ಮರೆಯಾದ ಯಕ್ಷರಂಗದ ಮಾಣಿಕ್ಯ ಚಿಟ್ಟಾಣಿ ರಾಮಚಂದ್ರ ಹೆಗಡೆ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ: ಅನಾರೋಗ್ಯಕ್ಕೆ ತುತ್ತಾಗಿ ಮಣಿಪಾಲದ ಕಸ್ತೂರಬಾ ಆಸ್ಪತ್ರೆಯ ತೀವೃ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಕ್ಷಗಾನದ ದಿಗ್ಗಜ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಮಂಗಳವಾರ ನಿಧನರಾಗಿದ್ದಾರೆ.

84ರ ಇಳಿ ವಯಸ್ಸಿನಲ್ಲಿಯೂ   ಯಕ್ಷಗಾನದಲ್ಲಿ ಸಕ್ರಿಯವಾಗಿದ್ದ  ರಾಮಚಂದ್ರ ಹೆಗಡೆಯವರು ಇತ್ತೀಚೆಗೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಣಿಪಾಲದ ಆಸ್ಪತ್ರೆಯಲ್ಲಿ ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪಾರ್ಶವಾಯುವಿನಿಂದ ಬಳಲುತ್ತಿದ್ದ ಅವರ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಯಲ್ಲಿ        
ತೀವ್ರ ನಿಗಾ ಘಟಕ ದಲ್ಲಿ  ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಂಗಳವಾರ ಸಂಜೆಯಿಂದ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎನ್ನಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಅವರು ಇಹಲೋಕ ತ್ಯಜಿಸಿದ್ದು  ಕುಟುಂಬುದವರನ್ನು ಹಾಗೂ   ಕೋಟ್ಯಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.

ಚಿಟ್ಟಾಣಿಯವರ ನಿಧನಕ್ಕೆ ಸಮಸ್ತ ಯಕ್ಷರಂಗವೇ ಸಂತಾಪ ಸೂಚಿಸಿದೆ.ಮಹಾನ್ ಕಲಾವಿದರನ್ನು ಕಳೆದುಕೊಂಡ ಜನತೆ ದುಃಖದಲ್ಲಿದ್ದಾರೆ. ಯಕ್ಷರಂಗದಲ್ಲಿ ಮಿಂಚಿದ ಚಿಟ್ಟಾಣಿ ಈಗ ಮರೆಯಾಗಿರುವುದು ಕಲಾ ಲೋಕಕ್ಕೆ ಯಕ್ಷಲೋಕಕ್ಕೆ ತುಂಬಲಾರದ ನಷ್ಟವಾಗಿದೆ.


1933ರ ಜನವರಿ 1ರಂದು ಜನಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದವರು. ಏಳು ವರ್ಷ ವಯಸ್ಸಿದ್ದಾಗಲೇ ಯಕ್ಷಗಾನ ಕ್ಸೇತ್ರಕ್ಕೆ ಕಾಲಿರಿಸಿದ ಇವರು 14ನೇ ವಯಸ್ಸಿಗೆ ಪ್ರಮುಖ ಪಾತ್ರಗಳನ್ನು ಮಾಡಲು ಆರಂಭಿಸಿದ್ದರು. 84 ವರ್ಷದ ಇಳಿ ವಯಸ್ಸಿನಲ್ಲೂ ಅವರು ಯಕ್ಷಗಾನದ ಕುಣಿತ ಹಾಕುವುದನ್ನು ತಪ್ಪಿಸಿರಲಿಲ್ಲ.

ಚಿಟ್ಟಾಣಿ ರಾಮಚಂದ್ರ ಹೆಗಡೆಯವರದ್ದು ಬಡಗು ತಿಟ್ಟು ಯಕ್ಷಗಾನ ಶೈಲಿ. ರಾಮಚಂದ್ರ ಹೆಗಡೆಯವರ ಕುಣಿತ ಎಷ್ಟು ಜನಪ್ರಿಯತೆ ಪಡೆದಿದೆ ಎಂದರೆ ಅವರ ಕುಣಿತವನ್ನು ಚಿಟ್ಟಾಣಿ ಘರಾನಾ ಎಂದೇ ಕರೆಯಲಾಗುತ್ತಿದೆ. ಚಿಟ್ಟಾಣಿ ಮಾಡಿರುವ ‘ಕೌರವ’, ದುಷ್ಟಬುದ್ಧಿ’, ‘ಭಸ್ಮಾಸುರ’, ‘ಕೀಚಕ’, ‘ಕರ್ಣ’, ‘ರುದ್ರಕೋಪ’, ‘ಕಂಸ’ ಮೊದಲಾದ ಪಾತ್ರಗಳು ಯಕ್ಷಗಾನ ವಲಯದಲ್ಲಿ ಬಹಳ ಜನಪ್ರಿಯವಾಗಿದ್ದವು.

ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ವಿಶೇಷವೆಂದರೆ, ಈ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದರು ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಮೊದಲ ಪದ್ಮಶ್ರೀ ತಂದು ಕೊಟ್ಟ ಗರಿಮೆ ಚಿಟ್ಟಾಣಿಯವರದ್ದು.

ಪ್ರಶಸ್ತಿ-ಪುರಸ್ಕಾರಗಳು
1991 – ರಾಜ್ಯೋತ್ಸವ ಪ್ರಶಸ್ತಿ
2004 – ಜನಪದಶ್ರೀ
2009 – ಶಿವರಾಮ್ ಕಾರಂತ್ ಪ್ರಶಸ್ತಿ
2009 – ಕರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ
2012 – ಪದ್ಮಶ್ರೀ
2012 – ಆಳ್ವಾಸ್ ನುಡಿಸಿರಿ
2013 – ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ.

ಇಂದು ಹೆಚ್ಚು ಓದಿದ ಸುದ್ದಿಗಳು
►►'ಲವ್ ಜಿಹಾದ್' ಕೇಸ್. ಹದಿಯಾಳನ್ನು ಅಪ್ಪನ ಸುಪರ್ದಿಗೆ ನೀಡಲಾಗದು: ಸುಪ್ರೀಂ ಕೋರ್ಟ್:
http://bit.ly/2fMuHuz
►►ಯುವತಿಗೆ ಚುಡಾಯಿಸಿದ ಆರೋಪಿ ಉಮ್ಮರ್ ಫಾರೂಕ್ ಬಂಧನ: http://bit.ly/2wvsHdg
►►ಮರಳು ಲಾರಿಯ ಚಕ್ರದಡಿ ಸಿಲುಕಿ ಹೈಸ್ಕೂಲ್ ವಿದ್ಯಾರ್ಥಿ ಮೃತ್ಯು: http://bit.ly/2fFPZ9p
►►ಸೆಲ್ಫಿ ತೆಗೆಯುತ್ತಿದ್ದ ಮೂವರು ಯುವಕರು ರೈಲಿಗೆ ಸಿಲುಕಿ ದಾರುಣ ಸಾವು: http://bit.ly/2xcFxg6
►►ಕಾಲ್ತುಳಿತಕ್ಕೆ ಸಿಕ್ಕ ಯುವತಿಯ ಮೈ ಮುಟ್ಟಿ ವಿಕೃತಿ ಮೆರೆದ ಯುವಕ? ವಿಡಿಯೊ ವೈರಲ್: http://bit.ly/2kfr5mo

Related Tags: Chittani Ramachandra Hegde, Yakshagana Artist, Death, Badafgutittu
 
comments powered by Disqus
Facebook Twitter Google Plus Youtube
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ