ಸೆಲ್ಫಿ ತೆಗೆಯುತ್ತಿದ್ದ ಮೂವರು ಯುವಕರು ರೈಲಿಗೆ ಸಿಲುಕಿ ದಾರುಣ ಸಾವು

ಕರಾವಳಿ ಕರ್ನಾಟಕ ವರದಿ

ರಾಮನಗರ:
ಸೆಲ್ಫಿ  ಹುಚ್ಚಿಗೆ ಮೂವರು ಯುವಕರು ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಭೀಕರ ದುರ್ಘ‌ಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಸೆಲ್ಫಿ ತೆಗೆಯಲು ಹೋಗಿ ಮೂರು ಯುವಕರು ಸಾವನ್ನಪ್ಪಿರುವ ಘಟನೆ ರಾಮನಗರದ ವಂಡರ್ ಲಾ ಬಳಿ ನಡೆದಿದೆ.

22 ರಿಂದ 23 ವರ್ಷ ವಯಸ್ಸಿನ ಯುವಕರು ಸಾವನ್ನಪ್ಪಿದ್ದಾರೆ. ಪ್ರಭು ಆನಂದ್ ಎಂಬ ಯುವಕ ಸೇರಿ ಮತ್ತಿಬ್ಬರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಮೃತರ ಗುರುತು ಪತ್ತೆಯಾಗಿಲ್ಲ. ಸೆಲ್ಫಿ ತೆಗೆಯುವಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ರೈಲು ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.  ಸ್ಥಳಕ್ಕೆ ಬಿಡದಿ ಪೊಲೀಸರು ಹಾಗೂ ಚನ್ನಪಟ್ಟಣ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಬೆಂಗಳೂರಿನವರು.

20 ರಿಂದ 25 ವರ್ಷ ಪ್ರಾಯದ ಮೂವರು ಯುವಕರು ರೈಲು ಹಳಿಯಲ್ಲಿ ನಿಂತು ಸೆಲ್ಫಿ  ತೆಗೆದುಕೊಳ್ಳುವುದರಲ್ಲಿ ನಿರತರಾಗಿದ್ದರು. ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ  ರೈಲು ಮೂವರ ಮೇಲೆಯೇ ಹರಿದಿದೆ. ಪರಿಣಾಮವಾಗಿ ಮೂವರೂ ಛಿದ್ರ ಛಿದ್ರವಾಗಿ ಹೋಗಿದ್ದಾರೆ.

ಸ್ಥಳಕ್ಕೆ ಬಿಡದಿ ಹಾಗೂ ಚೆನ್ನಪಟ್ಟಣ ರೈಲ್ವೇ ಪೊಲೀಸರು ದೌಡಾಯಿಸಿದ್ದು ,ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳದಲ್ಲಿ ಯುವಕರು ತಂದಿದ್ದ 2 ಬೈಕ್‌ಗಳು ಪತ್ತೆಯಾಗಿವೆ.ಇದನ್ನೂ ಓದಿ
►►ವಿದ್ಯಾರ್ಥಿಗಳ ಸೆಲ್ಫೀ ಸಂಭ್ರಮ. ಸ್ನೇಹಿತ ನೀರಿನಲ್ಲಿ ಮುಳುಗಿದ್ದು ಗೊತ್ತೇ ಇಲ್ಲ:
http://bit.ly/2yAuoaR
►►ಪಿಸ್ತೋಲ್‌ನೊಂದಿಗೆ ಸೆಲ್ಫೀ ತೆಗೆಯಲು ಹೋದ ಬಾಲಕ ಟ್ರಿಗರ್ ಒತ್ತಿದ: http://bit.ly/1O5wVtS
►►ಸೆಲ್ಫೀ ತೆಗೆಯುತ್ತಿದ್ದ ಮೂವರು ಯುವತಿಯರು ಸಮುದ್ರಪಾಲು: http://bit.ly/1RfSMEH

ಇಂದು ಹೆಚ್ಚು ಓದಿದ ಸುದ್ದಿಗಳು
►►ಕಾಲ್ತುಳಿತಕ್ಕೆ ಸಿಕ್ಕ ಯುವತಿಯ ಮೈ ಮುಟ್ಟಿ ವಿಕೃತಿ ಮೆರೆದ ಯುವಕ? ವಿಡಿಯೊ ವೈರಲ್:
http://bit.ly/2kfr5mo
►►ಮೊನಾಲಿಸಾಳ ಬೆತ್ತಲೆ ಚಿತ್ರ ಪತ್ತೆ: ಲಿಯೊನಾರ್ಡೊ ಅವರದೆ ಕಲಾಕೃತಿ?: http://bit.ly/2xMlO8F
►►ಚೆಲುವಿನ ಚಿತ್ತಾರ ನಟ 'ಬುಲ್ಲಿ ಪಪ್ಪುಸಿ' ಖ್ಯಾತಿಯ ರಾಕೇಶ್ ಇನ್ನಿಲ್ಲ: http://bit.ly/2xc81Xl
►►ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕರು ನೀರು ಪಾಲು:  http://bit.ly/2wtY5J5

Related Tags: Selfie, Death, 3 Youth Killed, Train, Ramanagar
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ