ಯುವ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
16-30 ವರ್ಷದೊಳಗಿನವರು ನವೆಂಬರ್ 1 ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರ ಧರ್ಮಕೇಂದ್ರದ ಧರ್ಮಗುರುಗಳ ಅಥವಾ ಶಿಕ್ಷಣ ಸಂಸ್ಥೆಯ ಶಿಫಾರಸ್ಸು ಪತ್ರವನ್ನು ಲಗತ್ತಿಸಿ ಕಳಿಸತಕ್ಕದ್ದು.

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಕನ್ನಡ ಲಿಪಿಯಲ್ಲಿ ಪ್ರಕಟವಾಗುವ ಕೊಂಕಣಿ ಮಾಸಿಕ ’ನಮಾನ್ ಬಾಳೊಕ್ ಜೆಜು’ಪತ್ರಿಕೆಯ 9ನೇ ವರ್ಷಾಚರಣೆ ಸಂದರ್ಭ ಕ್ರೈಸ್ತ ಕಥೋಲಿಕ ಸಮುದಾಯದಲ್ಲಿ ಯುವ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ‘ಆಕಾಶ್ ಅಮೂಲ್ಯ’ಸಂಸ್ಥೆಯ ಜತೆಗೂಡಿ ’ಎನ್’ಬಿಜೆ ಯುವ ಪ್ರತಿಭಾ ಪುರಸ್ಕಾರ 2017’ ನೀಡುವ ನಿಮಿತ್ತ ಅರ್ಜಿ ಆಹ್ವಾನಿಸಲಾಗಿದೆ.

ಪುರಸ್ಕಾರವು, ’ಉತ್ತೀಮ್ ಕಲಾಕಾರ್ ಪುರಸ್ಕಾರ್’ (ಚಿತ್ರಕಲೆ, ಸಾದರಕಲೆ, ಗಾಯನ, ಸಾಹಿತ್ಯ, ಸಂಗೀತ) ಹಾಗೂ ’ಉತ್ತೀಮ್ ಖೆಳ್ಗಾಡಿ ಪುರಸ್ಕಾರ್” (ಅಥ್ಲೆಟಿಕ್ಸ್, ಗೇಮ್ಸ್) ಎಂಬ ಎರಡು ವಿಭಾಗಗಳಲ್ಲಿ ನೀಡಲಾಗುತ್ತಿದ್ದು, 16-30 ವರ್ಷದೊಳಗಿನವರು ನವೆಂಬರ್ 1 ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವವರು ತಾವಾಗಿಯೆ ಕಳಿಸಬಹುದು ಅಥವಾ ಸಂಬಂಧಪಟ್ಟ ಸಂಘ ಸಂಸ್ಥೆಗಳು ಯೋಗ್ಯ ಪ್ರತಿಭೆಗಳ ಹೆಸರನ್ನು ವಿಳಾಸ, ದೂರವಾಣಿ ಸಂಖ್ಯೆ, ಸಾಧನೆಗಳ ವಿವರ ಮತ್ತು ಸೂಕ್ತ ದಾಖಲೆಗಳಸಹಿತ ಅರ್ಜಿದಾರರು ಒಳಪಡುವ ಧರ್ಮಕೇಂದ್ರದ ಧರ್ಮಗುರುಗಳ ಅಥವಾ ಶಿಕ್ಷಣ ಸಂಸ್ಥೆಯ ಶಿಫಾರಸ್ಸು ಪತ್ರವನ್ನು ಲಗತ್ತಿಸಿ ಕಳಿಸತಕ್ಕದ್ದು.

ಫಲಿತಾಂಶವನ್ನು ನವೆಂಬರ್’ನಲ್ಲಿ ಪ್ರಕಟಗೊಳಿಸಲಾಗುವುದು ಮತ್ತು ಪುರಸ್ಕಾರವನ್ನು ಪತ್ರಿಕೆಯ ವಾರ್ಷಿಕೋತ್ಸವದಂದು ಹಸ್ತಾಂತರಿಸಲಾಗುವುದು.

ಅರ್ಜಿ ಕಳುಹಿಸಲು ವಿಳಾಸ: NBJ YUVA PRATIBHA PURASKAR – 2017, NAMAN BALLOK JESU, Infant Jesus Shrine, Bikarnakatte, Mangalore – 575005.
 

Related Tags: NBJ YUVA PRATIBHA PURASKAR – 2017, NAMAN BALLOK JESU, Infant Jesus Shrine, Bikarnakatte, Mangalore, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕೊಂಕಣಿ ಮಾಸಿಕ ’ನಮಾನ್ ಬಾಳೊಕ್ ಜೆಜು’ಪತ್ರಿಕೆಯ 9ನೇ ವರ್ಷಾಚರಣೆ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ