ಟ್ರಕ್-ಕಾರು ಢಿಕ್ಕಿ: ನಾಲ್ವರು ವಿದ್ಯಾರ್ಥಿಗಳ ಸಾವು

ಕರಾವಳಿ ಕರ್ನಾಟಕ ವರದಿ

ರಾಮನಗರ:
ತಾಲೂಕಿನ ಕೆಂಪನಹಳ್ಳಿ ಗೇಟ್ ಬಳಿ ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ನಸುಕಿನಲ್ಲಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಜೊಹಿಲ್ ಜಾಕೊಬ್ (21), ನಿಖಿಲ್ ಸುದೀಪ್ (21) , ಜೀನಾ ಯಲ್ಡೊ ಮತ್ತು ದಿವ್ಯಾ (21) ಮೃತರು. ಎಲ್ಲರೂ 21 ವಯಸ್ಸಿನವರಾಗಿದ್ದು, ಕೇರಳ ಮೂಲದವರಾಗಿದ್ದಾರೆ.

ಮೃತರಲ್ಲಿ ಇಬ್ಬರು ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇನ್ನಿಬ್ಬರು ತಮಿಳುನಾಡಿನ ವೆಲ್ಲೂರಿನ ವಿಐಟಿ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಅಪಘಾತದಲ್ಲಿ ನಾಲ್ವರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೆಳಿಗ್ಗೆ 3.30ರ ಸುಮಾರಿಗೆ ಇವರೆಲ್ಲರೂ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿನ ಕಡೆಗೆ ಹೊರಟಿದ್ದಾಗ ಟ್ರಕ್ ಢಿಕ್ಕಿ ಹೊಡೆದಿದೆ. ರಾಮನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಲಿಪುರ್ ಎಂಬಲ್ಲಿ ಇಟ್ಟಿಗೆ ಸಾಗಾಟದ ಟ್ರಕ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಬಿಟೆಕ್ ವಿದ್ಯಾರ್ಥಿಗಳು ಸಾವಪ್ಪಿದ್ದು, ಏಳು ಮಂದಿ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದನ್ನು ಸ್ಮರಿಸಬಹುದಾಗಿದೆ.
ಅಪಘಾತದ ರಭಸಕ್ಕೆ ನೊಯ್ಡಾದ ಅಮಿಟ್ಟಿ ವಿವಿಯ ವಿದ್ಯಾರ್ಥಿಗಳು ಎಸ್.ಯು.ವಿ ಸ್ಕೊರ್ಪಿಯೋದಿಂದ ಹೊರಗೆಸೆಯಲ್ಪಟ್ಟಿದ್ದರು. ಬಾಡಿಗೆಗೆ ಸ್ಕೊರ್ಪಿಯೋ ಕಾರನ್ನು ಪಡೆದು ಅದನ್ನು ಚಲಾಯಿಸುತ್ತಿದ್ದ ವಿದ್ಯಾರ್ಥಿ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡಾಗ ಅಪಘಾತ ಸಂಭವಿಸಿತ್ತು.

ಈ ಅಪಘಾತದ ಗಾಯಾಳುಗಳನ್ನು ಯಾರೂ ಆಸ್ಪತ್ರೆಗೆ ದಾಖಲಿಸದೇ ಫೋಟೋ ಮತ್ತು ವಿಡಿಯೋ ತೆಗೆಯುತ್ತಿದ್ದರು ಎಂಬುದು ಭಾರೀ ಸುದ್ದಿಯಾಗಿತ್ತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಝುಬೈರ್ ಬರ್ಬರ ಹತ್ಯೆ: ಉಳ್ಳಾಲ ಠಾಣೆಗೆ ಮುತ್ತಿಗೆ:
http://bit.ly/2xkYi5J
►►ಸಟ್ವಾಡಿ: ತಡರಾತ್ರಿ ಭೂಮಿಗೆ ಲಗ್ಗೆ, ಬಿಗುವಿನ ವಾತಾವರಣ: http://bit.ly/2xjOrbz
►►ಭೀಕರ ದುರಂತ! ಸಿಡಿಲು ಬಡಿದು ಆರು ಮಂದಿ ದುರ್ಮರಣ: http://bit.ly/2xhPePn

Related Tags: Ramanagara, Truck Hits Car, Four Students Killed, Accident, Kannada News, Karnataka News, Karavali Karnataka, Latest Kannada News, ಟ್ರಕ್-ಕಾರು ಢಿಕ್ಕಿ, ನಾಲ್ವರು ವಿದ್ಯಾರ್ಥಿಗಳ ಸಾವು, ರಾಮನಗರ ಪೊಲೀಸ್, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ