ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಕಂಡಿದ್ದ ವಿದ್ಯಾರ್ಥಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ನಿರ್ಭೀತ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆಗೈದು ಪರಾರಿಯಾಗುತ್ತಿದ್ದ ಹಂತಕನನ್ನು ನೋಡಿದ ಪತ್ರಿಕೋದ್ಯಮ ವಿದ್ಯಾರ್ಥಿಯೋರ್ವನನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಅಂದು ರಾತ್ರಿ ಕರೆಂಟ್ ಇರಲಿಲ್ಲ. ಮನೆಯೊಂದರ ಗೇಟ್ ತೆಗೆದು ಹೊರಬಂದ ಸುಮಾರು 5.3 ಅಡಿ ಎತ್ತರದ ವ್ಯಕ್ತಿಯೊಬ್ಬ, ಇನ್ನೊಬ್ಬನ ಜತೆ ಬೈಕ್‌ನಲ್ಲಿ ಹೊರಟು ಹೋದ. ಇಬ್ಬರೂ ಹೆಲ್ಮೆಟ್ ಧರಿಸಿದ್ದರು. ಹೀಗಾಗಿ, ಚಹರೆ ಸ್ಪಷ್ಟವಾಗಿ ಕಾಣಲಿಲ್ಲ.

ಕೆಂಪು ಬಣ್ಣದ ಬೈಕ್ ಅದಾಗಿದ್ದು, ಪಲ್ಸರ್, ಡಿಸ್ಕವರಿ ಅಥವಾ ಪ್ಯಾಷನ್ ಬೈಕ್ ಇರಬಹುದು. ನೋಂದಣಿ ಸಂಖ್ಯೆ ಕತ್ತಲಲ್ಲಿ ಕಾಣಿಸಲಿಲ್ಲ ಎಂದು ವಿದ್ಯಾರ್ಥಿ ಹೇಳಿಕೆ ಕೊಟ್ಟಿದ್ದಾನೆ. ಹಂತಕ ಹೋಗುವಾಗ ಹಿಂದೆ ತಿರುಗಿ ವಿದ್ಯಾರ್ಥಿ ಹಾಗೂ ಕಾರ್ಮಿಕರನ್ನು ನೋಡಿಕೊಂಡು ಹೋಗಿದ್ದ.

ರಾಜರಾಜೇಶ್ವರಿನಗರ ಸಮೀಪದ ಐಡಿಯಲ್ ಹೋಮ್ಸ್ ಟೌನ್‌ಶಿಪ್ ವಿದ್ಯಾರ್ಥಿ, ಸೆ.5ರ ರಾತ್ರಿ 7.50ರ ಸುಮಾರಿಗೆ ಗೌರಿ ಅವರ ಮನೆ ಮುಂದೆ ನಡೆದು ಹೋಗುತ್ತಿದ್ದ. ಅವನ ಪಕ್ಕದಲ್ಲಿ ಮೂವರು ಕಟ್ಟಡ ಕಾರ್ಮಿಕರಿದ್ದರು.

ಇದೇ ವೇಳೆ ಗೌರಿ ಅವರ ಮನೆಯ ಗೇಟ್ ತೆಗೆದು ಹೊರ ಬಂದ ಹಂತಕ, ಸಹಚರನ ಜತೆ ಬೈಕ್‌ನಲ್ಲಿ ಪರಾರಿಯಾಗಿದ್ದ. ಅದು ಗೌರಿ ಲಂಕೇಶ್ ಮನೆ ಎಂಬುದು ವಿದ್ಯಾರ್ಥಿಗೆ ಮೊದಲು ತಿಳಿದಿರಲಿಲ್ಲ.


ಗೌರಿ ಮನೆಯಲ್ಲಿದ್ದ ಎರಡು ಕ್ಯಾಮೆರಾಗಳಲ್ಲಿ ಆ ವಿದ್ಯಾರ್ಥಿ ಹಾಗೂ ಕಾರ್ಮಿಕರ ದೃಶ್ಯ ಸೆರೆಯಾಗಿಲ್ಲ. ಆದರೆ, ರಸ್ತೆ ಕೊನೆಯ ಕಟ್ಟಡವೊಂದರಲ್ಲಿದ್ದ ಕ್ಯಾಮೆರಾದಲ್ಲಿದೆ.

ವಿದ್ಯಾರ್ಥಿಯನ್ನು ಕರೆಸಿ ವಿಚಾರಣೆ ನಡೆಸಿದ ಸಂದರ್ಭ ಹತ್ಯೆ ನಡೆದ ಸಮಯದಲ್ಲಿ ನಾನು ಆ ರಸ್ತೆಯಲ್ಲೇ ಹೋಗಿರಲಿಲ್ಲ. ನನಗೇನೂ ಗೊತ್ತಿಲ್ಲ ಎಂದು ಆರಂಭದಲ್ಲಿ ಹೇಳಿಕೆ ಕೊಟ್ಟಿದ್ದ. ಸಿ.ಸಿ ಟಿ.ವಿ ಕ್ಯಾಮೆರಾ ದೃಶ್ಯ ತೋರಿಸಿದಾಗ, ಅದರಲ್ಲಿರುವವನು ನಾನೇ ಎಂದು ಅಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ.

ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಬಗ್ಗೆ ಖಚಿತ ಸುಳಿವು ಸಿಕ್ಕಿದೆ ಎಂದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇತ್ತೀಚೆಗೆ ಹೇಳಿದ್ದಾರೆ.

ಅವರನ್ನು ಯಾರು ಹತ್ಯೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಾಗಿದೆ ಸದ್ಯ ವಿಶೇಷ ತನಿಖಾ ತಂಡ(ಎಸ್ಐಟಿ) ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದೆ ಎಂದಿದ್ದಾರೆ.

ಗೌರಿ ಲಂಕೇಶ್ ಹಂತಕರ ಸುಳಿವಿನ ಬಗ್ಗೆ ಮಾಧ್ಯಮಗಳಿಗೆ ಈ ಹಂತದಲ್ಲಿ ಮಾಹಿತಿ ನೀಡಲು ಆಗುವುದಿಲ್ಲ. ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸದೆ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದರೆ ಪ್ರಕರಣ ಬಿದ್ದು ಹೋಗುತ್ತದೆ. ಆದ್ದರಿಂದ ಸಾಕ್ಷ್ಯಾಧಾರ ಸಂಗ್ರಹಿಸಿ ಬಳಿಕವಷ್ಟೇ ಮಾಹಿತಿ ನೀಡುವುದಾಗಿ ಸಚಿವರು ಸ್ಪಷ್ಟಪಡಿಸಿದ್ದರು.

ಪತ್ರಕರ್ತೆ ಗೌರಿ ಲಂಕೇಶ್ ಕೊಲೆಗೆ ಬಳಸಲಾದ ಪಿಸ್ತೂಲ್ ವಿಜಯಪುರದಿಂದ ರವಾನೆಯಾಗಿರುವ ಶಂಕೆ ಮೂಡಿದ್ದು ಎಸ್ಐಟಿ ಅಧಿಕಾರಿಗಳ ತಂಡ ವಿಜಯಪುರದಲ್ಲಿ ತನಿಖೆ ನಡೆಸಿತ್ತು. ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆಯಾಗಿದೆ ಎಂದು ಎಫ್ಎಸ್ಎಲ್ ವರದಿ ಕೊಟ್ಟಿದೆ.

ಇದನ್ನೂ ಓದಿ
►►ಗೌರಿ ಲಂಕೇಶ್ ಬರೆದ ಬರೆಹ: ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ!:
http://bit.ly/2wsPLxt
►►ಅಗಲಿದ ಗೌರಿ ಲಂಕೇಶ್ ಹೀಗೆಂದರು: ನಾನು ಮೊದಲಿಗಳೂ ಅಲ್ಲ, ಕೊನೆಯವಳೂ ಅಲ್ಲ: http://bit.ly/2xxrWEz
►►ನನ್ನ ಕೂಸು ಕನ್ಹಯ್ಯ ಮನೆಗೆ ಬಂದಾಗ: ಗೌರಿ ಲಂಕೇಶ್ ಅವರ ಹೃದಯಸ್ಪರ್ಶಿ ಬರಹ: http://bit.ly/2gSaVdI
►►ಗೌರಿ ಲಂಕೇಶ್ ಬರೆಯುತ್ತಾರೆ: "ಸುಳ್ಳು ಸುದ್ದಿಗಳ ಯುಗದಲ್ಲಿ" http://bit.ly/2gy5Omo

ಇದನ್ನೂ ಓದಿ
►►ಗೌರಿ ಲಂಕೇಶ್ ಹತ್ಯೆ: ಪ್ರಧಾನಿ ಮೌನದ ವಿರುದ್ದ ಇಂದು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ:
http://bit.ly/2xSFfiX
►►ಮೋದಿ ವಿರುದ್ಧ ಹೇಳಿಕೆ: ನಟ ಪ್ರಕಾಶ್ ರೈ ವಿರುದ್ದ ದೂರು ದಾಖಲು: http://bit.ly/2koGYXu
►►ಗೌರಿ ಲಂಕೇಶ್ ಕೊಲೆಗಾರರ ಖಚಿತ ಸುಳಿವು: ಗೃಹ ಸಚಿವ: http://bit.ly/2fEXflQ
►►ಗೌರಿ ಲಂಕೇಶ್ ಹತ್ಯೆಗೆ ಸಂಭ್ರಮಿಸುತ್ತಿರುವವರು ಯಾರೆಂದು ಗೊತ್ತಿದೆ: ಪ್ರಕಾಶ್ ರೈ: http://bit.ly/2wrzwg2
►►ಗೌರಿ ಲಂಕೇಶ್ ಹತ್ಯೆ: ಹಂತಕನ ಮುಖ ಎನ್‌ಲಾರ್ಜ್ ಮಾಡಲು ಸಿಸಿಟಿವಿ ಫೂಟೇಜ್ ಅಮೇರಿಕಕ್ಕೆ: http://bit.ly/2xygt4K
►►ಗೌರಿ ಹಂತಕರ ಬೈಕ್ ಸುಳಿವು ಪತ್ತೆ: ಎಲ್ಲಿದೆ ಆ KA-02 ಕೆಂಪು ಪಲ್ಸರ್?: http://bit.ly/2hhmAD8
►►ಗೌರಿ ಲಂಕೇಶ್ ಹತ್ಯೆ: ತನಿಖೆಯ ಜಾಡು ಕೊನೆಗೂ ಸನಾತನ ಸಂಸ್ಥೆಯತ್ತ: http://bit.ly/2wwth9K
►►ಗೌರಿ ಹತ್ಯೆಯಲ್ಲಿ ನಕ್ಸಲರ ಕೈವಾಡ ಇಲ್ಲ. ಇದು ಆರೆಸ್ಸೆಸ್‌ನ ಕೃತ್ಯ: ವರವರರಾವ್: http://bit.ly/2ybNlAq
►►ಇಂದ್ರಜಿತ್‌ ಹೇಳಿಕೆಯಲ್ಲಿ ಗೊಂದಲ: ಮತ್ತೆ ವಿಚಾರಣೆಗೆ ಕರೆಯಲು ಎಸ್ಐಟಿ ಸಿದ್ಧತೆ: http://bit.ly/2x6q30p
►►ಗೌರಿ ಲಂಕೇಶ್ ಹತ್ಯೆ: ತನಿಖೆಗೆ ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರ ನೆರವು: http://bit.ly/2x6q30p
►►ಗೌರಿ ಲಂಕೇಶ್ ಹತ್ಯೆಗೆ ಪ್ರತಿರೋಧ: ಶಿವಮೊಗ್ಗದಲ್ಲಿ ಪಂಜಿನ ಮೆರವಣಿಗೆಗೆ ಭಾರೀ ಜನಸ್ಪಂದನ: http://bit.ly/2x4aBBM
►►'ನಾನೂ ಗೌರಿ' ರಾಜ್ಯ ಸರ್ಕಾರದ ಪ್ರಾಯೋಜಿತ ಸಮಾವೇಶ: ಬಿಜೆಪಿ ವಕ್ತಾರ ಸುರೇಶ್: http://bit.ly/2h3JOMV
►►ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆಗೆ ಬಳಸಿದ್ದು ಒಂದೇ ಪಿಸ್ತೂಲು? http://bit.ly/2h0krPx
►►ಗೌರಿಯ ಕೊಲೆ ಮಾಡಿದ್ದು ಹಿಂದೂ ಮೂಲಭೂತವದಿಗಳು: ಮೇಧಾ ಪಾಟ್ಕರ್: http://bit.ly/2gYoBrk
►►ಹಿಂದೂತ್ವದ ಭಯೋತ್ಪಾದಕರಿಂದ ಗೌರಿ ಹತ್ಯೆ: ನಿಡುಮಾಮಿಡಿ ಸ್ವಾಮೀಜಿ: http://bit.ly/2wXd8O0
►►ಗೌರಿ ಹತ್ಯೆಯಲ್ಲಿ ಸಂಘ ಪರಿವಾರದ ಕೈವಾಡದ ಸಾಧ್ಯತೆ: ನೂರ್ ಶ್ರೀಧರ್, ಸಿರಿಮನೆ ನಾಗರಾಜ್: http://bit.ly/2wWymtR
►►ಗೌರಿ ಹತ್ಯೆಯ ತಕ್ಷಣ ಸಮರ್ಥನೆ. ಹಿಂದೂತ್ವವಾದಿಗಳಿಗೆ ಹತ್ಯೆಯ ಬಗ್ಗೆ ಮೊದಲೇ ತಿಳಿದಿತ್ತೆ?: http://bit.ly/2xZT4t9
►►ಗೌರಿ ಲಂಕೇಶ್ ಹತ್ಯೆ: ನಾಳೆ ಬೆಂಗಳೂರಿನಲ್ಲಿ ಪ್ರತಿರೋಧ ಸಮಾವೇಶ: http://bit.ly/2wRKPS3
►►ಅಂದು ಗೌರಿಯ ನೆತ್ತಿಯತ್ತ ಪಿಸ್ತೂಲನ್ನು ಗುರಿ ಮಾಡಿದ್ದ ಇಂದ್ರಜಿತ್ ಲಂಕೇಶ್!: http://bit.ly/2wSifxm
►►ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಚುರುಕು: ಮರ್ಡರ್ ಸೀನ್ ಮರುಸೃಷ್ಟಿ: http://bit.ly/2vMwItp
►►ಸಿಬಿಐ ಮೇಲೆ ನಂಬಿಕೆ ಇಲ್ಲ. ಎಸ್ಐಟಿ ತನಿಖೆ ಸಾಕು: ಇಂದಿರಾ ಲಂಕೇಶ್: http://bit.ly/2xXeVBs
►►ಸೋಷಿಯಲ್ ಮೀಡಿಯಾದ ಜನರಿಗೆ ಗೌರಿಯ ಅಂತಃಕರಣದ ಅರಿವಿಲ್ಲ: ಗೌರಿ ಆಪ್ತ ಶಶಿಧರ ಹೆಮ್ಮಾಡಿ: http://bit.ly/2vLUFRP
►►ಗೌರಿ ಲಂಕೇಶ್ ಹಂತಕರ ಸುಳಿವು ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ: http://bit.ly/2gOCO6u
►►ಗೌರಿ ಲಂಕೇಶ್ ಹತ್ಯೆ: ಟ್ವಿಟರ್ನಲ್ಲಿ ನಡೆಯುತ್ತಿದೆ #BlockNarendraModi ಅಭಿಯಾನ: http://bit.ly/2xRDDTs
►►ಗೌರಿ ಲಂಕೇಶ್ ಮತ್ತು ಸ್ವಾಮೀಜಿಯ ಬ್ಯಾನರ್ ಹರಿದ ಬಿಜೆಪಿ ಕಾರ್ಯಕರ್ತರು: http://bit.ly/2xdrP0S
►►ವಿಚಾರಗಳಿಗಾಗಿಯೇ ಗೌರಿ ಲಂಕೇಶ್ ಹತ್ಯೆಯಾಗಿರಬಹುದು: ಕವಿತಾ ಲಂಕೇಶ್: http://bit.ly/2wb5oEC
►►ಕುಟುಂಬದವರು ಒತ್ತಾಯಿಸಿದರೆ ಸಿಬಿಐಗೆ ವಹಿಸಲು ಸಿದ್ದ: ಸಿಎಂ ಸಿದ್ದರಾಮಯ್ಯ: http://bit.ly/2wIJlIJ
►►ರೆಬೆಲ್ ಹುಡುಗಿ ಗೌರಿಯ ಕಥೆಯನ್ನು ಮಗಳಿಗೆ ಹೇಳಬೇಕಾಗಿದೆ: http://bit.ly/2xcuTKK
►►ಆಸ್ತಿಗಾಗಿ ಕೊಲೆಯಾಗಿಲ್ಲ, ವಿಚಾರಗಳಿಗಾಗಿ ಕೊಲೆಯಾಗಿದ್ದಾರೆ: ಚಿಂತಕ ಪ್ರೊ. ಫಣಿರಾಜ್: http://bit.ly/2gH8tXh
►►ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಉಡುಪಿ ಜಿಲ್ಲಾ ಪತ್ರಕರ್ತರಿಂದ ಪ್ರತಿಭಟನೆ: http://bit.ly/2f3zqEt
►►'ಗೌರಿ ಮತ್ತೆ ಹುಟ್ಟಿ ಬಾ': ಪತ್ರಕರ್ತೆ ಗೌರಿ ಲಂಕೇಶ್ ಅಂತ್ಯಕ್ರಿಯೆಗೆ ಜನಸಾಗರ: http://bit.ly/2xaIsu1
►►ಗೌರಿ ಲಂಕೇಶ್ ಹತ್ಯೆ: ಹಂತಕರ ಪತ್ತೆಗೆ ಮೂರು ತಂಡ ರಚನೆ: http://bit.ly/2xN3ZWI
►►ಪತ್ರಕರ್ತೆ, ಸಂಪಾದಕಿ, ಸಾಹಿತಿ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ: http://bit.ly/2wE3j67

ಇಂದು ಹೆಚ್ಚು ಓದಿದ ಸುದ್ದಿಗಳು
►►ಭೀಕರ ಅಪಘಾತ: ಟ್ರಕ್-ಕಾರು ಢಿಕ್ಕಿ. ನಾಲ್ವರು ವಿದ್ಯಾರ್ಥಿಗಳ ಸಾವು:
http://bit.ly/2xkhIaR
►►ಝುಬೈರ್ ಬರ್ಬರ ಹತ್ಯೆ: ಉಳ್ಳಾಲ ಠಾಣೆಗೆ ಮುತ್ತಿಗೆ: http://bit.ly/2xkYi5J
►►ಸಟ್ವಾಡಿ: ತಡರಾತ್ರಿ ಭೂಮಿಗೆ ಲಗ್ಗೆ, ಬಿಗುವಿನ ವಾತಾವರಣ: http://bit.ly/2xjOrbz
►►ಭೀಕರ ದುರಂತ! ಸಿಡಿಲು ಬಡಿದು ಆರು ಮಂದಿ ದುರ್ಮರಣ: http://bit.ly/2xhPePn

Related Tags: Gauri Lankesh Murder, Clues, Kannada News, Karnataka News, Karavali Karnataka, Latest Kannada News, ಕರಾವಳಿ ಕರ್ನಾಟಕ, ರಾಮಲಿಂಗಾ ರೆಡ್ಡಿ, ಗೌರಿ ಲಂಕೇಶ್ ಹತ್ಯೆ, ಹಂತಕನ ಸುಳಿವು, ವಿದ್ಯಾರ್ಥಿ ವಿಚಾರಣೆ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ