ಗಂಗೊಳ್ಳಿ: ಮೀನುಗಾರನ ಶವ ಪತ್ತೆ

ಕರಾವಳಿ ಕರ್ನಾಟಕ ವರದಿ
ಕುಂದಾಪುರ:
ಸಮೀಪದ ಗಂಗೊಳ್ಳಿ ಬಂದರಿನಲ್ಲಿ ಪಂಚಗಂಗಾವಳಿ ನದಿಯಲ್ಲಿ ಮೀನುಗಾರಿಕೆ ನಡೆಸುವ ವೇಳೆ ಬೋಟಿನಿಂದ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ.

ಮೃತರನ್ನು ಗುಡ್ಡೆಅಂಗಡಿ ನಿವಾಸಿ ಸುರೇಶ್ ಮೊಗವೀರ(56) ಎಂದು ಗುರುತಿಸಲಾಗಿದೆ.

24*7 ಇಬ್ರಾಹಿಂ ಗಂಗೊಳ್ಳಿ ತಂಡ ಮತ್ತು ಊರವರ ಸಹಕಾರದೊಂದಿಗೆ ಮೃತದೇಹವನ್ನು ಮೇಲಕ್ಕೆತ್ತಿ ಕುಂದಾಪುರದಲ್ಲಿ ಶವಾಗಾರದಲ್ಲಿ ಇರಿಸಲಾಗಿದೆ.

ಸುರೇಶ್ ಮೊಗವೀರ ಮೀನು ಹಿಡಿಯಲು ಹೋಗಿದ್ದ ಸಂದರ್ಭ ರಾತ್ರಿ ನದಿಗೆ ಬಿದ್ದಿದ್ದರು. ಮೃತದೇಹ ಬೆಳಿಗ್ಗೆ ಪತ್ತೆಯಾಗಿತ್ತು.

ಮಳೆಗಾಲದಲ್ಲಿ ಮೀನುಗಾರರ ಆಕಸ್ಮಿಕ ಸಾವುಗಳು ಹೆಚ್ಚುತ್ತಿರುವುದು ತೀರಾಕಳವಳಕಾರಿ ಸಂಗತಿಯಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಉಳ್ಲಾಲ, ಮಂಗಳೂರು, ಉಡುಪಿ ಮುಂತಾದೆಡೆಯೂ ಮೀನುಗಾರರ ಸಾವುಗಳು ವರದಿಯಾಗಿವೆ.

Related Tags: Ibrahim Ganolli, Suresh Mogaveera Gudde angadi death, Fisherman Death, Gangolli Police, Kundapur Govt Hospital
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ