ಕಲ್ಲಡ್ಕ ಭಟ್ಟರ ಶಾಲೆಗೆ 26ಲಕ್ಷ ನೀಡಿದ ಗಣಿ ರೆಡ್ಡಿ
ಕಲ್ಲಡ್ಕ ಪ್ರಭಾಕರ್ ಭಟ್ಟರು ಸಮಸ್ಯೆಯಲ್ಲಿರುವಾಗ ಮನೆಯಲ್ಲಿ ಕುಳಿತು ನೋಡುತ್ತಾ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. 80ಲಕ್ಷ ರೂ. ಸಂಗ್ರಹಿಸುವ ವಿಶ್ವಾಸ.

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ:
ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಭೇಟಿ ನೀಡಿ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಭೇಟಿ ಮಾಡಿದ್ದಾರೆ.

ಹದಿಮೂರು ವರ್ಷಗಳ ಬಳಿಕ ತಾನು ಇಲ್ಲಿಗೆ ಭೇಟಿ ನೀಡುತ್ತಿದ್ದೇನೆಂದು ಹೇಳಿದ ಜನಾರ್ದನ ರೆಡ್ಡಿ, ತಾನು ಮತ್ತು ಮಿತ್ರರು ಸೇರಿ 26ಲಕ್ಷ ರೂ.ಗಳನ್ನು ವಿದ್ಯಾಕೇಂದ್ರಕ್ಕೆ ನೀಡುತ್ತಿರುವುದಾಗಿ ಪ್ರಕಟಿಸಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಯ ಮಕ್ಕಳಿಗೆ ಊಟಕ್ಕೆ ತೊಂದರೆಯಾದಾಗ ನಾವದನ್ನು ಮನೆಯಲ್ಲಿ ಕುಳಿತು ನೋಡುತ್ತಾ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ರೆಡ್ಡಿ ಹೇಳಿದರು.

ಸರಕಾರ ಅನುದಾನ ತಡೆಹಿಡಿಯುವ ತನ್ನ ನಿರ್ಧಾರಕ್ಕೆ ಅಂಟಿಕೊಂಡು ಕುಳಿತರೂ ಕೂಡ ಶಾಲೆಗೆ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ರೆಡ್ಡಿ ಹೇಳಿದರು.

ಕಲ್ಲಡ್ಕ ಪ್ರಭಾಕರ ಭಟ್ಟರ ‘ಭಿಕ್ಷಾಂದೇಹಿ’ ಯೋಜನೆಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಈ ಯೋಜನೆಯ ಹಿಂದಿರುವ ಮಹೇಶ್ ವಿಕ್ರಮ್ ಹೆಗ್ಡೆಯವರು ಜನಾರ್ದನ ರೆಡ್ಡಿಯವರು ನೀಡಿದ ಇಪ್ಪತ್ತಾರು ಲಕ್ಷ ಸೇರಿ ಒಟ್ಟು ಮುವತ್ತೆಂಟು ಲಕ್ಷ ರೂ.ಗಳನ್ನು ಆಂದೋಲನ ಶುರುವಾದ ಒಂಬತ್ತೇ ದಿನಕ್ಕೆ ಸಂಗ್ರಹಿಸಿದ್ದೇವೆ ಎಂದು ಹೇಳಿದರು.

80ಲಕ್ಷ ರೂ.ಗಳನ್ನು ಸಂಗ್ರಹಿಸಿಕೊಡುವ ಗುರಿ ತಲುಪುವ ವಿಶ್ವಾಸವಿದೆ. ಈಗಾಗಲೇ 5ಸಾವಿರ ಕೆ.ಜಿ. ಅಕ್ಕಿ ಸಂಗ್ರಹವಾಗಿದೆ ಎಂದರು.




ಜನಾರ್ದನ ರೆಡ್ಡಿ ಶಾಲಾ ಮಕ್ಕಳ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಕಲ್ಲಡ್ಕ ಪ್ರಭಾಕರ ಭಟ್ ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು.
 

ಇದನ್ನೂ ಓದಿ:
►►ಶೋಭಾ ಮಡಿಕೇರಿ ಆಸ್ತಿಯ ಒಂದಂಶ ಕೊಟ್ಟರೆ ಮಕ್ಕಳಿಗೆ ಜೀವನ ಪರ್ಯಂತ ಊಟ:
http://bit.ly/2i7LkkK
►►'ಮುಷ್ಠಿ ಅಕ್ಕಿ ಭಿಕ್ಷೆ ಅಭಿಯಾನ’ಕ್ಕೆ ಶೋಭಾ ಚಾಲನೆ http://bit.ly/2fOf2dF
►►ಕಲ್ಲಡ್ಕ ಶಾಲೆಗೆ ನೆರವು ಸ್ಥಗಿತ: ಆನ್ಲೈನ್ನಲ್ಲಿ ಶುರುವಾಗಿದೆ 'ಭಿಕ್ಷಾಂ ದೇಹಿ ಅಭಿಯಾನ": http://bit.ly/2vCBU5C
►►ಬಿಸಿಯೂಟ ಬೇಡವೆಂದು ಬರೆದುಕೊಟ್ಟಿದ್ದ ಭಟ್ಟರು. ಈಗಲೂ ಅರ್ಜಿ ಹಾಕಲಿ: ರಮಾನಾಥ ರೈ: http://bit.ly/2uGdvcx
►►ಕಲ್ಲಡ್ಕ ಶಾಲೆಗೆ ನೆರವು ನಿಲ್ಲಿಸಿದ್ದು ಕ್ರೌರ್ಯ. ಭಟ್ಟರು ದರೋಡೆಕೋರರಲ್ಲ: ಜನಾರ್ದನ ಪೂಜಾರಿ: http://bit.ly/2vP11Db
►►ಕಲ್ಲಡ್ಕ ಶಾಲೆಗೆ ಕೊಟ್ಟ ಹಣ ದುರುಪಯೋಗವಾಗಿದೆ. ವಸೂಲಿ ಮಾಡಲಾಗುವುದು: ರಮಾನಾಥ ರೈ: http://bit.ly/2fzuV7C
►►ಕೊಲ್ಲೂರು ನೆರವು ಸ್ಥಗಿತ: ಕಲ್ಲಡ್ಕ ಶಾಲಾ ಮಕ್ಕಳಿಂದ ಖಾಲಿ ತಟ್ಟೆ ಬಡಿದು ಪ್ರತಿಭಟನೆ: http://bit.ly/2uunaqv
►►ಕೊಲ್ಲೂರು ದೇವಳದ ನೆರವು ಸ್ಥಗಿತ: ಕಲ್ಲಡ್ಕ ಪ್ರಭಾಕರ ಭಟ್ ಹಾಕಿದ ಸವಾಲು ಏನು ಗೊತ್ತೆ?: http://bit.ly/2vmrZ2l
►►ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!: http://bit.ly/2ukYD71

Related Tags: Janardhan Reddy visits Kalladka school, donates Rs 26 lacs, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿಕರ್ನಾಟಕ, ಕಲ್ಲಡ್ಕ ಸುದ್ದಿ, ಕಲ್ಲಡ್ಕ ಪ್ರಭಾಕರ ಭಟ್, ಜನಾರ್ದನ ರೆಡ್ಡಿ, ಕನ್ನಡ ಸುದ್ದಿ, ಕರಾವಳಿ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ