ಕುಡಿದ ಮತ್ತಿನಲ್ಲಿ ಅಪಘಾತ: ನಾಪತ್ತೆಯಾಗಿದ್ದ ಗೀತ ವಿಷ್ಣು ಬಂಧನ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಕಾರು ಅಪಘಾತ ಎಸಗಿ  ಆಸ್ಪತ್ರೆಯಿಂದ ಪರಾರಿಯಾಗಿದ್ದ ಉದ್ಯಮಿ ಆದಿಕೇಶವಲು ಮೊಮ್ಮಗ ಗೀತ ವಿಷ್ಣುವನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಗೀತ ವಿಷ್ಣು ಬಂಧನವನ್ನು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ನಂತರ ಮತ್ತಷ್ಟು ಮಾಹಿತಿಗಳನ್ನು ಬಹಿರಂಗ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಸಿಸಿಬಿ ಎಸಿಪಿ ಎದುರು ಗೀತ ವಿಷ್ಣು ಶರಣಾಗಿರುವುದಾಗಿ ಮೂಲಗಳು ತಿಳಿಸಿವೆ. ಯಾರೋ ಒಬ್ಬರು ಟೆಲಿಫೋನ್ ಬೂತ್ ನಿಂದ ಕರೆ ಮಾಡಿ ವಿಷ್ಣು ಇರುವ ಸ್ಥಳದ ಮಾಹಿತಿ ನೀಡಿದರು.

ಕರೆ ಮಾಡಿದ ವ್ಯಕ್ತಿ ಗೀತ ವಿಷ್ಣುವೇ ಆಗಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಬುಧವಾರ ಮಧ್ಯಾಹ್ನದ ನಂತರ ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುವುದು.

ಕಳೆದ ಸೆಪ್ಟಂಬರ್ 28 ರಂದು ಸೌತ್ ಎಂಡ್ ಸರ್ಕಲ್ ನಲ್ಲಿ  ಕಾರು ಅಪಘಾತ ಮಾಡಿದ ಬಳಿಕ ವಿಷ್ಣು ಆಸ್ಪತ್ರೆಗೆ ದಾಖಲಾಗಿದ್ದ. 

ಆತನ ಕಾರಿನಲ್ಲಿ ಪೊಲೀಸರು 300 ಗ್ರಾಂ  ಗಾಂಜಾ ವಶ ಪಡಿಸಿಕೊಂಡಿದ್ದರು.  ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಆತ ಶುಕ್ರವಾರ ಬೆಳಗ್ಗೆ ಅಲ್ಲಿಂದ ಪರಾರಿಯಾಗಿದ್ದ.

ಹಿಂದಿನ ವರದಿ
ಬೆಂಗಳೂರು: ಪಾನಮತ್ತನಾಗಿ ಅಪಘಾತ ಎಸಗಿದ ತಿರುಪತಿ ದೇವಳ ಮಂಡಳಿಯ ಮಾಜಿ ಅಧ್ಯಕ್ಷ, ಹಿರಿಯ ರಾಜಕಾರಣಿಯಾಗಿದ್ದ ಆದಿಕೇಶವಲು ಅವರ ಮೊಮ್ಮಗನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಜಯನಗರ ಸಂಚಾರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕಾರಿನಲ್ಲಿ 110 ಗ್ರಾಂ ಗಾಂಜಾ ಪತ್ತೆಯಾಗಿದ್ದು ಈ ಸಂಬಂಧ  ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಆದಿಕೇಶವಲು ಅವರ ಮೊಮ್ಮಗ ಜಯನಗರ 1ನೇ ಬ್ಲಾಕ್‌ ನಿವಾಸಿ ವಿಷ್ಣು (27) ರಾತ್ರಿ 12.30ರ ಸುಮಾರಿಗೆ ಸೌತ್‌ ಎಂಡ್‌ ವೃತ್ತದಲ್ಲಿ ತನ್ನ ಬೆಂಝ್ ಕಾರನ್ನು ವೇಗವಾಗಿ ಚಲಾಯಿಸಿಕೊಂಡು  ಓಮಿನಿ ವ್ಯಾನ್‌ಗೆ ಡಿಕ್ಕಿ ಮಾಡಿದ್ದಾನೆ. ಗುದ್ದಿದ ರಭಸಕ್ಕೆ ವ್ಯಾನ್‌ನ ಮುಂಭಾಗ ಸಂಪೂರ್ಣ ಜಖಂಗೊಂಡು ಅದರಲ್ಲಿದ್ದ ಚಾಲಕ, ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಅಪಘಾತದ ನಂತರ ಪರಾರಿಯಾಗಲು ಯತ್ನಿಸಿದ ವಿಷ್ಣುನನ್ನು ಸ್ಥಳೀಯರು‌ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಕೋಮೀಟರ್‌ನಿಂದ ತಪಾಸಣೆ ನಡೆಸಿದಾಗ, ‌ವಿಷ್ಣು ದೇಹದಲ್ಲಿ ಮದ್ಯದ ಪ್ರಮಾಣ 150 ಮಿ.ಗ್ರಾಂ ಇತ್ತು. (ಕನಿಷ್ಠ ಮಿತಿ 40 ಮಿ.ಗ್ರಾಂ) ಥಳಿತದಿಂದ ಗಾಯಗೊಂಡಿರುವ ಆತನನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ಕಾರಿನಲ್ಲಿ ಕನ್ನಡದ ಖ್ಯಾತ ಚಿತ್ರ ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಸಹ ಇದ್ದರು ಎಂಬ ಸ್ಥಳೀಯರ ಹೇಳಿಕೆ ಆಧರಿಸಿ ಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾನು ಕಾರು ಚಾಲನೆ ಮಾಡಿಲ್ಲ. ಸ್ನೇಹಿತನ ಮನೆಯಲ್ಲಿ ನನ್ನ ಒಂದು ಮೊಬೈಲ್ ಬಿಟ್ಟು ಬಂದಿದ್ದೆ. ಅದನ್ನು ತೆಗೆದುಕೊಂಡು ಬರಲು ಪುನಃ ಸಂತೋಷ್‌ನನ್ನು ಕರೆದುಕೊಂಡು ಹೊರಟಿದ್ದೆ. ಈ ವೇಳೆ ಕಾರು ಚಾಲನೆ ಮಾಡುತ್ತಿದ್ದ ಸಂತೋಷ್ ಸೌತ್‌ ಎಂಡ್‌ ವೃತ್ತದಲ್ಲಿ ಒಮ್ಮೆಲೆ ಎದುರಾದ ವ್ಯಾನ್‌ಗೆ ಡಿಕ್ಕಿ ಮಾಡಿದ. ನಂತರ ಕಾರು ಪಾದಚಾರಿ ಮಾರ್ಗಕ್ಕೆ ನುಗ್ಗಿತು ಎಂದು ವಿಷ್ಣು ಹೇಳಿದ್ದರೂ ಸ್ಥಳೀಯರು ವಿಷ್ಣುವೇ ಚಾಲನೆ ಮಾಡುತ್ತಿದ್ದ ಎಂದು ಹೇಳಿಕೆ ನೀಡಿದ್ದಾರೆ.

ಪ್ರಕರಣ ಸಂಬಂಧ ವಿಷ್ಣು ವಿರುದ್ಧ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಕುತ್ತು ತಂದ ಆರೋಪಗಳಡಿ (ಐಪಿಸಿ 279, 337) ಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ಕಾರಿನಲ್ಲಿ ಗಾಂಜಾ ಪತ್ತೆಯಾಗಿದ್ದರಿಂದ ಎನ್‌ಡಿಪಿಎಸ್‌ ಕಾಯ್ದೆ ಅಡಿ ಜಯನಗರ ಕಾನೂನು ಸುವ್ಯವಸ್ಥೆ ಠಾಣೆಯಲ್ಲೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ವಿಷ್ಣು ಮದ್ಯಪಾನದ ಜತೆ ಮಾದಕ ವಸ್ತುವನ್ನೂ ಸೇವಿಸಿದ್ದರೇ ಎಂಬುದನ್ನು ತಿಳಿಯಲು ಅವರ ರಕ್ತದ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ ಎಂದು ತನಿಖಾಧಿಕಾರಿಗಳು ಹೇಳಿದರು.

ನಟ ಪ್ರಜ್ವಲ್ ಹಾಗೂ ದಿಗಂತ್ ಸಹ ಕಾರಿನಲ್ಲಿದ್ದರು ಎಂದು ಕೆಲವರು ಹೇಳಿದ್ದಾರೆ. ಆದರೆ, ಅದಕ್ಕೆ ಇನ್ನೂ ಪುರಾವೆಗಳು ಸಿಕ್ಕಿಲ್ಲ. ಒಂದು ವೇಳೆ ಅವರು ಕಾರಿನಲ್ಲಿದ್ದರೂ ಅದರಲ್ಲಿ ತಪ್ಪೇನು ಇಲ್ಲ. ಇದ್ದುದೇ ನಿಜವಾದರೆ ಹೇಳಿಕೆ ದಾಖಲಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ, ಅಪಘಾತ ನಡೆದಾಗ ನಟರಿಬ್ಬರು ಎಲ್ಲಿದ್ದರು ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಮೊಬೈಲ್‌ ಕರೆಗಳ ವಿವರ ಪರಿಶೀಲಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದರು.

ಅಪಘಾತ ವಿಚಾರವು ತೀವ್ರ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನಟ ಪ್ರಜ್ವಲ್ ಶುಕ್ರವಾರ ಮಧ್ಯಾಹ್ನ ಮಾಧ್ಯಮಗಳು ಹಾಗೂ ಸಾಮಾಜಿಕ ತಾಣಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ನಾಲ್ಕು ದಿನಗಳಿಂದ ಗೋವಾದಲ್ಲಿದ್ದೇನೆ. ಸಿನಿಮಾ ಚಿತ್ರೀಕರಣದಲ್ಲಿ ನಿರತನಾಗಿದ್ದೇನೆ. ಬೆಂಗಳೂರಿನಲ್ಲಿ ಅಪಘಾತ ನಡೆದಿರುವ ಸಂಗತಿ ಮಾಧ್ಯಮಗಳ ಮೂಲಕ ಗೊತ್ತಾಯಿತು. ವಿಷ್ಣು ನನಗೆ ಸ್ನೇಹಿತನೆಂಬ ಕಾರಣಕ್ಕೆ ಆತನ ಜತೆ ನಾನೂ ಇದ್ದೆ ಎಂದು ಹೇಳುತ್ತಿರುವುದು ಸರಿಯಲ್ಲ  ಎಂದು ಹೇಳಿರುವ ಪ್ರಜ್ವಲ್, ತಾವು ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಆಫ್‌ಲೋಡ್ ಸಹ ಮಾಡಿದ್ದಾರೆ.

ಕನಕಪುರದ ರೆಸಾರ್ಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಾನು ಬುಧವಾರ ಬೆಳಿಗ್ಗೆಯಿಂದಲೂ ರೆಸಾರ್ಟ್‌ನಲ್ಲೇ ಇದ್ದೇನೆ. ನನಗೂ ಅಪಘಾತಕ್ಕೂ ಸಂಬಂಧವಿಲ್ಲ. ವಿನಾ ಕಾರಣ ನನ್ನ ಹೆಸರನ್ನು ತಂದಿರುವುದಕ್ಕೆ ಬೇಸರವಾಗಿದೆ’ ಎಂದು ನಟ ದಿಗಂತ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:
►►ಶಾಕಿಂಗ್! ಬೆಂಗಳೂರಿನಲ್ಲಿ ಕರಾವಳಿಯ ಯುವಕನ ದಾರುಣ ಮೃತ್ಯು:
http://bit.ly/2wxgSEi
►►ಭೀಕರ ಅಪಘಾತ: ಕಾರು ಅಪಘಾತದಲ್ಲಿ ಕಿರುತೆರೆ ಕಲಾವಿದರು ಸಾವು http://bit.ly/2wtBBe7
►►ಕಾರಿನ ಮೇಲೆ ಮರ ಬಿದ್ದು ಒಂದೇ ಕುಟುಂಬದ ಮೂವರ ಸಾವು: http://bit.ly/2vTYIj7
►►ಬೈಕ್‌‌ಗೆ ಗುದ್ದಿದ ಲಾರಿ: 11 ವರ್ಷದ ಬಾಲಕಿ ದಾರುಣ ಸಾವು: http://bit.ly/2vYcu3X
►►ಕುಂದಾಪುರದ ವೆಲಂಕಣಿ ಯಾತ್ರಿಕರಿಗೆ ಅಪಘಾತ: http://bit.ly/2r2j2fl
►►ಚಾರ್ಮಾಡಿ ಅಪಘಾತ: ಫೋಟೊ ತೆಗೆದವರಿಗೆ ಲಾಠಿ: http://bit.ly/2pT3yG0
►►ಭೀಕರ ಅಪಘಾತ: ಕಾರು ಚಾಲಕ ಸಾವು: http://bit.ly/2o46Jwx
►►ಬೈಕ್ ಅಪಘಾತ: ಯುವಕ ದಾರುಣ ಸಾವು: http://bit.ly/2nzEm9D
►►ಭೀಕರ ಅಪಘಾತ. ನಿಂತ ಲಾರಿಗೆ ಹಿಂದಿನಿಂದ ಕಾರು ಢಿಕ್ಕಿ: ಐವರ ಸಾವು: http://bit.ly/2hLjMl8
►►ಬರ್ತ್‌ಡೇ ಪಾರ್ಟಿ ಮುಗಿಸಿ ಮರಳುತ್ತಿದ್ದಾಗ ಅಪಘಾತ: ಮೂವರು ಯುವಕರು: http://bit.ly/2upTlCr

ಇಂದು ಹೆಚ್ಚು ಓದಿದ ಸುದ್ದಿಗಳು
►►'ಲವ್ ಜಿಹಾದ್' ಕೇಸ್. ಹದಿಯಾಳನ್ನು ಅಪ್ಪನ ಸುಪರ್ದಿಗೆ ನೀಡಲಾಗದು: ಸುಪ್ರೀಂ ಕೋರ್ಟ್:
http://bit.ly/2fMuHuz
►►ಯುವತಿಗೆ ಚುಡಾಯಿಸಿದ ಆರೋಪಿ ಉಮ್ಮರ್ ಫಾರೂಕ್ ಬಂಧನ: http://bit.ly/2wvsHdg
►►ಮರಳು ಲಾರಿಯ ಚಕ್ರದಡಿ ಸಿಲುಕಿ ಹೈಸ್ಕೂಲ್ ವಿದ್ಯಾರ್ಥಿ ಮೃತ್ಯು: http://bit.ly/2fFPZ9p
►►ಸೆಲ್ಫಿ ತೆಗೆಯುತ್ತಿದ್ದ ಮೂವರು ಯುವಕರು ರೈಲಿಗೆ ಸಿಲುಕಿ ದಾರುಣ ಸಾವು: http://bit.ly/2xcFxg6
►►ಕಾಲ್ತುಳಿತಕ್ಕೆ ಸಿಕ್ಕ ಯುವತಿಯ ಮೈ ಮುಟ್ಟಿ ವಿಕೃತಿ ಮೆರೆದ ಯುವಕ? ವಿಡಿಯೊ ವೈರಲ್: http://bit.ly/2kfr5mo

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ