ಯುವತಿಗೆ ಚುಡಾಯಿಸಿದ ಆರೋಪಿ ಉಮ್ಮರ್ ಫಾರೂಕ್ ಬಂಧನ

ಕರಾವಳಿ ಕರ್ನಾಟಕ ವರದಿ

ಪುತ್ತೂರು:
ಯುವತಿಯೋರ್ವಳನ್ನು ಕೈ ಸನ್ನೆ ಮಾಡಿ ಕರೆದು ಚುಡಾಯಿಸಿದ ಆರೋಪದ ಮೇರೆಗೆ ಉಮ್ಮರ್ ಫಾರೂಕ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಪಡವನ್ನೂರು ಗ್ರಾಮದ ರಮ್ಯಾ ಎಂಬ ಯುವತಿಗೆ ಉಮ್ಮರ್ ಫಾರೂಕ್ ಚುಡಾಯಿಸಿದ್ದಾನೆ ಎನ್ನಲಾಗಿದೆ.

ರಮ್ಯಾ ಸುಳ್ಯಪದವು ಎಂಬಲ್ಲಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಗುರುವಾರ ರಮ್ಯಾ ಜೊತೆ ಈ ಚುಡಾವಣೆಯ ಘಟನೆ ಸಂಭವಿಸಿದೆ.

ಉಮ್ಮರ್ ಫಾರೂಕ್  ಪಡವನ್ನೂರು ಗ್ರಾಮದ ಇಂದಾಲೆ ಎಂಬಲ್ಲಿ ಸ್ಕೂಟರ್‌ನಲ್ಲಿ ಬಂದು ರಮ್ಯಾಳನ್ನು ಹಿಂಬಾಲಿಸಿದ್ದಾನೆ. ಬಳಿಕ ಆಕೆಯನ್ನು ಕೈ ಸನ್ನೆ ಮಾಡಿ ಕರೆದಿದ್ದಾನೆ.

ರಮ್ಯಾ ಈತನನ್ನು ನಿರ್ಲಕ್ಷಿಸಿ ಮುಂದೆ ಹೋದಾಗ ಮತ್ತೆ ಹಿಂಬಾಲಿಸಿ ಬಂದ ಉಮ್ಮರ್ ಫಾರೂಕ್ ರಮ್ಯಾಳ ಕೈ ಹಿಡಿದು ಬಲವಂತವಾಗಿ ಸ್ಕೂಟರ್‌ನಲ್ಲಿ ಕೂರಿಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ. ಹೇಗೋ ಈತನಿಂದ ತಪ್ಪಿಸಿಕೊಂಡ ರಮ್ಯಾ ಅಂದು ಮನೆ ಸೇರಿದ್ದಾಳೆ.

ಈ ವಿಚಾರವನ್ನು ರಮ್ಯ ತಾನು ಕೆಲಸ ಮಾಡುವ ಅಂಗಡಿ ಮಾಲಿಕರ ಗಮನಕ್ಕೆ ತಂದಿದ್ದಾಳೆ. ಬಳಿಕ ಅಂಗಡಿಯ ಮಾಲಿಕರ ಸಹಕಾರದಿಂದ ಸಂಪ್ಯ ಪೊಲೀಸ್ ಠಾಣೆಯಲ್ಲಿ ಉಮ್ಮರ್ ಫಾರೂಕ್ ವಿರುದ್ಧ ಕೇಸು ದಾಖಲಿಸಲಾಗಿದೆ.

ತಕ್ಷಣ ಕಾರ್ಯ ಪ್ರವೃತ್ತರಾದ ಸಂಪ್ಯ ಪೊಲೀಸರು ಉಮ್ಮರ್ ಫಾರೂಕ್ ಕುರಿತು ಮಾಹಿತಿ ಸಂಗ್ರಹಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಮ್ಮರ್ ಫಾರೂಕ್‌ನನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು ಕೋರ್ಟ್ ಉಮ್ಮರ್ ಫಾರೂಕ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿ ಉಮ್ಮರ್ ಫಾರೂಕ್ ಮೂಲತಃ ಪುತ್ತೂರು ತಾಲೂಕಿನ ಪಡವನ್ನೂರು ಗ್ರಾಮದವನಾಗಿದ್ದು ವಿವಾಹಿತನಾಗಿದ್ದಾನೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಮರಳು ಲಾರಿಯ ಚಕ್ರದಡಿ ಸಿಲುಕಿ ಹೈಸ್ಕೂಲ್ ವಿದ್ಯಾರ್ಥಿ ಮೃತ್ಯು:
http://bit.ly/2fFPZ9p
►►ಸೆಲ್ಫಿ ತೆಗೆಯುತ್ತಿದ್ದ ಮೂವರು ಯುವಕರು ರೈಲಿಗೆ ಸಿಲುಕಿ ದಾರುಣ ಸಾವು: http://bit.ly/2xcFxg6
►►ಕಾಲ್ತುಳಿತಕ್ಕೆ ಸಿಕ್ಕ ಯುವತಿಯ ಮೈ ಮುಟ್ಟಿ ವಿಕೃತಿ ಮೆರೆದ ಯುವಕ? ವಿಡಿಯೊ ವೈರಲ್: http://bit.ly/2kfr5mo
►►ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕರು ನೀರು ಪಾಲು: http://bit.ly/2wtY5J5

Related Tags: Puttur, Eve Teasing Case, Ramya, Ummar Faruq, Sampya Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ