ಕ್ಯಾನ್ಸರ್ ಜೊತೆ ಸೆಣಸಿದ ಪ್ರಸಿದ್ಧ ನಟ, ಪದ್ಮಶ್ರೀ ಟಾಮ್ ಆಲ್ಟರ್ ಇನ್ನಿಲ್ಲ

ಕರಾವಳಿ ಕರ್ನಾಟಕ ವರದಿ

ಮುಂಬೈ:
ಹಿರಿಯ ನಟ, ಪ್ರಖ್ಯಾತ ಲೇಖಕ ಟಾಮ್ ಆಲ್ಟರ್ ಅವರು ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರನ್ನು 2 ವಾರಗಳ ಹಿಂದೆ ಸೈಫಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಟಾಲ್ ಆಲ್ಟರ್ ಅವರಿಗೆ 67 ವರ್ಷ ಪ್ರಾಯವಾಗಿತ್ತು.

ಉತ್ತರಾಖಂಡ್‌ ರಾಜ್ಯದ ಮಸ್ಸೂರಿ ಮೂಲದವರಾದ ಟಾಮ್ ಆಲ್ಟರ್ ಅಮೆರಿಕದಲ್ಲಿ ಜನಿಸಿದ್ದರು. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ 2006ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು .

ಶ್ಯಾಮ್ ಬೆನಗಲ್ ನಿರ್ದೇಶನದ 'ಜುನೂನ್'ನಲ್ಲಿ ಕೇಶವ್ ಕಲ್ಸಿ ಎಂಬ ಗ್ಯಾಂಗ್‌ಸ್ಟರ್ ಪಾತ್ರ ಅವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತ್ತು. ಹಾಲಿವುಡ್‌ನಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ಕ್ರೀಡೆಯಲ್ಲೂ ಅಪಾರ ಆಸಕ್ತಿ ಹೊಂದಿದ್ದ ಅವರು ಕ್ರೀಡಾ ಪತ್ರಕರ್ತ ರಾಗಿಯೂ ಕೆಲಸ ನಿರ್ವಹಿಸಿದ್ದರು . ಸಚಿನ್ ತೆಂಡುಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡುವ ಮುನ್ನ ಸಂದರ್ಶನ ನಡೆಸಿದ ಹಿರಿಮೆ ಆಲ್ಟರ್ ಅವರದ್ದಾಗಿದೆ .ಇಂದು ಹೆಚ್ಚು ಓದಿದ ಸುದ್ದಿಗಳು
►►'ಲವ್ ಜಿಹಾದ್' ತನಿಖೆ: 32 'ಒತ್ತಾಯದ' ಮತಾಂತರಗಳ ಮೇಲೆ ಎನ್‌ಐಎ ಫೋಕಸ್!:
http://bit.ly/2hBmN7O
►►ಎಸ್‌ಐ ಖಾದರ್‌ಗೆ ಧಮಕಿ ಹಾಕಿದ್ದ ಹಿಂಜಾವೇ ನಾಯಕ ಜಗದೀಶ ಕಾರಂತ ಬಂಧನ: http://bit.ly/2xOtIAu
►►ಕಲ್ಲಡ್ಕ ಭಟ್ಟರಿಗೆ ಅನ್ನ ಬೇಡ. ದುಡ್ಡು ಬೇಕು: ಸಚಿವ ರಮಾನಾಥ ರೈ: http://bit.ly/2fwm5ED
►►ದಸರಾ ರಜೆ: ಊರಿಗೆ ಮರಳುವಾಗ ಯುವಕ ಅಪಘಾತಕ್ಕೆ ಬಲಿ: http://bit.ly/2xHGwH2

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ