ಜೆಟ್ ಏರ್ವೇಸ್: 3 ದಿನಗಳ ‘ಬ್ಯಾಕ್ ಟು ವೆಕೇಶನ್’ ಸೇಲ್
ಸೆ.15ರಿಂದ ಮೂರು ದಿನಗಳ ಪ್ರಮೋಶನಲ್ ಸೇಲ್ ಕೊಡುಗೆ. ಭಾರತ ಮತ್ತು ಇತರ ದೇಶಗಳಿಗೆ ಜೆಟ್ ಏರ್ವೇಸ್ ನೇರ ಯಾನಗಳ ಮೇಲೆ 12% ಆಕರ್ಷಕ ದರ ಕಡಿತ.

ಕರಾವಳಿ ಕರ್ನಾಟಕ ವರದಿ

ಕುವೈಟ್:
ಭಾರತದ ಅಗ್ರಗಣ್ಯ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಜೆಟ್ ಏರ್ವೇಸ್ ತನ್ನ ಪ್ರಯಾಣಿಕರು ಮತ್ತೆ ಮತ್ತೆ ರಜೆಯ ಮಜಾ ಅನುಭವಿಸಬೇಕೆಂದು ಬಯಸಿದೆ!

ಸೆಪ್ಟೆಂಬರ್ 15, 2017 ರಿಂದ ಆರಂಭಗೊಂಡು ರವಿವಾರ ಸೆಪ್ಟೆಂಬರ್ 17, 2017ರ ತನಕ ಮೂರು ದಿನ ಜೆಟ್ ಏರ್ವೇಸ್ ಗಲ್ಫ್‌ನಿಂದ ಭಾರತಕ್ಕೆ ಹಾಗೂ ಬ್ಯಾಂಕಾಕ್, ಕೊಲಂಬೊ, ಢಾಕಾ, ಹಾಂಗ್ ಕಾಂಗ್, ಕಠ್ಮಂಡು, ಸಿಂಗಾಪುರಗಳಿಗೆ ಜೆಟ್ ಏರ್ವೇಸ್ ನೇರ ಯಾನಗಳ ಮೇಲೆ 12% ಆಕರ್ಷಕ ದರ ಕಡಿತ ಪ್ರಕಟಿಸಿದೆ.

ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದಲ್ಲಿ ಈ ಸೀಮಿತ ಅವಧಿಯ ದರ ಕಡಿತ ಮಾರಾಟ ಕೊಡುಗೆಯು ಜೆಟ್ ಏರ್ವೇಸ್ ಪ್ರಯಾಣಿಕರಿಗೆ ತಮ್ಮ ಕುಟುಂಬ ಸದಸ್ಯರು, ಗೆಳೆಯರೊಂದಿಗೆ ತಮ್ಮ ರಜಾದಿನಗಳನ್ನು ಮುಂಚಿತವಾಗಿಯೇ ಯೋಜಿಸಲು ಅನುವು ಮಾಡಿಕೊಡುತ್ತದೆ.

ಈ ಪ್ರಮೋಶನ್ ಕೊಡುಗೆ ಅಂಗವಾಗಿ ಖರೀದಿಸಲಾದ ಟಿಕೆಟ್‌ಗಳನ್ನು (ಸೆ.15,2017) ರಿಂದ ಮೇ31, 2018ರ ತನಕ ಬಳಸಬಹುದಾಗಿರುವುದು ಈ ಕೊಡುಗೆಯ ವೈಶಿಷ್ಠ್ಯವಾಗಿದೆ.


ಈ ವಿಶೇಷ ದರ ಕಡಿತವು ಜೆಟ್ ಏರ್ವೇಸ್ ನೇರ ಯಾನಗಳಿಗೆ ಮಾತ್ರ ಅನ್ವಯಿಸುತ್ತದೆ. ಜೆಟ್ ಏರ್ವೇಸ್ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು www.jetairways.com ಮೂಲಕ ಅಥವಾ ಜೆಟ್ ಏರ್ವೇಸ್ ಮೊಬೈಲ್ ಆಪ್ ಬಳಸಿ ಬುಕ್ ಮಾಡಬಹುದಾಗಿದೆ.

ಜೆಟ್ ಏರ್ವೇಸ್ ಸಂಸ್ಥೆಯ ಗಲ್ಫ್, ಮಿಡ್ಲ್ ಈಸ್ಟ್, ಆಫ್ರಿಕಾದ ಉಪಾಧ್ಯಕ್ಷ ಶಾಕಿರ್ ಕಾಂತಾವಾಲಾ ಅವರು ಬ್ಯಾಕ್ ಟು ವೆಕೇಶನ್ ಮಾರಾಟ ಕೊಡುಗೆಯು ವಿಶೇಷವಾಗಿ ರಜಾದಿನಗಳಿಂದ ಮರಳುತ್ತಿರುವ ನಮ್ಮ ಅಥಿತಿಗಳು ತಮ್ಮ ಮುಂದಿನ ಭಾರತ ಮತ್ತು ಇತರ ದೇಶಗಳ ಪ್ರಯಾಣವನ್ನು ಸಮಯಕ್ಕೆ ಸರಿಯಾಗಿ ಮುಂಚಿತವಾಗಿ ಯೋಜಿಸಲು ಇನ್ನೊಂದು ಆಕರ್ಷಕ ಕೊಡುಗೆಯಾಗಿದ್ದು, ನಮ್ಮ ಗ್ರಾಹಕ ಅತಿಥಿಗಳನ್ನು ಈ ಮೂಲಕ ಪುರಸ್ಕರಿಸುತ್ತಿದ್ದೇವೆ.

ಜೆಟ್ ಏರ್ವೇಸ್ ವಿಮಾನದಲ್ಲಿ ಪ್ರಯಾಣಿಸುವವರಿಗೆ ಇದೊಂದು ವಿಶೇಷ ಮೌಲ್ಯಯುತ ಸೇವೆಯಾಗಿದೆ ಎಂದು ಶಾಕಿರ್ ಕಾಂತಾವಾಲಾ ಯೋಜನೆಯ ಮಹತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Tags: Shakir Kantawala, Vice President - Gulf, Middle East & Africa, Jet Airways, JET AIRWAYS ANNOUNCES 3-DAY ‘BACK TO VACATION’ SALE , Karavali Karnataka Gulf News, Karavalikarnataka Kuwait News,Kannada News, ಬ್ಯಾಕ್ ಟು ವೆಕೇಶನ್ ಸೇಲ್.
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ