ಕಾಲ್ತುಳಿತಕ್ಕೆ ಸಿಕ್ಕ ಯುವತಿಯ ಮೈ ಮುಟ್ಟಿ ವಿಕೃತಿ ಮೆರೆದ ಯುವಕ? ವಿಡಿಯೊ ವೈರಲ್
ದುರಂತಗಳು ಸಂಭವಿಸಿದಾಗ ಪರಸ್ಪರರ ನೆರವಿಗೆ ಧಾವಿಸುವುದರಲ್ಲಿ ಖ್ಯಾತವಾಗಿದ್ದ ಮುಂಬೈ ನಗರಿ ಈ ಬಾರಿ ಕಾಲ್ತುಳಿತದ ದುರಂತದ ವೇಳೆ ಮಾನವೀಯತೆ ಕಳೆದುಕೊಂಡಿದ್ದು ಹೇಗೆ ಎಂಬುದೇ ಈಗ ಚರ್ಚೆಯ ವಿಷಯವಾಗಿದೆ.

ಕರಾವಳಿ ಕರ್ನಾಟಕ ವರದಿ

ಮುಂಬೈ:
ಮುಂಬೈಯಲ್ಲಿ ಕಳೆದ ಶುಕ್ರವಾರ ರೈಲ್ವೇ ಪಾದಚಾರಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತದ ವೇಳೆ ವ್ಯಕ್ತಿಯೋರ್ವ ಕಾಲ್ತುಳಿತಕ್ಕೆ ಸಿಲುಕಿದ್ದ ಯುವತಿಯನ್ನು ಮುಟ್ಟಿ ಕಿರುಕುಳ ನೀಡಿದ ಸನ್ನಿವೇಶದ ವಿಡಿಯೊ ಇದೀಗ ವೈರಲ್ ಆಗಿದೆ.

ಕಳೆದ ಶುಕ್ರವಾರ ಮುಂಬೈಯ ಎಲ್ಫಿನ್‌ಸ್ಟೋನ್ ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 22 ಮಂದಿ ಮೃತಪಟ್ಟಿದ್ದರು. ಈ ವೇಳೆ ಪಾದಚಾರಿ ಮೇಲ್ಸುತುವೆಯಲ್ಲಿ ಸಿಲುಕಿದ್ದ ಜನರನ್ನು ಅಲ್ಲಿಂದ ಹೊರತೆಗೆಯಲು ಜನರು ಹರಸಾಹಸಪಡುತ್ತಿದ್ದರು. ಅನೇಕ ಯುವಕರು ಸಂತ್ರಸ್ತರಿಗೆ ನೆರವಾಗಲು ಭಾರೀ ಪ್ರಯತ್ನ ಮಾಡಿದ್ದರು.

ಯುವಕರು ಕಾಲ್ತುಳಿತದಲ್ಲಿ ಸಿಕ್ಕ ಜನರಿಗೆ ಸಹಾಯ ಮಾಡುತ್ತಿರುವ ದೃಶ್ಯವನ್ನು ಹಲವರು ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿದ್ದರು. ಆದರೆ ಇಂತಹುದೆ ಒಂದು ವಿಡಿಯೊ ಈಗ ಭಾರೀ ವೈರಲ್ ಆಗಿದೆ.

ಯುವಕನೋರ್ವ ನೆರವಿನ ನೆಪದಲ್ಲಿ ಕಾಲ್ತುಳಿತದಲ್ಲಿ ಸಿಲುಕಿ ಜನರ ಅಡಿಯಲ್ಲಿ ಬಿದ್ದು ನರಳಾಡುತ್ತಿರುವ ಯುವತಿಯ ಮೈ ಮುಟ್ಟುತ್ತಿರುವುದು, ವಿಶೇಷವಾಗಿ ಆಕೆಯ ಎದೆಯನ್ನು ಪದೇಪದೆ ಮುಟ್ಟುತ್ತಿರುವ ದೃಶ್ಯ ಒಂದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ವಿಡಿಯೊ ನೋಡಿದರೆ ಆತ ಉದ್ದೇಶಪೂರ್ವಕಾಗಿ ಆ ಯುವತಿಯನ್ನು ಪದೇಪದೆ ಮುಟ್ಟುತ್ತಿರುವಂತೆ ಕಂಡುಬಂದಿದೆ.

ದಾದರ್ ಪೊಲೀಸರಿಗೆ ಈ ವಿಡಿಯೊ ಫೂಟೇಜ್ ಸಿಕ್ಕಿದ್ದು ನೆರವಿನ ನೆಪದಲ್ಲಿ ಯುವಕ ಆ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿರುವಂತೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು ಮುಂಬೈ ವಲಯ 5ರ ಪೊಲೀಸ್ ಕಮೀಷನರ್ ರಾಜೀವ್ ಜೈನ್ ಈ ಕುರಿತು ಹೆಚ್ಚಿನ ತನಿಖೆ ನಡೆಸಲು ಇನ್ನೂ ಹಲವಾರು ಮೊಬೈಲ್ ವಿಡಿಯೊ ರೆಕಾರ್ಡಿಂಗ್‌ಗಳನ್ನು ನಾವು ಪರಿಶೀಲಿಸುತ್ತಿದ್ದೇವೆ, ಯುವಕನನ್ನು ಪತ್ತೆ ಮಾಡಲು ಸಹ ಪೊಲೀಸ್ ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಒಂದೇ ವಿಡಿಯೊ ನೋಡಿ ಅಂತಿಮ ನಿರ್ಣಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ಇತರ ವಿಡಿಯೊಗಳನ್ನೂ ಸಹ ನೋಡಿ ಈ ಕುರಿತು ಕ್ರಮಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ರಾಜೀವ್ ಜೈನ್ ಹೇಳಿದ್ದಾರೆ.

ಕಾಲ್ತುಳಿತದಲ್ಲಿ ಸಿಕ್ಕು ಮೃತಪಟ್ಟ ಹೆಂಗಸರ ಚಿನ್ನಾಭರಣ ಕಳವು ಮಾಡುವ ದೃಶ್ಯಗಳು ಸಹ ರೆಕಾರ್ಡ್ ಆಗಿದ್ದು ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದುರಂತಗಳು ಸಂಭವಿಸಿದಾಗ ಪರಸ್ಪರರ ನೆರವಿಗೆ ಧಾವಿಸುವುದರಲ್ಲಿ ಖ್ಯಾತವಾಗಿದ್ದ ಮುಂಬೈ ನಗರಿ ಈ ಬಾರಿ ಕಾಲ್ತುಳಿತದ ದುರಂತದ ವೇಳೆ ಮಾನವೀಯತೆ ಕಳೆದುಕೊಂಡಿದ್ದು ಹೇಗೆ ಎಂಬುದೇ ಈಗ ಚರ್ಚೆಯ ವಿಷಯವಾಗಿದೆ.


ಇದನ್ನೂ ಓದಿ:
►►ಮುಂಬೈ ದುರಂತ: ಶವಗಳಿಗೆ ನಂಬರ್ ವಿರೋಧಿಸಿ ವೈದ್ಯರಿಗೆ ಹಲ್ಲೆ:
http://bit.ly/2xTEXb7
►►ಮುಂಬೈ ದುರಂತದಲ್ಲಿ ಮೃತ ಸುಮಲತಾ ಆಭರಣ ಕಳ್ಳತನ: http://bit.ly/2xTdeao
►►ಮುಂಬೈ ರೈಲು ನಿಲ್ದಾಣ ದುರಂತ: ಬಂಟರ ಸಂಘದ ಸದಸ್ಯೆಯರಿಬ್ಬರ ಮೃತ್ಯು: http://bit.ly/2xNiDQ0
►►ಬುಲೆಟ್ ರೈಲಿಗೆ ಹಣವಿದೆ, ಜನಸಾಮಾನ್ಯರ ರೈಲಿಗಾಗಿ ಇಲ್ಲವೆ? ಶಿವಸೇನೆ: http://bit.ly/2x3vOgX
►►ಮುಂಬೈ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 27 ಮಂದಿ ಮೃತ್ಯು. ಹಲವರು ಗಂಭೀರ: http://bit.ly/2ywWHpJ

ಇಂದು ಹೆಚ್ಚು ಓದಿದ ಸುದ್ದಿಗಳು
►►ಮೊನಾಲಿಸಾಳ ಬೆತ್ತಲೆ ಚಿತ್ರ ಪತ್ತೆ: ಲಿಯೊನಾರ್ಡೊ ಅವರದೆ ಕಲಾಕೃತಿ?:
http://bit.ly/2xMlO8F
►►ಯಕ್ಷಗಾನ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅಸ್ವಸ್ಥ: http://bit.ly/2wsbgud
►►ಮಗಳ ಮದುವೆಗೆ ಎರಡೇ ದಿನ: ವಿದ್ಯುದಾಘಾತಕ್ಕೆ ತಾಯಿ ಸಾವು: http://bit.ly/2x9kk6H
►►ನಿಂತಿದ್ದ ಲಾರಿಗೆ ಢಿಕ್ಕಿಯಾದ ಕ್ರೂಸರ್: ಭೀಕರ ಅಪಘಾತಕ್ಕೆ ಆರು ಮಂದಿ ಬಲಿ: http://bit.ly/2fKeFkR

Related Tags: Mumbai Stampede, Molestation Video, Elphinstone Station
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ