ಮಸ್ಕತ್ ಅಪಘಾತ: ಕಾನೂನು ಹೋರಾಟದಲ್ಲಿ ಐಎಸ್ಎಫ್ ಜಯ
ಐಎಸ್ಎಫ್ ಮಸ್ಕತ್ ದಣಿವರಿಯದ ಕಾನೂನು ಹೋರಾಟದ ಫಲವಾಗಿ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ 25,16,866ರೂ. ಮೊತ್ತದ ಚೆಕ್ ಹಸ್ತಾಂತರ

ಅಬ್ದುಲ್ ಮುಬಾರಕ್ ಕಾರಾಜೆ/ಕರಾವಳಿ ಕರ್ನಾಟಕ ವರದಿ

ಮಸ್ಕತ್:
ಮೇ.28, 2015ರಂದು ಓಮನ್ ರಾಜಧಾನಿ ಮಸ್ಕತ್ ಸಮೀಪ ಸೂರ್ ಜಾಲಾನ್ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವಪ್ಪಿದ ಬಂಟ್ವಾಳದ ಮುಸ್ತಫಾ ಎಂಬ ಯುವಕನ ಕುಟುಂಬಕ್ಕೆ ಪರಿಹಾರ ಮೊತ್ತ ಒದಗಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಮಸ್ಕತ್ ಕರ್ನಾಟಕ ಚಾಪ್ಟರ್ ಯಶಸ್ವಿಯಾಗಿದೆ.

ಸತತ ಎರಡು ವರ್ಷ ಇಂಡಿಯನ್ ಸೋಶಿಯಲ್ ಫೋರಂ ನಡೆಸಿದ ದಣಿವರಿಯದ ಕಾನೂನು ಹೋರಾಟದ ಫಲವಾಗಿ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ 25,16,866ರೂ. ಮೊತ್ತದ ಚೆಕ್ ಹಸ್ತಾಂತರವಾಗಿದೆ.

ಪರಿಹಾರ ಮೊತ್ತದ ಚೆಕ್ ಮುಸ್ತಾಫಾ ಅವರ ತಾಯಿ ಬೀಫಾತಿಮಾ ಅವರ ಕೈಸೇರಿದೆ. ಈ ಬಗ್ಗೆ ಬೀಫಾತಿಮಾ ಐ.ಎಸ್.ಎಫ್ ಸಂಘಟನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮೃತ ಯುವಕ ಮೊಹ್ಮದ್ ಮುಸ್ತಾಫಾ ಅವರು ಅಸ್ವಸ್ಥೆ ತಾಯಿ ಮತ್ತು ಮೂವರು ಸಹೋದರಿಯರನ್ನು ಹೊಂದಿದ್ದ ಬಡ ಕುಟುಂಬದ ಆಸರೆಯಾಗಿದ್ದರು.

ಮಸ್ಕತ್ ನಲ್ಲಿ ಉದ್ಯೋಗಕ್ಕಾಗಿ ಬಂದಿದ್ದ ಮುಸ್ತಾಫಾ ಅವರು ಕಾರು ಅಪಘಾತದಲ್ಲಿ ಸಾವಪ್ಪಿದ್ದು ಕುಟುಂಬ ಕುಟುಂಬದ ಆಧಾರ ಸ್ತಂಭವೇ ಮುರಿದಂತಾಗಿ ಶೋಕದ ಕಡಲಲ್ಲಿ ಮುಳುಗಿತ್ತು.

ಈ ಸಂದರ್ಭ ಸರಕಾರಿ ರಜೆ ಇದ್ದರೂ ಇಂಡಿಯನ್ ಸೋಶಿಯಲ್ ಫೋರಂ ಅವರ ಮಾನವೀಯ ನೆಲೆಯ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಎರಡು ದಿನಗಳಲ್ಲೇ ಮೃತದೇಹ ತವರೂರು ಪರ್ಲಿಯಾಕ್ಕೆ ತಲುಪಿತ್ತು.

ಮೃತ ಯುವಕನ ಕುಟುಂಬಕ್ಕೆ ಪರಿಹಾರ ಮೊತ್ತಕ್ಕಾಗಿ ಐ.ಎಸ್.ಎಫ್ ಅಧಿಕಾರಿಗಳನ್ನು, ರಾಯಭಾರ ಕಚೇರಿಯನ್ನು, ವಿಮಾ ಸಂಸ್ಥೆಯ ವಕೀಲರನ್ನು ಸಂಪರ್ಕಿಸಿ ಪರಿಹಾರ ಮೊತ್ತಕ್ಕಾಗಿ ಕಾನೂನು ಹೋರಾಟ ರೂಪಿಸಿತ್ತು.

ಇಂಡಿಯನ್ ಸೋಶಿಯಲ್ ಫೋರಂ ಸಂಘಟನೆಯ ಕಾನೂನು ಹೋರಾಟದ ನಿಯೋಗದಲ್ಲಿ ನಝೀರ್ ಕೋಡಿಂಬಾಡಿ, ಅನ್ವರ್ ಮೂಡುಬಿದಿರೆ, ಸಲಾಮ್ ತುಂಬೆ ಸಹಕರಿಸಿದ್ದರು.

ಇಂಡಿಯನ್ ಸೋಶಿಯಲ್  ಫೋರಂ ಸಂಘಟನೆ ಸದಸ್ಯರು ಗಲ್ಫ್ ನಲ್ಲಿ ಭಾರತದ ಜನರು ಕಷ್ಟದಲ್ಲಿ ಸಿಲುಕಿದಾಗ ಅವರ ಜಾತಿ-ಧರ್ಮ, ಯಾವ ಪ್ರದೇಶದವರು ಎಂಬುದನ್ನು ಪರಿಗಣಿಸದೇ, ಭಾರತೀಯರ ನೆರವಿಗೆ ಲಾಭ-ನಷ್ಟದ ಕಿಂಚಿತ್ ಲೆಕ್ಕಾಚಾರವಿಲ್ಲದೇ ನೆರವಿಗೆ ಧಾವಿಸುತ್ತಿರುವುದು ಗಮನಾರ್ಹವಾಗಿದೆ.

ಇದನ್ನೂ ಓದಿ:
►►Muscat Accident: Indian Social Forum wins legal fight:
http://bit.ly/2x35VdU

Related Tags: Indian Social Forum Muscat Karnataka Chapter, Karavali Karnataka, Latest Gulf News, Nazir Kodimbadi, Anwar Moodabidri, Salam Thumbe, Bantwal News, ಇಂಡಿಯನ್ ಸೋಶಿಯಲ್ ಫೋರಂ ಮಸ್ಕತ್, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಮಸ್ಕತ್ ಸುದ್ದಿ, ಬಂಟ್ವಾಳ ಸುದ್ದಿ, ಅಬ್ದುಲ್ ಮುಬಾರಕ್ ಕಾರಾಜೆ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ