ಪದ್ಮ ಭೂಷಣ ಪುರಸ್ಕಾರಕ್ಕೆ ಧೋನಿ ಹೆಸರು ಶಿಫಾರಸು

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕ್ರೀಡಾ ಕ್ಷೇತ್ರದಲ್ಲಿ ನೀಡಿರುವ ಸಾಧನೆಯನ್ನು ಗುರುತಿಸಿ, ದೇಶದ ಮೂರನೇ ಅತ್ಯುಚ್ಚ 'ಪದ್ಮ ಭೂಷಣ' ಪೌರ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ.

ಭಾರತೀಯ ಕ್ರಿಕೆಟ್‌ಗೆ ಧೋನಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ವಿಶ್ವಕಪ್ ವಿಜೇತ ತಂಡದ ನಾಯಕನಾಗಿದ್ದ ಧೋನಿ ಹೆಸರನ್ನು ನಾಮನಿರ್ದೇಶನ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಧೋನಿ ಎರಡು ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದಾರೆ. 2011ರಲ್ಲಿ 50 ಓವರ್‌ಗಳ ವಿಶ್ವ ಕಪ್‌ ಮತ್ತು 2007ರಲ್ಲಿ ವಿಶ್ವ ಟಿ-20 ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.

ಧೋನಿ 302 ಏಕದಿನದಲ್ಲಿ 9737 ರನ್ ಮತ್ತು 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್ ಗಳಿಸಿದ್ದಾರೆ. ಅಲ್ಲದೆ 78 ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1212 ರನ್ ಗಳಿಸಿದ್ದಾರೆ.
ಇನ್ನು 16 ಅಂತರಾಷ್ಟ್ರೀಯ ಶತಕ (ಟೆಸ್ಟ್‌‌ನಲ್ಲಿ 6, ಏಕದಿನದಲ್ಲಿ 10) ಮತ್ತು 100 ಅಂತರಾಷ್ಟ್ರೀಯ ಅರ್ಧ ಶತಗಳನ್ನು ಗಳಿಸಿದ್ದಾರೆ.

ಅಲ್ಲದೇ ವಿಕೆಟ್ ಕೀಪರ್ ಆಗಿ ಧೋನಿ 584 ಕ್ಯಾಚ್‌‌ಗಳನ್ನು ಹಿಡಿದಿದ್ದು ಇದರಲ್ಲಿ ಟೆಸ್ಟ್‌ನದು 256 ಏಕದಿನ 285 ಮತ್ತು ಟ್ವೆಂಟಿ-20ಯ 43 ಕ್ಯಾಚ್‌‌ಗಳು ಸೇರಿವೆ.

ಈಗಾಗಲೇ ಅರ್ಜುನ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿರುವ ಧೋನಿ ಪದ್ಮ ಭೂಷಣ ಪ್ರಶಸ್ತಿಗೆ ಅರ್ಹವಾದರೆ ಈ ಪ್ರಶಸ್ತಿ ಪಡೆದ 11ನೇ ಕ್ರಿಕೆಟಿಗರಾಗಲಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಹಾಲಾಡಿ ಬಿಜೆಪಿ ಅಭ್ಯರ್ಥಿ ಎಂದು ನಿರ್ಧಾರವಾಗಿಲ್ಲ: ಶೋಭಾ ಹೇಳಿಕೆಗೆ ಕುಂದಾಪುರ ಬಿಜೆಪಿ ತಿರುಗೇಟು:
http://bit.ly/2fa7tdQ
►►ಹಿಂದೂಗಳು ಇಲ್ಲಿ ವ್ಯಾಪಾರ ಮಾಡಬಾರದೆ? ಬದುಕಬಾರದೆ? ಭಟ್ಕಳದಲ್ಲಿ ಶೋಭಾ ಕೆಂಡಾಮಂಡಲ: http://bit.ly/2w7s2hQ
►►ಕುರಾನ್‌ಗೆ ಅವಮಾನ: ಕಟ್ಟುಕಥೆ ಸಿಎಂ ತನಕ. ಸುಳ್ಳಿಗೆ ಶಾಸಕರಿಬ್ಬರ ಸಾಥ್!: http://bit.ly/2xNUqu2

Related Tags: MS Dhoni, BCCI Nominates, Padma Bhushan Award, Kannada News, Sports News, Cricket News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ