ಶೋಭಾ ಮಡಿಕೇರಿ ಆಸ್ತಿಯ ಒಂದಂಶ ಮಕ್ಕಳಿಗೆ ಕೊಡಲಿ: ಸಚಿವ ರೈ

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಕಲ್ಲಡ್ಕ ಶ್ರೀರಾಮ ಸಂಸ್ಥೆಗೆ ಅನುದಾನ ಕಡಿತ ಹಿನ್ನೆಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮುಷ್ಠಿ ಅಕ್ಕಿ ಭಿಕ್ಷೆ ಬೇಡುವ ವಿಷಯಕ್ಕೆ ಸಂಬಂಧಿಸಿ ಅರಣ್ಯ ಸಚಿವ ರಮಾನಾಥ್ ರೈ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಕಲ್ಲಡ್ಕ ಶಾಲೆಯ ಮಕ್ಕಳಿಗಾಗಿ ಭಿಕ್ಷೆ ಬೇಡಬೇಕಾದ ಅಗತ್ಯವೇ ಇಲ್ಲ. ಮಡಿಕೇರಿಯಲ್ಲಿರುವ ಆಸ್ತಿಯಲ್ಲಿನ ಒಂದಂಶ ಕೊಟ್ಟರೂ ಸಾಕು, ಮಕ್ಕಳು ಜೀವನ ಪರ್ಯಂತ ಊಟ ಮಾಡಬಹುದು ಎಂದಿದ್ದಾರೆ.

ಗತಿ ಗೋತ್ರ ಇಲ್ಲದ ಈ ಹೆಣ್ಣು ಮಗಳು ಹೇಗೆ ಶ್ರೀಮಂತರಾದರು ಎಂಬುದು ಎಲ್ಲರಿಗೂ ಗೊತ್ತಾಗಲಿ.  ರಮಾನಾಥ ರೈ ಅಪ್ಪನ ಆಸ್ತಿ ಎಷ್ಟಿದೆ, ರಮಾನಾಥ ರೈ ಆಸ್ತಿ ಎಷ್ಟಿದೆ ಎಂಬುದು ಚರ್ಚೆಯಾಗಲಿ, ಜೊತೆಗೆ ಶೋಭಾ ಕರಂದ್ಲಾಜೆ ಅಪ್ಪನ ಆಸ್ತಿ ಎಷ್ಟಿದೆ, ಶೋಭಾ ಕರಂದ್ಲಾಜೆ ಆಸ್ತಿ ಎಷ್ಟಿದೆ ಎಂಬ ಬಗ್ಗೆ ಚರ್ಚೆಯಾಗಲಿ ಎಂದು ರೈಯವರು ಸವಾಲು ಹಾಕಿದ್ದಾರೆ.

ಇಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ  ಸಂಸದೆ ಶೋಭಾ ಕರಂದ್ಲಾಜೆ ಕೊಲ್ಲೂರು ಮುಕಾಂಬಿಕಾ ದೇವಳದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ನೀಡುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವ ಸರಕಾರದ ಕ್ರಮವನ್ನು ಖಂಡಿಸಿದ್ದರು.

ಅನುದಾನ ರದ್ದುಗೊಂಡಿರುವುದರಿಂದ ಕರಾವಳಿಯ ಜಿಲ್ಲೆಗಳಲ್ಲಿ ಮುಷ್ಠಿ ಅಕ್ಕಿ ಸಂಗ್ರಹಿಸಿ ಕಲ್ಲಡ್ಕ ಶಾಲೆಗೆ ನೀಡಲಾಗುತ್ತದೆ ಎಂದರು ಮುಷ್ಠಿ ಅಕ್ಕಿಯನ್ನು ಬಿಜೆಪಿಯು ಪ್ರತೀದಿನ ಕರಾವಳಿ ಜಿಲ್ಲೆಗಳಲ್ಲಿ ಸಂಗ್ರಹಿಸುತ್ತದೆ. ಅದನ್ನು ಪ್ರತೀ ಸಂಕ್ರಮಣ ದಿನ ಕಲ್ಲಡ್ಕ ಶಾಲೆಗೆ ನೀಡಲಾಗುವುದು ಎಂದು ಕರಂದ್ಲಾಜೆ ಹೇಳಿದ್ದರು.

ದೇವಸ್ಥಾನಗಳಿಂದ ಶಾಲೆಗಳಿಗೆ ಊಟ, ಪುಸ್ತಕ ನೀಡುವ ಆದೇಶವನ್ನು ಕಾಂಗ್ರೆಸ್ ಸರಕಾರ 2004ರಲ್ಲಿ ಹೊರಡಿಸಿತ್ತು. ಈ ಆಧಾರದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರವನ್ನು ಕೊಲ್ಲೂರು ದೇವಳ ದತ್ತು ಪಡೆದಿತ್ತು. ಅನುದಾನ ರದ್ದು ಮಾಡುವ ಮೂಲಕ ಕಾಂಗ್ರೆಸ್ ಸರಕಾರ ದ್ವೇಷ ಸಾಧನೆ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಸದೆ ಆಕ್ರೋಶ ವ್ಯಕ್ತಪಡಿಸಿದ್ದರು.

ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಳಲ್ಲಿ ಕಲಿಯುತ್ತಿರುವ ತೊಂಬತ್ತು ಶೇಕಡಾ ಮಕ್ಕಳು ಹಿಂದುಳಿದವರು ಮತ್ತು ದಲಿತರಾಗಿದ್ದಾರೆ. ಈಗ ಸಿದ್ಧರಾಮಯ್ಯನವರ ಅಹಿಂದ ಪರಿಕಲ್ಪನೆ ಎಲ್ಲಿ ಹೋಯ್ತು? ಮುಖ್ಯಮಂತ್ರಿ ಯಾಕೆ ಶಾಲೆಗಳ ಅನುದಾನ ತಡೆದಿದ್ದಾರೆ? ಅವರು ‘ಅಹಿಂದ’ ವನ್ನು ಕೇವಲ ಭಾಷಣಗಳಲ್ಲಿ ಬಳಸುತ್ತಾರೆ ಎಂದು ಶೋಭಾ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದರು
.
ಇದನ್ನೂ ಓದಿ:
►►'ಮುಷ್ಠಿ ಅಕ್ಕಿ ಭಿಕ್ಷೆ ಅಭಿಯಾನ’ಕ್ಕೆ ಶೋಭಾ ಚಾಲನೆ
http://bit.ly/2fOf2dF
►►ಕಲ್ಲಡ್ಕ ಶಾಲೆಗೆ ನೆರವು ಸ್ಥಗಿತ: ಆನ್ಲೈನ್ನಲ್ಲಿ ಶುರುವಾಗಿದೆ 'ಭಿಕ್ಷಾಂ ದೇಹಿ ಅಭಿಯಾನ": http://bit.ly/2vCBU5C
►►ಬಿಸಿಯೂಟ ಬೇಡವೆಂದು ಬರೆದುಕೊಟ್ಟಿದ್ದ ಭಟ್ಟರು. ಈಗಲೂ ಅರ್ಜಿ ಹಾಕಲಿ: ರಮಾನಾಥ ರೈ: http://bit.ly/2uGdvcx
►►ಕಲ್ಲಡ್ಕ ಶಾಲೆಗೆ ನೆರವು ನಿಲ್ಲಿಸಿದ್ದು ಕ್ರೌರ್ಯ. ಭಟ್ಟರು ದರೋಡೆಕೋರರಲ್ಲ: ಜನಾರ್ದನ ಪೂಜಾರಿ: http://bit.ly/2vP11Db
►►ಕಲ್ಲಡ್ಕ ಶಾಲೆಗೆ ಕೊಟ್ಟ ಹಣ ದುರುಪಯೋಗವಾಗಿದೆ. ವಸೂಲಿ ಮಾಡಲಾಗುವುದು: ರಮಾನಾಥ ರೈ: http://bit.ly/2fzuV7C
►►ಕೊಲ್ಲೂರು ನೆರವು ಸ್ಥಗಿತ: ಕಲ್ಲಡ್ಕ ಶಾಲಾ ಮಕ್ಕಳಿಂದ ಖಾಲಿ ತಟ್ಟೆ ಬಡಿದು ಪ್ರತಿಭಟನೆ: http://bit.ly/2uunaqv
►►ಕೊಲ್ಲೂರು ದೇವಳದ ನೆರವು ಸ್ಥಗಿತ: ಕಲ್ಲಡ್ಕ ಪ್ರಭಾಕರ ಭಟ್ ಹಾಕಿದ ಸವಾಲು ಏನು ಗೊತ್ತೆ?: http://bit.ly/2vmrZ2l
►►ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!: http://bit.ly/2ukYD71
Tags: Ramanatha Rai, Shobha Karandlaje,  Kalladka Prabhakar Bhat, Sankrathi, Siddaramiah, Kollur Temple

Related Tags: Ramanath Rai Accuses Shobha Karandlaje, Kalladka Schhol, Madikeri Assets, Kollur Mookambika Temple
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ