ಮಗುವಿಗೆ ಜನ್ಮ ನೀಡಿದ 10 ವರ್ಷದ ರೇಪ್ ಸಂತ್ರಸ್ತ ಬಾಲಕಿ

ಕರಾವಳಿ ಕರ್ನಾಟಕ ವರದಿ
ಚಂಡೀಗಡ್:
ಸತತ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಬಾಲಕಿ 10 ವರ್ಷದ ಚಂಡೀಗಡ್ ಮೂಲದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹಾಗೂ ಬಾಲಕಿ ಇಬ್ಬರ ಆರೋಗ್ಯ ಸ್ಥಿರವಾಗಿದೆ .

ಬಾಲಕಿಯ ಗರ್ಭಪಾತಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಬಾಲಕಿಯ ಪರವಾಗಿ ಅರ್ಜಿ ಸಲ್ಲಿಸಿದ್ದರೂ ಬಾಲಕಿ  32 ವಾರಗಳ ಗರ್ಭಿಣಿ ಆಗಿರುವ ಕಾರಣ ಈ ಹಂತದಲ್ಲಿ ಗರ್ಭಪಾತ ಮಾಡುವುದು ಅಪಾಯಕಾರಿ ಎಂದು ವೈದ್ಯರು ವರದಿಯ ನೀಡಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿತ್ತು. ಇದೀಗ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆಯಲಾಗಿದೆ. ಮಗು 2.05 ಕೆಜಿ ತೂಕವಿದ್ದು,  ಪ್ರಸ್ತುತ ಮಗು ಹಾಗೂ ಬಾಲಕಿ ಇಬ್ಬರ ಆರೋಗ್ಯವೂ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

10 ವರ್ಷದ ಬಾಲಕಿಗೆ ತಾನು ಮಗುವಿಗೆ ಜನ್ಮ ನೀಡಿದ್ದೇನೆ ಎಂಬ ವಿಚಾರವೇ ತಿಳಿದಿಲ್ಲ. ಆಕೆಯ ಪೋಷಕರು ಆಕೆಯ ಹೊಟ್ಟೆಯಲ್ಲಿ ಕಲ್ಲಿದೆ ಎಂದು ಸುಳ್ಳು ಹೇಳಿ ಆಸ್ರತ್ರೆಗೆ ದಾಖಲು ಮಾಡಿದ್ದರು. ಬಾಲಕಿಯ ಮಗುವನ್ನು ಯಾರಾದರೂ ದಾನಿಗಳಿಗೆ ದತ್ತು ನೀಡುವಂತೆ ಬಾಲಕಿ ಪೋಷಕರು ಆಸ್ಪತ್ರೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ.

ತನ್ನ ಸ್ವಂತ ಮಾವನಿಂದಲೇ ಬಾಲಕಿ ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದಳು. ಬಾಲಕಿ ಒಮ್ಮೆ ಹೊಟ್ಟೆ ನೋವು ಎಂದಾಗ ಪೋಷಕರು ವೈದ್ಯರ ಬಳಿ ಪರೀಕ್ಷಿಸಿದ್ದಾರೆ. ಈ ವೇಳೆ ಬಾಲಕಿ ಗರ್ಭವತಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. 

ಆಕೆಯ ಗರ್ಭಪಾತಕ್ಕಾಗಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ್ದ ನ್ಯಾಯಾಲಯ ಬಾಲಕಿಯ ಪರೀಕ್ಷೆಗೆ ವೈದ್ಯರಿಗೆ ಸೂಚಿಸಿತ್ತು. ಬಾಲಕಿಯನ್ನು ಪರೀಕ್ಷಿಸಿದ ವೈದ್ಯರ ತಂಡ ಆಕೆ 30 ವಾರಗಳ ಗರ್ಭಿಣಿಯಾಗಿದ್ದು, ಈ ಹಂತದಲ್ಲಿ ಗರ್ಭಪಾತ ಮಾಡುವುದು ಬಾಲಕಿಗೆ ಹಾಗೂ ಆಕೆಯ ಗರ್ಭದಲ್ಲಿರುವ ಮಗುವಿಗೆ ತೀರಾ ಅಪಾಯಕಾರಿ. ಗರ್ಭಪಾಕ್ಕೆ ಗರಿಷ್ಠ 20 ವಾರಗಳಷ್ಚೇ ಅವಕಾಶ ವಿರುತ್ತದೆ ಎಂದು ವರದಿ ನೀಡಿದ್ದರು.

ವೈದ್ಯರ ವರದಿಯನ್ವಯ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆಎಸ್ ಖೆಹರ್ ಹಾಗೂ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿ ಅರ್ಜಿ ವಜಾಗೊಳಿಸಿತ್ತು. ಅಲ್ಲದೆ ಸಂತ್ರಸ್ತೆಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸುವಂತೆ ಆದೇಶ ನೀಡಿದ್ದರು.

Related Tags: Raped Minor Girl Delivers Baby, Chandigad, Supreme Court, Abortion
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ