ಶಾರ್ಜಾ: ಕಾರಿನಿಂದ ಬಿದ್ದು ಮಾಜಿ ಬಿಜೆಪಿ ಕೌನ್ಸಿಲರ್ ಸಾವು

ಕರಾವಳಿ ಕರ್ನಾಟಕ ವರದಿ
ಕಾಸರಗೋಡು:
ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಬಿದ್ದು ಜಿಲ್ಲೆಯ ಅಡುಕ್ಕತ್ ವಯಲ್ ಬೀಚ್ ಏರಿಯಾ ನಿವಾಸಿ ಸುನೀತಾ ಪ್ರಶಾಂತ್(40) ಎಂಬವರು ಸಾವಪ್ಪಿದ ಘಟನೆ ವರದಿಯಾಗಿದೆ.

ಸುನೀತಾ ಅವರು ಕಾರಿನಿಂದ ಬಿದ್ದಾಗ ಅವರ ತಲೆ ನೆಲಕ್ಕಪ್ಪಳಿಸಿತ್ತು.

ಕಾಸರಗೋಡು ಪುರಸಭೆಯಲ್ಲಿ ಬಿಜೆಪಿ ಕೌನ್ಸಿಲರ್ ಆಗಿದ್ದ ಸುನೀತಾ ಅವರು ಐದು ವರ್ಷಗಳಿಂದ ಶಾರ್ಜಾದಲ್ಲಿ ಬ್ಯುಟೀಷಿಯನ್ ಆಗಿದ್ದರು.

2011ರಲ್ಲಿ ವಿದಾನಸಭಾ ಚುನಾವಣೆಯಲ್ಲಿ ಉದುಮ ಕ್ಷೇತ್ರದ ಅಭ್ಯರ್ಥಿಯಾಗಿದ್ದರು ಎಂದು ಶಾರ್ಜಾದ ಇಂಡಿಯನ್ ಪೀಪಲ್ಸ್ ಫೋರಂ ಅಧ್ಯಕ್ಷ ಗಣೇಶ್ ಅರಮಂಗಣಂ ತಿಳಿಸಿದ್ದಾರೆ.

ಸಲೂನ್ ಮಾಲಕಿ ಸುನೀತಾ ಸೇರಿದಂತೆ ಇತರ ಸಹೋದ್ಯೋಗಿಗಳನ್ನು ಅವರು ನೆಲೆಸಿದ್ದ ಫ್ಲ್ಯಾಟ್ ಒಂದಕ್ಕೆ ಎಂದಿನಂತೆ ಕೊಂಡೊಯ್ಯುವ ಸಂದರ್ಭ ಕಾರಿನ ಬಾಗಿಲು ಆಕಸ್ಮಿಕವಾಗಿ ತೆರೆಯಲ್ಪಟ್ಟಿದ್ದು, ಸುನೀತಾ ರಸ್ತೆಗೆ ಎಸೆಯಲ್ಪಟ್ಟಿದ್ದರು, ಅವರ ತಲೆ ಬೀದಿ ದೀಪಕ್ಕೆ ಗುದ್ದಿತ್ತು.


ಈ ಸಂದರ್ಭ ಕಾರು ಚಲಾಯಿಸುತ್ತಿದ್ದ ಸಲೂನ್ ಮಾಲಕಿ ಗಾಬರಿಯಿಂದ ಏನಾಯ್ತು ಎಂದು ಹಿಂತಿರುಗಿ ನೋಡಿದಾಗ ಕಾರು ರಸ್ತೆ ವಿಭಾಜಕಕ್ಕೆ ಗುದ್ದಿದೆ.

ಕಾರಿನಲ್ಲಿದ್ದ ಇತರರಿಗೂ ಗಾಯಗಳಾಗಿವೆ. ಸಲೂನ್ ಮಾಲಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ದಹಿದ್ ಆಸ್ಪತ್ರೆಯಲ್ಲಿ ಸುನೀತಾ ಶವ ಇರಿಸಲಾಗಿದೆ.

ಆರ್ಥಿಕ ಸಮಸ್ಯೆಯಿಂದ ಐದು ವರ್ಷಗಳ ಹಿಂದೆ ಶಾರ್ಜಾಕ್ಕೆ ತೆರಳುವ ಮುಂಚೆ ಸುನೀತಾ ಕೇರಳ ರಾಜಕಾರಣದಲ್ಲಿ ಅತ್ಯಂತ ಸಕ್ರಿಯರಾಗಿದ್ದರು. ಶಾರ್ಜಾದಲ್ಲಿ ಕೂಡ ಆಕೆ ಭಾರತೀಯ ಸಂಘಟನೆಗಳಲ್ಲಿ, ಇಂಡಿಯನ್ ಪೀಪಲ್ಸ್ ಫೋರಂ ಮುಂತಾದೆಡೆ ಸಕ್ರಿಯರಾಗಿದ್ದರು.

ಗೆಳೆಯರೊಬ್ಬರ ನೆರವಿನಿಂದ ಆರ್ಥಿಕ ಸಮಸ್ಯೆ ಪರಿಹಾರಕ್ಕೆ ತನ್ನ ಆಸಕ್ತಿಯ ರಾಜಕೀಯ ಕ್ಷೇತ್ರವನ್ನು ತೊರೆದ ಸುನೀತಾ ಅವರ ಆಕಸ್ಮಿಕ ಸಾವು ಅವರ ಹಿತೈಷಿಗಳನ್ನು ಕಂಗೆಡಿಸಿದೆ.

ಸುನೀತಾ ಅವರ ಪತಿ ಕೇರಳದಲ್ಲಿದ್ದವರು ಮೂರು ತಿಂಗಳ ವಿಸಿಟಿಂಗ್ ವೀಸಾದಲ್ಲಿ ಪತ್ನಿಯನ್ನು ಕಾಣಲು ದುಬೈಗೆ ಹೋಗಿದ್ದರು. ಅವರು ಈಗ ಬುರ್ ದುಬೈಯಲ್ಲಿ ಒಂದು ಕೋಣೆಯಲ್ಲಿದ್ದಾರೆ. ಪತ್ನಿಯ ಶವ ಊರಿಗೆ ತರುವ ಪ್ರಕ್ರಿಯೆಯನ್ನು ಆಕೆಯ ಅಗಲಿಕೆಯ ನೋವಿನ ನಡುವೆ ಮಾಡುತ್ತಿರುವುದು ಕರುಣಾಜನಕವಾಗಿದೆ.

ಪತಿ ಮತ್ತು ಇಬ್ಬರು ಮಕ್ಕಳನ್ನು ಸುನೀತಾ ಅಗಲಿದ್ದಾರೆ.

Related Tags: BJP Councillor Sunitha Prashanth Death, UAE Accident, Sharjah Accident, Bur Dubai, Beautician Death, Ganesh Aramanganam, President Indian People’s Forum Sharjah
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ