ಯುನೈಟೆಡ್ ಬ್ರಹ್ಮಾವರೈಟ್ಸ್ ಅಧ್ಯಕ್ಷರಾಗಿ ಡೆರೆಲ್ ಮಿನೇಜಸ್

ಕರಾವಳಿ ಕರ್ನಾಟಕ ವರದಿ

ದುಬೈ:
ಸಮಾಜ ಸೇವೆ ಮತ್ತು ಸಾಮಾಜಿಕ ಕಾಳಜಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಯಶಸ್ವಿ ಏಳನೇ ವರ್ಷದಲ್ಲಿರುವ ‘ಯುನೈಟೆಡ್ ಬ್ರಹ್ಮಾವರೈಟ್ಸ್’ ಅಧ್ಯಕ್ಷರಾಗಿ ಡೆರೆಲ್ ಮಿನೇಜಸ್ ಆಯ್ಕೆಯಾಗಿದ್ದಾರೆ.

ಡೆರೆಲ್ ಮಿನೇಜಸ್ ಅವರು ತಮ್ಮ ಯೌವನದ ದಿನಗಳಲ್ಲಿ ಐ.ಸಿ.ವೈ.ಎಂ ಸಂಘಟನೆಯಲ್ಲಿ ಸಕ್ರಿಯರಾಗಿದ್ದು, ಬ್ರಹ್ಮಾವರ ಐ.ಸಿ.ವೈ.ಎಂ ಘಟಕದ ಅಧ್ಯಕ್ಷರಾಗಿ ಜನಾನುರಾಗಿಯಾಗಿದ್ದರು. ಓರ್ವ ಅತ್ಯುತ್ತಮ ನಟ ಮತ್ತು ನಿರೂಪಕರಾಗಿ ತನ್ನ ಚರ್ಚ್ ನಲ್ಲಿ ಖ್ಯಾತಿ ಪಡೆದಿದ್ದರು.

ನಿರ್ಗಮನ ಅಧ್ಯಕ್ಷ ಜೀವನ್ ಸಿಕ್ವೇರಾ ಮತ್ತು ಕಾರ್ಯದರ್ಶಿ ಫಿಲೋಮಿನಾ ಡಿ’ಕೊಸ್ಟಾ ಅವರು ಯುನೈಟೆಡ್ ಬ್ರಹ್ಮಾವರೈಟ್ಸ್ ಸಂಘಟನೆಗೆ ಸಲ್ಲಿಸಿದ ಸೇವೆಯನ್ನು ಡೆರೆಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಂಘಟನೆಯನ್ನು ಸದಸ್ಯರ ಬೆಂಬಲದೊಂದಿಗೆ ಯಶಸ್ಸಿನತ್ತ ಕೊಂಡೊಯ್ಯಲು ಇವರ ಶ್ರಮವನ್ನು ನೂತನ ಅಧ್ಯಕ್ಷ ಡೆರೆಲ್ ತನ್ನ ಭಾಷಣದಲ್ಲಿ ಸ್ಮರಿಸಿದ್ದಾರೆ.


ಡೆರೆಲ್ ಅವರಿಗೆ ಇವೆಂಟ್ ಆರ್ಗನೈಝರ್ ಆಗಿ ಖ್ಯಾತಿವೆತ್ತ ಉಪಾಧ್ಯಕ್ಷ ಡೆರಿಕ್ ಬಾಂಝ್ ಮತ್ತು ತುಳು ಹಾಗೂ ಕೊಂಕಣಿ ನಾಟಕಗಳಲ್ಲಿ ನಟಿಸಿರುವ ಬಹುಮುಖ ಪ್ರತಿಭೆ ಕಾರ್ಯದರ್ಶಿ ಜಾನೆಟ್ ಸಿಕ್ವೇರಾ ತಮ್ಮ ಜವಾಬ್ದಾರಿ ನಿರ್ವಹಿಸಲು ಸಹಕರಿಸಲಿದ್ದಾರೆ.

ನಿರ್ಗಮನ ಅಧ್ಯಕ್ಷ ಜೀವನ್ ಸಿಕ್ವೇರಾ ಮತ್ತು ಕಾರ್ಯದರ್ಶಿ ಫಿಲೋಮಿನಾ ಡಿ’ಕೋಸ್ಟಾ ಅವರು ತಮ್ಮ ಜವಾಬ್ದಾರಿಯನ್ನು ನೂತನ ತಂಡಕ್ಕೆ ವರ್ಗಾಯಿಸಿದ್ದು, ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಕೋರಿದರು.

United Brahmavarites 2017-2018ರ ಸಾಲಿನ ಪದಾಧಿಕಾರಿಗಳು
ಅಧ್ಯಕ್ಷ: ಡೆರೆಲ್ ಮಿನೇಜಸ್
ಉಪಾಧ್ಯಕ್ಷ: ಡೆರಿಕ್ ಬಾಂಜ್, ಕಾರ್ಯದರ್ಶಿ: ಜಾನೆಟ್ ಸಿಕ್ವೇರಾ
ಜೊತೆ ಕಾರ್ಯದರ್ಶಿ: ಲವೀನಾ ಡಿ’ಆಲ್ಮೇಡಾ, ಖಜಾಂಚಿ: ರುಪರ್ಟ್ ಡಿ’ಆಲ್ಮೇಡಾ
ಸಹ ಖಜಾಂಚಿ: ಶೇಖರ್, ಸಾಂಸ್ಕೃತಿಕ ಕಾರ್ಯದರ್ಶಿ: ಫಿಲೋಮಿನಾ ಡಿ’ಕೊಸ್ಟಾ
ಸಾಂಸ್ಕೃತಿಕ ಜೊತೆ ಸಂಚಾಲಕರು: ಜಸಿಂತಾ ಕ್ರಾಸ್ತಾ, ನತಾಶಾ ಬಾಂಜ್ ಮತ್ತು ರೋಡಿನಿ ಮಿನೇಜಸ್
ಮಾನವ ಸಂಪನ್ಮೂಲ: ಪ್ರಕಾಶ್ ಸಿಕ್ವೇರಾ ಮತ್ತು ರೋಶನ್ ಡಿ’ಆಲ್ಮೇಡಾ
ಮಾಧ್ಯಮ ಪ್ರತಿನಿಧಿ: ಮೈಕೆಲ್ ಡಿ’ಸಿಲ್ವಾ, ಕಿರಣ ಪಿಂಟೊ ಮತ್ತು ನವೀನ್ ಸಿಕ್ವೇರಾ
ಸ್ಥಾಪಕ ಅಧ್ಯಕ್ಷ: ಜೀವನ್ ಸಿಕ್ವೇರಾ

Related Tags: Dubai News, Gulf News, Deral Menezes Elected President of United Brahmavarites, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಡೆರೆಲ್ ಮಿನೇಜಸ್, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ