22 ಕೆ.ಜಿ ಗಾಂಜಾ ಸಹಿತ ಆರೋಪಿ ಬಂಧನ

ಕರಾವಳಿ ಕರ್ನಾಟಕ ವರದಿ
ಮಂಜೇಶ್ವರ:
ಇಲ್ಲಿನ ಪೊಲೀಸರು ಮಧ್ಯರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪದಲ್ಲಿ ಓರ್ವನನ್ನು ಬಂಧಿಸಿದ್ದಾರೆ.

ಹೊಸಬೆಟ್ಟು ಕಡಪ್ಪುರದ ಅಬುಬಕರ್ ಸಿದ್ದೀಕ್(30) ಬಂಧಿತ ಆರೋಪಿ. ಈತನಿಂದ 22ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈತನೊಂದಿಗಿದ್ದ ಇಬ್ಬರು ಪರಾರಿಯಾಗಿದ್ದಾರೆ.

ತೂಮಿನಾಡಿನ ಬಾಡಿಗೆ ವಸತಿ ಕೋಣೆಯೊಂದರ ಮೇಲೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿದಾಗ ಆರೋಪಿ ಆಂದ್ರಪ್ರದೇಶದಿಂದ ಗಾಂಜಾ ತಂದು ಕಾಸರಗೋಡು, ಮಂಗಳೂರು ಮುಂತಾದೆಡೆ ಮಾರಾಟ ಮಾಡುವ ಸಂಗತಿ ಬಯಲಾಗಿದೆ.

ಆಗಸ್ಟ್ ಆರನೇ ತಾರೀಕಿನಂದು ಆಂದ್ರಪ್ರದೇಶಕ್ಕೆ ತೆರಳಿ 5ಸಾವಿರ ರೂ. ನೀಡಿ ಮುವತ್ತು ಕೆ.ಜಿ ಗಾಂಜಾ ತಂದು ಐವತ್ತು ಸಾವಿರ ರೂ.ಗೆ ಮಾರುವ ಯೋಜನೆ ಆರೋಪಿಗಳದಾಗಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ.

ಕಳೆದ ತಿಂಗಳಲ್ಲಿ 60ಕೆ.ಜಿ ಗಾಂಜಾವನ್ನು ಆರೋಪಿ ಕರ್ನಾಟಕದಲ್ಲಿ ಮಾರಿದ್ದ ಸಂಗತಿಯೂ ಬಯಲಾಗಿದೆ.


ದಾಳಿ ನಡೆದ ಸಂದರ್ಭ 8ಕೆ.ಜಿ ಗಾಂಜಾ ಮಾರಾಟ ಮಾಡಿದ ಸಂಗತಿ ಆರೋಪಿ ತಿಳಿಸಿದ್ದಾನೆ.
ಪರಾರಿಯಾದ ಇಬ್ಬರಿಗಾಗಿ ಪೊಲೀಸ್ ಶೋಧ ಮುಂದುವರಿದಿದೆ.

Related Tags: Vishakapatnam, Andhra Pradesh, Manjeshwar Drug Racket Busted, Police Seize 22 kg Ganja, Main Peddler Arrested, Abubakkar Arrest, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ