ಯಕ್ಷಗಾನ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅಸ್ವಸ್ಥ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಯಕ್ಷಗಾನದ ಮೇರು ಕಲಾವಿದ ಹೊನ್ನಾವರದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಉಸಿರಾಟ ತೊದರೆಯಿಂದ ಅಸ್ವಸ್ಥರಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನ್ಯುಮೋನಿಯಾ ಮತ್ತು ಲಘು ಪಾರ್ಶ್ವ ವಾಯು ಖಾಯಿಲೆಯಿಂದ ಬಳಲುತ್ತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಶುಕ್ರವಾರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ಲಕ್ಷಾಂತರ ಅಭಿಮಾನಿಗಳ ಮನಗೆದ್ದ ಚಿಟ್ಟಾಣಿ
ತಮ್ಮ ಹದಿನಾಲ್ಕರ ಹರೆಯದಲ್ಲೇ ರಂಗಸ್ಥಳ ಪ್ರವೇಶಿಸಿದ್ದ ಚಿಟ್ಟಾಣಿ ಆರಂಭದಲ್ಲಿ ಒಂದೆರಡು ವರ್ಷ ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿಕೊಂಡಿದ್ದು ಬಳಿಕ ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಲಕ್ಷಾಂತರ ಅಭಿಮಾನಿಗಳ ಮನಗೆದ್ದರು.

ಇದೀಗ 84ರ ಹರೆಯದಲ್ಲೂ ಕೀಚಕನಾಗಿ, ಭಸ್ಮಾಸುರನಾಗಿ, ಕೌರವನಾಗಿ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ರಂಗದ ಮೇಲೆ ಬಂದರೆ ಸಹಸ್ರ ಸಹಸ್ರ ಸಂಖ್ಯೆಯ ಯಕ್ಷಾಭಿಮಾನಿಗಳು ಬೆಕ್ಕಸ ಬೆರಗಾಗುತ್ತಾರೆ. ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಯೂರಿದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಶೀಘ್ರ ಗುಣಮುಖರಾಗಲಿ ಎಂಬುದು 'ಕರಾವಳಿ ಕರ್ನಾಟಕ'ದ ಹಾರೈಕೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಮಗಳ ಮದುವೆಗೆ ಎರಡೇ ದಿನ: ವಿದ್ಯುದಾಘಾತಕ್ಕೆ ತಾಯಿ ಸಾವು:
http://bit.ly/2x9kk6H
►►ನಿಂತಿದ್ದ ಲಾರಿಗೆ ಢಿಕ್ಕಿಯಾದ ಕ್ರೂಸರ್: ಭೀಕರ ಅಪಘಾತಕ್ಕೆ ಆರು ಮಂದಿ ಬಲಿ: http://bit.ly/2fKeFkR
►►ಮುಂಬೈ ವ್ಯಕ್ತಿಯಿಂದ ಐಸಿಸ್‌ಗೆ ನೆರವು: ಸ್ಫೋಟಕ ಮಾಹಿತಿ ಪತ್ತೆ: http://bit.ly/2x7Srk5
►►ಕರ್ನಾಟಕ ಬಿಜೆಪಿಯ 'ಮೂಲಸ್ಥಾನ' ಮಂಗಳೂರಿಗೆ ಇಂದು ಅಮಿತ್ ಶಾ: http://bit.ly/2x7kvV7

Related Tags: Chittani Ramachandra Hegde Hospitalised, Yakshagana Artist, Manipal Hospital, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ