‘ಮುಷ್ಠಿ ಅಕ್ಕಿ ಭಿಕ್ಷೆ ಅಭಿಯಾನ’ಕ್ಕೆ ಶೋಭಾ ಚಾಲನೆ
ಮುಷ್ಠಿ ಅಕ್ಕಿಯನ್ನು ಬಿಜೆಪಿಯು ಪ್ರತಿ ದಿನ ಕರಾವಳಿ ಜಿಲ್ಲೆಗಳಲ್ಲಿ ಸಂಗ್ರಹಿಸುತ್ತದೆ. ಅದನ್ನು ಪ್ರತೀ ಸಂಕ್ರಮಣ ದಿನ ಕಲ್ಲಡ್ಕ ಶಾಲೆಗೆ ನೀಡಲಾಗುವುದು.

ಕರಾವಳಿ ಕರ್ನಾಟಕ ವರದಿ
ಮಂಗಳೂರು
: ಕಲ್ಲಡ್ಕ ಪ್ರಭಾಕರ ಭಟ್ಟರ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಬಿಜೆಪಿ ಮುಖಂಡ ವೇದವ್ಯಾಸ ಕಾಮತ್ ಮನೆ ಸೇರಿದಂತೆ ಮೂರು ಮನೆಗಳಿಂದ ಭಿಕ್ಷೆ ಸಂಗ್ರಹಿಸುವ ಮೂಲಕ ‘ಮುಷ್ಠಿ ಭಿಕ್ಷೆ ಅಭಿಯಾನ’ಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು.

ಕೊಲ್ಲೂರು ಮುಕಾಂಬಿಕಾ ದೇವಳದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ನೀಡುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವ ಸರಕಾರದ ಕ್ರಮವನ್ನು ಶೋಭಾ ಕರಂದ್ಲಾಜೆ ಖಂಡಿಸಿದ್ದಾರೆ.

ಅನುದಾನ ರದ್ದುಗೊಂಡಿರುವುದರಿಂದ ಕರಾವಳಿಯ ಜಿಲ್ಲೆಗಳಲ್ಲಿ ಮುಷ್ಠಿ ಅಕ್ಕಿ ಸಂಗ್ರಹಿಸಿ ಕಲ್ಲಡ್ಕ ಶಾಲೆಗೆ ನೀಡಲಾಗುತ್ತದೆ ಎಂದರು ಮುಷ್ಠಿ ಅಕ್ಕಿಯನ್ನು ಬಿಜೆಪಿಯು ಪ್ರತೀದಿನ ಕರಾವಳಿ ಜಿಲ್ಲೆಗಳಲ್ಲಿ ಸಂಗ್ರಹಿಸುತ್ತದೆ. ಅದನ್ನು ಪ್ರತೀ ಸಂಕ್ರಮಣ ದಿನ ಕಲ್ಲಡ್ಕ ಶಾಲೆಗೆ ನೀಡಲಾಗುವುದು ಎಂದು ಕರಂದ್ಲಾಜೆ ಹೇಳಿದ್ದಾರೆ.

ದೇವಸ್ಥಾನಗಳಿಂದ ಶಾಲೆಗಳಿಗೆ ಊಟ, ಪುಸ್ತಕ ನೀಡುವ ಆದೇಶವನ್ನು ಕಾಂಗ್ರೆಸ್ ಸರಕಾರ 2004ರಲ್ಲಿ ಹೊರಡಿಸಿತ್ತು. ಈ ಆಧಾರದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರವನ್ನು ಕೊಲ್ಲೂರು ದೇವಳ ದತ್ತು ಪಡೆದಿತ್ತು.
ಅನುದಾನ ರದ್ದು ಮಾಡುವ ಮೂಲಕ ಕಾಂಗ್ರೆಸ್ ಸರಕಾರ ದ್ವೇಷ ಸಾಧನೆ ಮಾಡುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಂಸದೆ ಆಕ್ರೋಶ ವ್ಯಕ್ತಪಡಿಸಿದರು.


ಬಿಜೆಪಿ ಮಹಿಳಾ ಮೋರ್ಛಾದ ಸದಸ್ಯರು ಅಕ್ಕಿಯನ್ನು ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಾಗಿ ಉಳಿಸಿ ಅದನ್ನು ಸಂಕ್ರಾತಿಯಂದು ಕೊಡುತ್ತಾರೆ ಎಂದು ಅವರು ಹೇಳಿದರು.

ಕಲ್ಲಡ್ಕ ಪ್ರಭಾಕರ ಭಟ್ಟರ ಶಾಲೆಗಳಲ್ಲಿ ಕಲಿಯುತ್ತಿರುವ ತೊಂಬತ್ತು ಶೇಕಡಾ ಮಕ್ಕಳು ಹಿಂದುಳಿದವರು ಮತ್ತು ದಲಿತರಾಗಿದ್ದಾರೆ. ಈಗ ಸಿದ್ಧರಾಮಯ್ಯನವರ ಅಹಿಂದ ಪರಿಕಲ್ಪನೆ ಎಲ್ಲಿ ಹೋಯ್ತು? ಮುಖ್ಯಮಂತ್ರಿ ಯಾಕೆ ಶಾಲೆಗಳ ಅನುದಾನ ತಡೆದಿದ್ದಾರೆ? ಅವರು ‘ಅಹಿಂದ’ ವನ್ನು ಕೇವಲ ಭಾಷಣಗಳಲ್ಲಿ ಬಳಸುತ್ತಾರೆ ಎಂದು ಶೋಭಾ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.

ಪಿ.ಎಫ್.ಐ, ಕೆ.ಎಫ್.ಡಿ ಮತ್ತು ಎಸ್ಡಿಪಿಐಯಂಥ ಸಂಘಟನೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿದ ಶೋಭಾ, ಲವ್ ಜಿಹಾದ್ ಪ್ರಕರಣದ ಬಗ್ಗೆ ಗಂಬೀರ ತನಿಖೆ ನಡೆಯಬೇಕೆಂದರು.
ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆಯಲ್ಲಿ ಪಿ.ಎಫ್.ಐ ಮತ್ತು ಇತರ ಸಂಘಟನೆಗಳ ಕೈವಾಡವಿದೆ ಎಂದು ನಾನು ಮೊದಲೇ ಹೇಳಿದ್ದೆ. ಆದರೆ ಸಚಿವರಾದ ರಮಾನಾಥ ರೈ, ಯು.ಟಿ. ಖಾದರ್ ನನ್ನ ಆರೋಪ ಲೆಕ್ಕಿಸಿರಲಿಲ್ಲ. ಈಗ ಆರೋಪಿಗಳ ಬಂಧನವಾಗುವುದರೊಂದಿಗೆ ನಾನು ಹೇಳಿದ್ದು ನಿಜವೆಂದು ದೃಢಪಟ್ತಿದೆ ಎಂದರು.

ಇದನ್ನೂ ಓದಿ:
►►ಕಲ್ಲಡ್ಕ ಶಾಲೆಗೆ ನೆರವು ಸ್ಥಗಿತ: ಆನ್‌ಲೈನ್‌ನಲ್ಲಿ ಶುರುವಾಗಿದೆ 'ಭಿಕ್ಷಾಂ ದೇಹಿ ಅಭಿಯಾನ":
http://bit.ly/2vCBU5C
►►ಬಿಸಿಯೂಟ ಬೇಡವೆಂದು ಬರೆದುಕೊಟ್ಟಿದ್ದ ಭಟ್ಟರು. ಈಗಲೂ ಅರ್ಜಿ ಹಾಕಲಿ: ರಮಾನಾಥ ರೈ: http://bit.ly/2uGdvcx
►►ಕಲ್ಲಡ್ಕ ಶಾಲೆಗೆ ನೆರವು ನಿಲ್ಲಿಸಿದ್ದು ಕ್ರೌರ್ಯ. ಭಟ್ಟರು ದರೋಡೆಕೋರರಲ್ಲ: ಜನಾರ್ದನ ಪೂಜಾರಿ: http://bit.ly/2vP11Db
►►ಕಲ್ಲಡ್ಕ ಶಾಲೆಗೆ ಕೊಟ್ಟ ಹಣ ದುರುಪಯೋಗವಾಗಿದೆ. ವಸೂಲಿ ಮಾಡಲಾಗುವುದು: ರಮಾನಾಥ ರೈ: http://bit.ly/2fzuV7C
►►ಕೊಲ್ಲೂರು ನೆರವು ಸ್ಥಗಿತ: ಕಲ್ಲಡ್ಕ ಶಾಲಾ ಮಕ್ಕಳಿಂದ ಖಾಲಿ ತಟ್ಟೆ ಬಡಿದು ಪ್ರತಿಭಟನೆ: http://bit.ly/2uunaqv
►►ಕೊಲ್ಲೂರು ದೇವಳದ ನೆರವು ಸ್ಥಗಿತ: ಕಲ್ಲಡ್ಕ ಪ್ರಭಾಕರ ಭಟ್ ಹಾಕಿದ ಸವಾಲು ಏನು ಗೊತ್ತೆ?: http://bit.ly/2vmrZ2l
►►ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!: http://bit.ly/2ukYD71

Related Tags: BJP south constituency, Vedavyas Kamath, Shobha Karndlaje, Kalladka Prabhakar Bhat, Sankrathi, Siddaramiah, Kollur Temple
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ