ಪ್ರತಿಭಟನಾ ಬ್ಯಾನರ್‌ನಲ್ಲಿ ಬಿಜೆಪಿ ಎಡವಟ್ಟು: ಶರತ್ ಮಡಿವಾಳ್ ಬದಲಿಗೆ.......

ಕರಾವಳಿ ಕರ್ನಾಟಕ ವರದಿ
ಉಡುಪಿ
:  ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಬಿಜೆಪಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಉಪಯೋಗಿಸಲಾದ ಬ್ಯಾನರಿನಲ್ಲಿ ಶರತ್ ಮಡಿವಾಳ ಎಂದು ಬರೆಯುವ ಬದಲು ಪ್ರಶಾಂತ್ ಮಡಿವಾಳ ಹತ್ಯೆ ಎಂದು ಬರೆಯುವುದರ ಮೂಲಕ ಬಿಜೆಪಿಯವರ ಬೇಜವಾಬ್ದಾರಿತನ ಮತ್ತೆ ಬಯಲಾಗಿದೆ.

ಪ್ರತಿಭಟನೆಯನ್ನು ಕೊನೆಕ್ಷಣ ಆಯೋಜಿಸಲಾದ ಕಾರಣ ಗಡಿಬಿಡಿಯಲ್ಲಿ ಬ್ಯಾನರ್ ಮುದ್ರಿಸುವ ಸಂದರ್ಭ ಮುದ್ರಣ ದೋಷ ಉಂಟಾಗಿದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್ ತಮ್ಮ ಅಚಾತುರ್ಯ ಒಪ್ಪಿಕೊಂಡಿದ್ದಾರೆ.

ಬ್ಯಾನರ್ ಬರೆಯುವವರಿಗೆ ಸೂಕ್ತ ವಿಷಯ ನೀಡಿದ್ದರೂ, ಮುದ್ರಣಗೊಂಡ ಬಳಿಕ ಪರಿಶೀಲಿಸಲು ಹೋಗದಿರುವುದು ನಮ್ಮಿಂದಾದ ತಪ್ಪು ಎಂದು ಹೇಳಿದ್ದಾರೆ.

ಪ್ರತಿಭಟನೆಯನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಹಮ್ಮಿಕೊಂಡಿದ್ದರೂ ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ಎಂಬ ಬ್ಯಾನರ್ ಹಾಕಲಾಗಿತ್ತು.

ಇತ್ತೀಚೆಗಷ್ಟೇ ಸಂಸದೆ ಶೋಭಾ ಕರಂದ್ಲಾಜೆಯವರು ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿ ಹಿಂದೂ ನಾಯಕರು ಹಾಗೂ ಬಿಜೆಪಿ ಕಾರ್ಯಕರ್ತರ ಕೊಲೆಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸಬೇಕು ಎಂದು ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ ಸಂದರ್ಭ ಕೂಡ ಇದೇ ರೀತಿ ಮೂಡಬಿದ್ರೆಯಲ್ಲಿ ಜೀವಂತವಾಗಿರುವ ಅಶೋಕ್ ಪೂಜಾರಿಯನ್ನು ಸತ್ತವರ ಪಟ್ಟಿಯಲ್ಲಿ ಸೇರಿಸುವ ಪ್ರಮಾದ ಎಸಗಿದ್ದನ್ನು ಜನ ಮರೆಯುವ ಮೊದಲೇ ಉಡುಪಿ ಬಿಜೆಪಿ ಇಂಥದೊಂದು ಬ್ಯಾನರ್ ಪ್ರದರ್ಶಿಸಿರುವುದು ಗಮನಾರ್ಹ.

ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳನ್ನು ನಿಷೇಧಿಸುವುದರೊಂದಿಗೆ, ಈ ಸಂಘಟನೆಗಳ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಬಿಜೆಪಿ ಪ್ರತಿಭಟನೆಯಲ್ಲಿ ಒತ್ತಾಯಿಸಿತು.

2008ರಿಂದ ಕೊಲೆಗೀಡಾದ ಎಲ್ಲ ಬಲ ಪಂಥೀಯ ಕಾರ್ಯಕರ್ತರ ಕೊಲೆಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ(ಎನ್.ಐ.ಎ) ಮೂಲಕ ನಡೆಸಬೇಕು ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರನ್ನು ರಾಜ್ಯ ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಳೆದ ಎರಡು ವರ್ಷಗಳಿಂದ ಹಿಂದೂ ಪರ ಕಾರ್ಯಕರ್ತರು ಪಿ.ಎಫ್.ಐ ಮತ್ತು ಕೆ.ಎಫ್.ಡಿಯಿಂದ ಕೊಲೆಯಾಗುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂಘಟನೆಗಳ ಕಾರ್ಯಕರ್ತರು ನಮ್ಮ ಕಾರ್ಯಕರ್ತರ ಕೊಲೆಯಲ್ಲಿ ನೇರ ಭಾಗಿಯಾಗಿದ್ದಾರೆ ಎಂದು ಕಿಡಿ ಕಾರಿದರು.

ಈ ಸಂಘಟನೆಗಳ ಪದಾಧಿಕಾರಿಗಳು ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆಗಳು ಮತ್ತು ಕೊಲೆಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು. ಕೇರಳ ಮತ್ತು ತಮಿಳುನಾಡುಗಳಲ್ಲಿ ವ್ಯಾಪಕವಾಗಿ ಬೇರು ಬಿಟ್ಟಿರುವ ಈ ಸಂಘಟನೆಗಳು ಇದೀಗ ಕರ್ನಾಟಕದಲ್ಲೂ ಕೋಮು ಗಲಭೆ ಉಂಟು ಮಾಡುವ ದೃಷ್ಠಿಯಿಂದ ಹಲ್ಲೆ ಎಸಗುತ್ತಿದ್ದಾರೆ ಎಂದರು.

ಮೈಸೂರಿನಲ್ಲಿ ರಾಜು ಅವರು ಕೊಲೆಯಾದಾಗ ಪಿ.ಎಫ್.ಐಯನ್ನು ನಿಷೇಧಿಸುವ ಬಗ್ಗೆ ಮಾತುಗಳು ಹರಿದಾಡುತ್ತಿದ್ದವು. ಆದರೆ ಇಲ್ಲಿಯ ತನಕವೂ ಆ ಸಂಘಟನೆ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಆರೇಳು ವರ್ಷಗಳಿಂದ ಕೊಲೆಯಾದ ಬಲಪಂಥೀಯ ಕಾರ್ಯಕರ್ತರ ಪಟ್ಟಿಯನ್ನು ಅವರು ನೀಡಿದರು. ಬಂಟ್ವಾಳದ ಶರತ್ ಮಡಿವಾಳ, ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್ ಕೊಲೆಗಳಲ್ಲಿ ಮತ್ತು ಶಿವಮೊಗ್ಗದ ಗಲಭೆಗಳಲ್ಲಿ ಪಿ.ಎಫ್.ಐ ಮತ್ತು ಕೆ.ಎಫ್.ಡಿಯ ನೇರ ಕೈವಾಡವಿದೆ ಎಂದು ಹೆಗ್ಡೆ ಪಿ.ಎಫ್.ಐ ಮತ್ತು ಕೆ.ಎಫ್.ಡಿ ವಿರುದ್ಧ ಹರಿಹಾಯ್ದರು.


ಮಾಜಿ ಶಾಸಕ ರಘುಪತಿ ಭಟ್, ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ಜಿಲ್ಲಾ ಕಾರ್ಯದರ್ಶಿ ಸುರೇಶ್ ನಾಯಕ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಇದನ್ನೂ ಓದಿ:
►►ಕಲ್ಲಡ್ಕ ಭಟ್ಟರ ಶಾಲೆಗಾಗಿ ‘ಮುಷ್ಠಿ ಅಕ್ಕಿ ಭಿಕ್ಷೆ ಅಭಿಯಾನ’ಕ್ಕೆ ಶೋಭಾ ಕರಂದ್ಲಾಜೆ ಚಾಲನೆ:
http://bit.ly/2fOf2dF
►►ಶರತ್ ಮಡಿವಾಳ ಹತ್ಯೆ: ಇಬ್ಬರ ಬಂಧನ ಖಚಿತಪಡಿಸಿದ ಪೊಲೀಸರು: http://bit.ly/2w6BQw6
►►ಆರಸ್ಸೆಸ್ ಶರತ್ ಬರ್ಬರ ಹತ್ಯೆ: ತಿಂಗಳಾದರೂ ಆರೋಪಿಗಳ ಬಂಧನವಿಲ್ಲ: http://bit.ly/2hwDLUx
►►ಶರತ್ ಶವಯಾತ್ರೆಯಲ್ಲಿ ಕಲ್ಲು ತೂರಾಟ: ಸಂಘಪರಿವಾರದ ವಿರುದ್ಧ ಸಾಕ್ಷ್ಯಕ್ಕಾಗಿ ಪೊಲೀಸರ ಪರದಾಟ: http://bit.ly/2vL1feu
►►ಶರತ್ ಸಾವಿನ ಸುದ್ದಿ ಪ್ರಕಟಿಸಲು ವಿಳಂಬವಾಯಿತೆ? ಸೋಷಿಯಲ್ ಮೀಡಿಯಾದಲ್ಲಿ ಗುಸು ಗುಸು:
http://bit.ly/2uUdUs5
►►ಕರಾವಳಿಯ ಮನೆಗಳು ಹೀಗೆ ಖಾಲಿಯಾಗಲು ಬಿಡದಿರೋಣ: http://bit.ly/2tAbleC
►►ಇರಿತಕ್ಕೊಳಗಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತನನ್ನು ಆಸ್ಪತ್ರೆಗೆ ಸಾಗಿಸಿದ ಮುಸ್ಲಿಂ ವ್ಯಾಪಾರಿ: http://bit.ly/2urULxo
►►ಮುಂದುವರಿದ ಹಲ್ಲೆಗಳು: ಮಂಗಳೂರಿನ ಕುತ್ತಾರಿನಲ್ಲಿ ಯುವಕನಿಗೆ ಮಾರಕ ಹಲ್ಲೆ: http://bit.ly/2u54ugc
►►ಆರೆಸ್ಸೆಸ್ ಕಾರ್ಯಕರ್ತ ಶರತ್ ಮೃತದೇಹ ಅಂತಿಮ ಯಾತ್ರೆ: ಹಲವೆಡೆ ಕಲ್ಲು ತೂರಾಟ: http://bit.ly/2sXCh6c
►►ಬಂಟ್ವಾಳ: ಇರಿತಕ್ಕೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮೃತ್ಯು: http://bit.ly/2u02LZx
►►ಕಲ್ಲು ತೂರಾಟಕ್ಕೆ ರಸ್ತೆಯುದ್ದಕ್ಕೂ ಕಲ್ಲು ಸಂಗ್ರಹಿಸಿದ ಹಿಂದೂತ್ವ ‘ಕಾರ್ಯಕರ್ತರು’. ವಿಡಿಯೊ ವೈರಲ್: http://bit.ly/2tvcR34
►►ಕಲ್ಲು ತೂರಾಟಕ್ಕೆ ಸಂಚು ನಡೆಸಿದ್ದ ಆರೋಪ: ಸತ್ಯಜಿತ್ ಸುರತ್ಕಲ್‌ಗಾಗಿ ಪೊಲೀಸರಿಂದ ಶೋಧ: http://bit.ly/2tz9f07
►►ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಾ? ಜಿಲ್ಲೆಯ ಜನರ ಪುರುಷತ್ವಕ್ಕೆ ಸವಾಲ್ ಎಸೆದ ಉಡುಪಿ ಸಂಸದೆ!: http://bit.ly/2sYY961
►►ನನ್ನನ್ನು ನೋಡಲು ರಮಾನಾಥ ರೈ ಇನ್ನೂ ಬಂದಿಲ್ಲ: ಶರತ್ ತಂದೆ ತನ್ನಿಯಪ್ಪ ಅಳಲು: http://bit.ly/2v662mJ
►►ಕಲ್ಲು ತೂರಾಟ: ಹಿಂದೂತ್ವ ಸಂಘಟನೆಗಳ ಮುಖಂಡರ ವಿರುದ್ದ ಎಫ್ಐಆರ್: http://bit.ly/2sZaGq3
►►ಬಿಜೆಪಿ ನಾಯಕರು ಷಂಡರೊ, ಗಂಡಸರೊ ಗೊತ್ತಿಲ್ಲ. ನಾನು ಅಂಥ ಭಾಷೆ ಬಳಸುವುದಿಲ್ಲ: http://bit.ly/2sOnb3D
►►ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ: ಚಾಲಕನಿಗೆ ಚೂರಿ ಇರಿತ: http://bit.ly/2ugRK6k
►►ದ.ಕ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜು.21ರ ತನಕ ನಿಷೇಧಾಜ್ಞೆ ಮುಂದುವರಿಕೆ: http://bit.ly/2tcNz6z
►►ಊರನ್ನು ಉರಿಯಲು ಬಿಟ್ಟು ರಷ್ಯಾಕ್ಕೆ ತೆರಳಿದ ಸಂಸದ ನಳಿನ್ ಒತ್ತಾಯಕ್ಕೆ ಮಣಿದು: http://bit.ly/2tGZnBL
►►ಮೃತ ಆರೆಸ್ಸೆಸ್ ಕಾರ್ಯಕರ್ತ ಶರತ್ ಮನೆಗೆ ಉಸ್ತುವಾರಿ ಸಚಿವ ರಮಾನಾಥ ರೈ:
http://bit.ly/2vbOPIK
►►ಶರತ್ ಹಂತಕರ ಮಹತ್ವದ ಸುಳಿವು ಲಭ್ಯ. ಶೀಘ್ರವೇ ಬಂಧನ: ಎಡಿಜಿಪಿ ಅಲೋಕ್ ಮೋಹನ್: http://bit.ly/2ugF2Uk


 

Related Tags: BJP Banner blunder, BJP demands ban on PFI, KFD, Prashant Madivala murder, Sharath Madiwala Murder, Mattar Ratnakar Hegde, Shrisha Nayak, Raghupathi Bhat
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ