ಭೀಕರ ದುರಂತ! ಸಿಡಿಲು ಬಡಿದು ಆರು ಮಂದಿ ದುರ್ಮರಣ

ಕರಾವಳಿ ಕರ್ನಾಟಕ ವರದಿ

ಮೈಸೂರು:
ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು 6 ಮಂದಿ ದಾರುಣವಾಗಿ ಸಾವನ್ನಪ್ಪಿರುವ ದುರ್ಘ‌ಟನೆ ಗುರುವಾರ ಮಧ್ಯಾಹ್ನ ನಂದಿನಾಥಪುರದಲ್ಲಿ ನಡೆದಿದೆ.

ಹುಣಸವಾಡಿ ನಿವಾಸಿಗಳಾದ ಪುಟ್ಟಣ್ಣ(60), ಸುವರ್ಣಮ್ಮ(45), ಸುದೀಪ್ ಹಾಗೂ ತಿಮ್ಮೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರಾದ ಸುಜಯ್(18) ಮತ್ತು ಉಮೇಶ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ ಎಂದು ಹೇಳಲಾಗಿದೆ. ನಾಲ್ವರು ಸಿಡಿಲಿನಾಘಾತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಪಿರಿಯಾರಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.


ಇಂದು ಹೆಚ್ಚು ಓದಿದ ಸುದ್ದಿಗಳು
►►ನದಿಯಲ್ಲಿ ಯುವಕನ ಶವ ಪತ್ತೆ: ಕುಟುಂಬಿಕರಿಂದ ಕೊಲೆ ಶಂಕೆ:
http://bit.ly/2gdOjVi
►►ಉಳ್ಳಾಲ ಗ್ಯಾಂಗ್‌ವಾರ್: ಯುವಕನ ಬರ್ಬರ ಕೊಲೆ: http://bit.ly/2xWPO25
►►ಮೋದಿ ವಿರುದ್ಧ ಹೇಳಿಕೆ: ನಟ ಪ್ರಕಾಶ್ ರೈ ವಿರುದ್ದ ದೂರು ದಾಖಲು: http://bit.ly/2koGYXu
►►ಮರೆಯಾದ ಯಕ್ಷರಂಗದ ಮಾಣಿಕ್ಯ ಚಿಟ್ಟಾಣಿ ರಾಮಚಂದ್ರ ಹೆಗಡೆ: http://bit.ly/2kkVYpp

Related Tags: Mysore Lightning, Six Death, Piriyapattana Police, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ