯ ಪ್ರಶಸ್ತಿ
ಪ್ರಶಸ್ತಿಯು ಬರೆಯುವ ಹಾಗೂ ಹೋರಾಡುವ ವ್ಯಕ್ತಿಗಳ ನೈತಿಕತೆ ವರ್ಧಿಸಲಿದೆ. ನನ್ನನ್ನು ಮೌನವಾಗಿರಿಸಲು ಸಾಧ್ಯವಿಲ್ಲ ಎಂಬ ಗೌರಿ ಅವರ ನಿಲುವಿಗೆ ಈ ಪ್ರಶಸ್ತಿ ಎಂದಿದ್ದಾರೆ ಕವಿತಾ ಲಂಕೇಶ್.

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ನಿರ್ಭೀತ ಪತ್ರಕರ್ತೆ, ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರಿಗೆ ಆನಾ ಪೊಲಿತ್ಕೋವಾಸಾಯ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಿಸಲಾಗಿದೆ.

ರೀಚ್ ಆಲ್ ಉಮನ್ ಇನ್ ವಾರ್ ಕೊಡಮಾಡುವ ಈ ಪ್ರಶಸ್ತಿಯನ್ನು ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿರುವ ಗುಲಾಲೆಯ್ ಇಸ್ಮಾಯಿಲ್ ಕೂಡ ಹಂಚಿಕೊಂಡಿದ್ದಾರೆ.

ವಾಯವ್ಯ ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರ ವಿರುದ್ಧ ದನಿ ಎತ್ತಿರುವುದಕ್ಕಾಗಿ ಇಸ್ಮಾಯಿಲ್ ಜೀವಬೆದರಿಕೆ ಎದುರಿಸಿದ್ದರು. ಪ್ರಶಸ್ತಿಯನ್ನು ಗೌರಿ ಲಂಕೇಶ್ ಜೊತೆ ಹಂಚಿಕೊಂಡ ಇಸ್ಮಾಯಿಲ್, ಗೌರಿ ಹತ್ಯೆ ಸುದ್ದಿ ತಿಳಿದು ನಾನು ದು:ಖಿತಳಾದೆ ಎಂದಿದ್ದಾರೆ. ಪ್ರಶಸ್ತಿಯು ನಮ್ಮ ಸಮಾನ ಹೋರಾಟ, ಧೈರ್ಯವನ್ನು ಗುರುತಿಸಿದೆ ಎಂದಿದ್ದಾರೆ.

ಬಲಪಂಥೀಯ ಉಗ್ರವಾದದ ವಿರುದ್ಧ ನಿರ್ಭೀತ ಪತ್ರಿಕೋದ್ಯಮ, ದಲಿತ ಹಕ್ಕುಗಳ ಪರ ಹೋರಾಟ, ಮಹಿಳಾ ಹಕ್ಕುಗಳ ಪರ ಹೋರಾಟ, ಜಾತಿ ವ್ಯವಸ್ಥೆ ವಿರುದ್ಧ ಹೋರಾಟದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯನ್ನು ಪಡೆಯುತ್ತಿರುವ ಮೊದಲ ಭಾರತೀಯರು ಎಂಬ ಹೆಗ್ಗಳಿಕೆಗೆ ಗೌರಿ ಲಂಕೇಶ್ ಪಾತ್ರರಾಗಿದ್ದಾರೆ. ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ ಐದರಂದು ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲೆಗೈಯಲಾಗಿತ್ತು.


ಮಾನವ ಹಕ್ಕುಗಳು ಮತ್ತು ನ್ಯಾಯದ ಪರವಾಗಿ ಹೋರಾಟ ನಡೆಸುವ ದಿಟ್ಟ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ರಷ್ಯಾದಿಂದ ಇ ಮೇಲ್ ಮೂಲಕ ನಮಗೆ ಈ ಮಾಹಿತಿ ಲಭ್ಯವಾಗಿದೆ. ಲಂಡನ್ ಮೂಲದ ರಾ ಇನ್ ವಾರ್ ವೇದಿಕೆ ಈ ಪ್ರಶಸ್ತಿಯನ್ನು ನೀಡುತ್ತಿದೆ ಎಂದು ಗೌರಿ ಸಹೋದರಿ ಕವಿತಾ ಲಂಕೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಪ್ರಶಸ್ತಿಯು ಬರೆಯುವ ಹಾಗೂ ಹೋರಾಡುವ ವ್ಯಕ್ತಿಗಳ ನೈತಿಕತೆ ವರ್ಧಿಸಲಿದೆ ಎಂದು ಕವಿತಾ ಲಂಕೇಶ್ ಹೇಳಿದ್ದಾರೆ. ನೀವು ನನ್ನನ್ನು ಮೌನವಾಗಿರಿಸಲು ಸಾಧ್ಯವಿಲ್ಲ ಎಂಬ ಗೌರಿ ಅವರ ನಿಲುವಿಗೆ ಈ ಪ್ರಶಸ್ತಿ ಸಂದಿದೆ ಎಂದು ಅವರು ಹೇಳಿದ್ದಾರೆ.

ರಷ್ಯಾದ ತನಿಖಾ ಪತ್ರಕರ್ತೆ, ನಲವತ್ತೆಂಟು ವಯಸ್ಸಿನ ಆನಾ ಪೊಲಿತ್ಕೋವಾಸ್ಕಾಯ ಅವರನ್ನು 2006ರ ಅಕ್ಚೋಬರ್ 7 ರಂದು ಅವರ ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆ ಮಾಡಲಾದ ಬಳಿಕ ಹೋರಾಟ ನಡೆಸುವ ಮಹಿಳೆಯರಿಗೆ ಗೌರವ ನೀಡಲೆಂದು ದಿಟ್ಟ ಮಹಿಳೆಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ರಷ್ಯಾದ ಭ್ರಷ್ಟಾಚಾರ ಮತ್ತು ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಅವರು ದನಿ ಎತ್ತಿದ್ದರ ನೆನಪಿಗೆ ರಾ ಇನ್ ವಾರ್ ಪ್ರಶಸ್ತಿ ಸ್ಥಾಪಿಸಲಾಗಿದೆ.


ಇಂದು ಹೆಚ್ಚು ಓದಿದ ಸುದ್ದಿಗಳು
►►ಪಡಿತರ ವಿತರಣೆಯಲ್ಲಿ ಉ.ಕ ಜಿಲ್ಲೆ ರಾಜ್ಯದಲ್ಲೆ ಪ್ರಥಮ: ಖಾದರ್:
http://bit.ly/2y4PpfV
►►ಮಂಗಳೂರಿನಲ್ಲಿ ಐಸಿಸ್ ತರಬೇತಿ ಎಂದವರ ತನಿಖೆಯಾಗಲಿ: ಖಾದರ್: http://bit.ly/2yLjzlA
►►ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಕಂಡಿದ್ದ ವಿದ್ಯಾರ್ಥಿ: http://bit.ly/2ysa3aI
►►ಭೀಕರ ಅಪಘಾತ: ಟ್ರಕ್-ಕಾರು ಢಿಕ್ಕಿ. ನಾಲ್ವರು ವಿದ್ಯಾರ್ಥಿಗಳ ಸಾವು: http://bit.ly/2xkhIaR

Related Tags: Activist Journalist Gauri Lankesh, Gauri Lankesh, Russian Investigative Reporter, Pakistani Activist Gulalai Ismail, Anna Politkovskaya Award, Kavitha lankesh, Bengaluru, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ