'ಲವ್ ಜಿಹಾದ್' ಕೇಸ್. ಹದಿಯಾಳನ್ನು ಅಪ್ಪನ ಸುಪರ್ದಿಗೆ ನೀಡಲಾಗದು: ಸುಪ್ರೀಂ ಕೋರ್ಟ್

ಕರಾವಳಿ ಕರ್ನಾಟಕ ವರದಿ

ನವದೆಹಲಿ:
'ಕೇರಳದ ಲವ್ ಜಿಹಾದ್' ಎಂದು ಸುದ್ದಿಯಾಗಿರುವ ಅಖಿಲಾ ಯಾನೆ ಹಾದಿಯಾ ಪ್ರಾಯಪ್ರಬುದ್ಧ ಮಹಿಳೆಯಾಗಿದ್ದು ಆಕೆಯನ್ನು ತಂದೆಯ ವಶಕ್ಕೆ ಒಪ್ಪಿಸಲಾಗದು ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಒಂದೋ ನಾವು ಆಕೆಗೆ 'ಲೊಕೊ ಪೆರೆಂಟಿಸ್' ನೇಮಿಸುತ್ತೇವೆ ಅಥವಾ ಬೇರೆಲ್ಲಾದರೂ ಸುರಕ್ಷಿತ ಜಾಗಕ್ಕೆ ಕಳುಹಿಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ. ಮಾತ್ರವಲ್ಲ ತಂದೆ ಅಶೋಕನ್ ತಮ್ಮ ಮಗಳನ್ನು ನಿಯಂತ್ರಿಸುವ ಹಕ್ಕನ್ನು ಹೊಂದಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 

ಹಿಂದೂ ಧರ್ಮದಿಂದ ಮತಾಂತರಗೊಂಡ ಅಖಿಲಾ ಹಾದಿಯಾ ಎಂದು ಹೆಸರು ಬದಲಾಯಿಸಿಕೊಂಡಿದ್ದು ಶೆಫಿನ್ ಜಹಾನ್ ಎನ್ನುವ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿದ್ದಳು. ಆದರೆ ಕೇರಳ ಹೈಕೋರ್ಟ್ ಈ ಮದುವೆಯನ್ನು ಅನೂರ್ಜಿತಗೊಳಿಸಿ ಹಾದಿಯಾಳನ್ನು ಅವರ ತಂದೆಯ ಸುಪರ್ದಿಗೆ ಒಪ್ಪಿಸಿತ್ತು.

ಅಂದಿನಿಂದ ಹಾದಿಯಾ ತಂದೆ ತಾಯಿಯ ಜೊತೆ ಮನೆಯಲ್ಲೆ ಇದ್ದು ಕೇರಳ ಪೊಲೀಸರು ಆಕೆಯ ಮನೆಯನ್ನು ಸುತ್ತುವರಿದು ರಕ್ಷಣೆ ನೀಡುತ್ತಿದ್ದಾರೆ. ಹಾದಿಯಾಳನ್ನು ಭೇಟಿ ಮಾಡಲು ಯಾರಿಗೂ ಅವಕಾಶವನ್ನು ನೀಡಲಾಗುತ್ತಿಲ್ಲ.

ಹಾದಿಯಾಳ ಮದುವೆಯಾದ ಯುವಕ ಶೆಫಿನ್ ಜಹಾನ್ ಕೇರಳ ಹೈಕೋರ್ಟ್ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಈ ಅರ್ಜಿಯ ವಿಚಾರಣೆ ವೇಳೆ ಲವ್ ಜಿಹಾದ್ ವಿಚಾರ ಕೋರ್ಟ್‌ನ ಗಮನಕ್ಕೆ ಬಂದಿದ್ದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 'ಹಿಂದೂ ಹುಡುಗಿಯರನ್ನು ಮತಾಂತರ ಮಾಡಿ ಮುಸ್ಲಿಮ್ ಯುವಕರ ಜೊತೆ ಮದುವೆ ಮಾಡಿಸುವ ಒಂದು ಮಾದರಿ ಈಗ ಚಾಲ್ತಿಯಲ್ಲಿದೆ' ಎಂದು ಎನ್‌ಐಎ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಹೀಗಾಗಿ ಲವ್ ಜಿಹಾದ್ ಕುರಿತು ತನಿಖೆ ನಡೆಸುವಂತೆಯೂ ಸುಪ್ರೀಂ ಕೋರ್ಟ್ ಎನ್‌ಐಎ ಆದೇಶಿಸಿತ್ತು.

ಇಂದು ಸುಪ್ರೀಂ ಕೋರ್ಟ್‌ನಲ್ಲಿ ಶೆಫಿನ್ ಜಹಾನ್ ಸಲ್ಲಿಸಿದ್ದ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಾಪ್ತ ವಯಸ್ಕರಿಬ್ಬರ ಮದುವೆಯನ್ನು ಅನೂರ್ಜಿತಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಶೆಫಿನ್ ಜಹಾನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ 'ಲವ್ ಜಿಹಾದ್' ತನಿಖೆ ನಡೆಸಲು ಆದೇಶಿದುವ ಮೂಲಕ ಸುಪ್ರೀಂ ಕೋರ್ಟ್ ತನ್ನ ವ್ಯಾಪ್ತಿ ಮೀರಿ ಕಾರ್ಯಾಚರಿಸಿದೆ ಎಂದು ವಾದ ಮಂಡಿಸಿದರು.

'ಇಬ್ಬರು ಬಿಜೆಪಿ ನಾಯಕರು ಅಲ್ಪಸಂಖ್ಯಾತ ಸಮುದಾಯದವರನ್ನು ಮದುವೆಯಾಗಿದ್ದಾರೆ. ಅಲ್ಲೂ ಎನ್‌ಐಎ ತನಿಖೆ ನಡೆಸಲು ಆದೇಶಿಸುವಿರಾ?" ಎಂದು  ದವೆ ನ್ಯಾಯಾಲಯವನ್ನು ಪ್ರಶ್ನಿಸಿದರು.

ಮುಂದಿನ ವಿಚಾರಣೆ ಅಕ್ಟೋಬರ್ 9ರಂದು ನಡೆಯಲಿದೆ.

ಇದನ್ನೂ ಓದಿ
►►'ಲವ್ ಜಿಹಾದ್' ತನಿಖೆ: 32 'ಒತ್ತಾಯದ' ಮತಾಂತರಗಳ ಮೇಲೆ ಎನ್‌ಐಎ ಫೋಕಸ್!:
http://bit.ly/2hBmN7O
►►ನಾನು ಮತಾಂತರದ ವಿರೋಧಿ ಅಲ್ಲ. ಆದರೆ ಇದರಲ್ಲೇನೋ ಮೋಸವಿದೆ: ಅಶೋಕನ್: http://bit.ly/2wZczzX
►►ಕೇರಳದ ಯೋಗ ಕೇಂದ್ರದಲ್ಲಿ ಕುಂದಾಪುರದ ಯುವಕ ಮರಳಿ ಹಿಂದೂ ಧರ್ಮಕ್ಕೆ: http://bit.ly/2wk36DP
►►ಮರುಮತಾಂತರಕ್ಕೆ ಚಿತ್ರಹಿಂಸೆ. ಯೋಗ ಕೇಂದ್ರದ ವಿರುದ್ಧ ಆರೋಪ ನಿರಾಕರಿಸಿದ ಅದಿರಾ: http://bit.ly/2wj94Fj
►►ಇಸ್ಲಾಂ ಸ್ವೀಕರಿಸದಿದ್ದರೆ ನರಕಕ್ಕೆ ಹೋಗುತ್ತೇನೆಂದು ಭಯಗೊಂಡಿದ್ದೆ: ಅದಿರಾ: http://bit.ly/2fHnKYy
►►ಒತ್ತಡದಲ್ಲಿ ಇಸ್ಲಾಂಗೆ ಮತಾಂತರಗೊಂಡೆ: ಮರಳಿ ಹಿಂದೂ ಧರ್ಮಕ್ಕೆ ಸೇರಿದ ಅದಿರಾ: http://bit.ly/2jQxiVH
►►ಬೇಲೂರಿನ ಬಾಲೆ, ಪ್ಲೇಟ್ ತಿರುವಿದ ಮೇಲೆ: http://bit.ly/1fIcvf6
►►ಮತಾಂತರಗೊಂಡ ಮಗನ ಕೊಲೆ ಮಾಡಿದ್ದ ಆರೆಸ್ಸೆಸ್: ಈಗ ತಂದೆಯೂ ಮತಾಂತರ: http://bit.ly/2hexdKB
►►ಲವ್ ಜಿಹಾದ್ ತನಿಖೆ: ಅಖಿಲಾ ಯಾನೆ ಹದಿಯಾ ಜೊತೆಗೂ ಮಾತನಾಡುವುದಂತೆ ಸುಪ್ರೀಂ: http://bit.ly/2vDOIJ0
►►ಮತಾಂತರದಲ್ಲಿ ಪಿಎಫ್ಐ, ಎಸ್‌ಡಿಪಿಐ ಕೈವಾಡ? ಎನ್ಐಎಯಿಂದ ಲವ್ ಜಿಹಾದ್ ತನಿಖೆ: http://bit.ly/2wLwsyD
►►ಮತಾಂತರದ ಮದುವೆ ಕೇಸ್: ‘ಲವ್ ಜಿಹಾದ್’ ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ: http://bit.ly/2i5tC1t
►►ಐಎಎಸ್ ಟಾಪರ್ಸ್ ಟೀನಾ-ಆಮೀರುಲ್ ವಿವಾಹಕ್ಕೆ ಹಿಂದೂ ಮಹಾಸಭಾ ಅಡ್ಡಿ: http://bit.ly/2gXx3WA
►►ಸಂಘಪರಿವಾರದಿಂದ "ಲವ್ ಜಿಹಾದ್" ಎಂದು ಕೋಲಾಹಲ: ಕೊನೆಗೂ ಒಂದಾದರು ಪ್ರೇಮಿಗಳು: http://bit.ly/2glfgpg
►►ಲವ್ ಜಿಹಾದ್, ಅಂತರ್ಜಾತಿ ವಿವಾಹ. 2 ನೈಜ ಘಟನೆಗಳು: http://bit.ly/1zth4z0
►►ಗುಜರಾತ್‌ನಲ್ಲಿ ಲವ್ ಜಿಹಾದ್‌ಗೆ ಲಕ್ಷಲಕ್ಷ ಆಫರ್. ಕಿಡಿಗೇಡಿಗಳ ಕೃತ್ಯ ಶಂಕೆ: http://bit.ly/1R10iRa
►►ಸಂಘಪರಿವಾರದ ಕೇಸರಿ ಲವ್ ಧೋಖಾ! ಪಿಎಫ್ಐ: http://bit.ly/2esfiPe
►►ಬಸ್ಸಿನಲ್ಲಿ ಭಿನ್ನ ಕೋಮಿನ ಜೋಡಿ. ದಾಳಿಗೆ ಹೊಂಚು. ಪೊಲೀಸರಿಂದ ಭದ್ರತೆ: http://bit.ly/2fBakzz
►►ಹಿಂದೂ ಹುಡುಗಿ ಮಾತಾಡಿದಳೆಂದು ಮುಸ್ಲಿಂ ವಿದ್ಯಾರ್ಥಿಗೆ ಥಳಿಸಿದ ಎಬಿವಿಪಿ ಕಾರ್ಯಕರ್ತ: http://bit.ly/2dDMfaP
►►ಬಾಡಿಗೆಗೆ ವಸತಿ ಸಿಗದೆ ಹಿಂದೂ ಹೆಸರಿಟ್ಟುಕೊಂಡು ಐಎಎಸ್ ಪಾಸ್ ಮಾಡಿದ ಮುಸ್ಲಿಂ ಯುವಕ: http://bit.ly/1T6DyBD
►►ಮಂಗಳೂರಿನಲ್ಲಿ ಇನ್ನೊಂದು ಅನೈತಿಕ ಪೊಲೀಸ್‌ಗಿರಿ. ಈ ಬಾರಿ ಮುಸ್ಲಿಂ ಹುಡುಗಿ-ಹಿಂದೂ: http://bit.ly/1OvglEF

ಇಂದು ಹೆಚ್ಚು ಓದಿದ ಸುದ್ದಿಗಳು
►►ಯುವತಿಗೆ ಚುಡಾಯಿಸಿದ ಆರೋಪಿ ಉಮ್ಮರ್ ಫಾರೂಕ್ ಬಂಧನ:
http://bit.ly/2wvsHdg
►►ಮರಳು ಲಾರಿಯ ಚಕ್ರದಡಿ ಸಿಲುಕಿ ಹೈಸ್ಕೂಲ್ ವಿದ್ಯಾರ್ಥಿ ಮೃತ್ಯು: http://bit.ly/2fFPZ9p
►►ಸೆಲ್ಫಿ ತೆಗೆಯುತ್ತಿದ್ದ ಮೂವರು ಯುವಕರು ರೈಲಿಗೆ ಸಿಲುಕಿ ದಾರುಣ ಸಾವು: http://bit.ly/2xcFxg6
►►ಕಾಲ್ತುಳಿತಕ್ಕೆ ಸಿಕ್ಕ ಯುವತಿಯ ಮೈ ಮುಟ್ಟಿ ವಿಕೃತಿ ಮೆರೆದ ಯುವಕ? ವಿಡಿಯೊ ವೈರಲ್: http://bit.ly/2kfr5mo

Related Tags: Love Jihad, NIA Probe, Priliminary Report, Akhila, Hadiya, Athira, Conversion, Islam, Kerala Police, Supreme Court, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ