ಜೆಟ್ ಏರ್‌ವೇಸ್: ಬೆಂಗಳೂರು- ಅಮ್ಸ್ಟರ್‌ಡ್ಯಾಂ ವಿಮಾನ ಸೇವೆ
ನೆದರ್ ಲ್ಯಾಂಡ್ ರಾಜಧಾನಿ ಅಮ್ಸ್ಟರ್‌ಡ್ಯಾಂಗೆ ಜೆಟ್ ಏರ್‌ವೇಸ್ ನೇರ ವಿಮಾನ ಸೇವೆ ಅ.29ರಿಂದ ಆರಂಭ.

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಭಾರತದ ಅಗ್ರಗಣ್ಯ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಸಂಸ್ಥೆಯಾದ ಜೆಟ್ ಏರ್‌ವೇಸ್ ಬೆಂಗಳೂರು ಮತ್ತು ನೆದರ್ ಲ್ಯಾಂಡ್ ರಾಜಧಾನಿ ಅಮ್ಸ್ಟರ್ ಡ್ಯಾಂಗೆ ನೇರ ವಿಮಾನ ಸೇವೆಯನ್ನು ಅ.29ರಿಂದ ಆರಂಭಿಸಲಿದೆ.

ಪ್ರತಿ ದಿನ ಬೆಳಗ್ಗೆ 2.30ರಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಜೆಟ್ ಏರ್‌ವೇಸ್ 9ಡಬ್ಲ್ಯೂ 235 ವಿಮಾನ ಹೊರಟು, 8.45ಕ್ಕೆ ಅಮ್ಸ್ಟರ್‌ಡ್ಯಾಂ ತಲುಪಲಿದೆ.

ಉದ್ಘಾಟನೆ ಕೊಡುಗೆಯಾಗಿ ಬೆಂಗಳೂರಿನಿಂದ ಅಮ್ಸ್ಟರ್‌ಡ್ಯಾಂಗೆ ಹೋಗಿ ಬರಲು ಎಕನಾ ಮಿಕ್ ಕ್ಲಾಸ್‌ಗೆ 39,999 ರೂ. ಹಾಗೂ ಬಿಸ್‌ನೆಸ್ ಕ್ಲಾಸ್‌ಗೆ 1.20 ಲಕ್ಷ ರೂ. ನಿಗದಿ ಮಾಡಲಾಗಿದೆ.

ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿನಯ್ ದುಬೆ, ಪ್ರಯಾಣಿ ಕರಿಗೆ ಉತ್ಕೃಷ್ಟ ಸೇವೆ ಒದಗಿಸುವುದೇ ಸಂಸ್ಥೆಯ ಮೂಲ ಉದ್ದೇಶ ಎಂದು ಸುದ್ದಿಗೋಷ್ಠಿಯಲ್ಲಿ ಈ ನೂತನ ಸೇವೆಯ ನುಡಿದರು.

ಜೆಟ್ ಏರ್‌ವೇಸ್ ಅಮ್ಸ್ಟರ್‌ಡ್ಯಾಂಗೆ ಬೆಂಗಳೂರಿನ ಮೂಲಕ ಮಂಗಳೂರು, ಕೋಯಿಕೊಡ್, ಕೊಯಮತ್ತೂರು, ಕೊಲಂಬೊ, ಹೈದರಾಬಾದ್, ಮುಂಬೈ, ಪುಣೆ ಹಾಗೂ ತಿರುವನಂತಪುರ ಸೇರಿ 9 ತಾಣಗಳಿಂದ ಸಂಪರ್ಕ ಕಲ್ಪಿಸುತ್ತಿದೆ.


ಅಮ್ಸ್ಟರ್‌ಡ್ಯಾಂನಿಂದ ಯುರೋಪ್ ಮತ್ತು ದಕ್ಷಿಣ ಅಮೆರಿಕಕ್ಕೂ ಸಂಪರ್ಕ ಸೇವೆ ಒದಗಿಸುತ್ತಿದೆ. ಅಮ್ಸ್ಟರ್‌ಡ್ಯಾಂನಿಂದ 64 ತಾಣಗಳಿಗೆ ಏರ್ ಫ್ರಾನ್ಸ್, ಕೆಎಲ್ಎಂ, ರಾಯಲ್ ಡಚ್ ಏರ್ಲೈನ್ಸ್, ಡೆಲ್ಟಾ ಏರ್ಲೈನ್ಸ್ ಸಹಯೋಗ ದೊಂದಿಗೆ ಸೇವೆ ಒದಗಿಸಲಿದೆ ಎಂದು ದುಬೆ ವಿವರಿಸಿದರು.

ಭಾರತದಿಂದ ನೆದರ್ ಲ್ಯಾಂಡ್ ಹಾಗೂ ಯುರೋಪ್ ದೇಶಕ್ಕೆ ಬರುವ, ಮತ್ತು ತೆರಳುವ  ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಮತ್ತು ಪ್ರವಾಸೋದ್ಯಮ ಕೂಡ ಬಿರುಸಾಗಿದೆ.

ಯುರೋಪ್ ಖಂಡಕ್ಕೆ ರಫ್ತಾಗುವ ಸರಕುಗಳಲ್ಲಿ ಶೇ.20ರಷ್ಟು ನೆದರ್ಲ್ಯಾಂಡ್‌ಗೆ ಬರುತ್ತಿದೆ. ನೆದರ್ಲ್ಯಾಂಡ್‍ಗೆ ಬರುವ ಪ್ರವಾಸಿಗರ ಸಂಖ್ಯೆ ವಾರ್ಷಿಕ ಶೇ.25ರಷ್ಟು ಏರಿಕೆಯಾಗುತ್ತಿದೆ. 2017ರಲ್ಲಿ ಶೇ.30ರಷ್ಟು ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಭಾರತದ ನೆದರ್ಲ್ಯಾಂಡ್  ರಾಯಭಾರಿ ಅಲ್ಪೋನುಸ್ ಎಚ್. ಎಂ.ಸ್ಟೊಲಿಂಗಾ ಹೇಳಿದರು.

ಜೆಟ್ ಏರ್ವೇಸ್  ಪ್ರಧಾನ ವ್ಯವಸ್ಥಾಪಕ (ದಕ್ಷಿಣ) ಯು.ಹರೀಶ್ ಶೆಣೈ, ವಾಣಿಜ್ಯ ಮತ್ತು ಮಾರಾಟ ವಿಭಾಗದ ಉಪಾಧ್ಯಕ್ಷ ಪ್ರವೀಣ್ ಅಯ್ಯರ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:
►►ಜೆಟ್ ಏರ್ವೇಸ್ ‘ದಿವಾಳಿ ಧಮಾಕಾ: ಆಕರ್ಷಕ ದರ ಕಡಿತ
http://bit.ly/2kiPF5T

Related Tags: Jet Airways, Jet Airways Bengaluru to Aamsterdam, JET AIRWAYS , ‘Think Home, Think Jet Airways’, Karavali Karnataka News, Karavalikarnataka, Kuwait News., ಕರಾವಳಿ ಕರ್ನಾಟಕ ಸುದ್ದಿ, ಜೆಟ್ ಏರ್ವೇಸ್ ಸುದ್ದಿ, ಜೆಟ್ ಏರ್ವೇಸ್: ಬೆಂಗಳೂರು- ಅಮ್ಸ್ಟರ್ ಡ್ಯಾಂ ವಿಮಾನ , ಕನ್ನಡ ಸುದ್ದಿ, ಕರಾವಳಿಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ