ರಾತ್ರೋರಾತ್ರಿ ಹೀರೋ ಆದ ಭಾರತೀಯ ಬಾಲಕ

ಕರಾವಳಿ ಕರ್ನಾಟಕ ವರದಿ
ಲಂಡನ್
: ಭಾರತ ಸಂಜಾತ 12 ವರ್ಷದ ಬಾಲಕನೊಬ್ಬ ಬ್ರಿಟಿಷ್ ಟಿ.ವಿ. ಶೋ ಒಂದರಲ್ಲಿ ಸರಿ ಉತ್ತರ ನೀಡುವ ಮೂಲಕ ರಾತ್ರೋರಾತ್ರಿ ಹೀರೊ ಆಗಿಬಿಟ್ಟಿದ್ದಾನೆ.

ರಾಹುಲ್ ಎಂಬ ಪುಟಾಣಿ ಚಾನೆಲ್ 4 ಪ್ರಸಾರ ಮಾಡಿದ ‘ಚೈಲ್ಡ್ ಜೀನಿಯಸ್ ‘ಕಾರ್ಯಕ್ರಮದಲ್ಲಿ  ಮೊದಲ ಸುತ್ತಿನಲ್ಲಿ ಎಲ್ಲ 14ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ್ದಾನೆ.

ಬುದ್ಧಿಮತ್ತೆ ಪರೀಕ್ಷೆ(ಐಕ್ಯೂ)ಯಲ್ಲಿ ರಾಹುಲ್ 162 ಅಂಕಗಳನ್ನು ಪಡೆದಿದ್ದಾನೆ. ಇದು ಖ್ಯಾತ ವಿಜ್ಞಾನಿಗಳಾದ ಆಲ್ಬರ್ಟ್ ಐನ್ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಅವರ ಬುದ್ಧಿಮತ್ತೆಗಿಂತಲೂ ಹೆಚ್ಚು ಎನ್ನಲಾಗಿದೆ. ಆದರೆ ಈತನ ನಿಖರ ಐಕ್ಯೂವನ್ನು ಇನ್ನೂ ಯಾರೂ ಅಳೆದಿಲ್ಲ. ಈತನ ಐಕ್ಯೂ ಅಂದಾಜಿಸಲ್ಪಟ್ಟಿದ್ದಾಗಿದೆ.

ರಾಹುಲ್ ಈಗ ಮೆನ್ಸಾ ಕ್ಲಬ್ನ ಸದಸ್ಯತ್ವ ಪಡೆಯಲು ಅರ್ಹತೆ ಹೊಂದಿದ್ದಾನೆ. ಈ ಕ್ಲಬ್ ವಿಶ್ವದಲ್ಲೇ ಅತಿ ಹಳೆಯ ಮತ್ತು ದೊಡ್ಡ ಐ.ಕ್ಯೂ ಸೊಸೈಟಿ ಆಗಿದೆ.

ಈ ಟಿವಿ ಶೋದಲ್ಲಿ ಹನ್ನೆರಡರ ಹರಯದ ಇಪ್ಪತ್ತು ಮಕ್ಕಳಲ್ಲಿ ವಾರಕ್ಕೆ ಒಬ್ಬ ಬಾಲಕನನ್ನು ಆಯ್ಕೆ ಮಾಡಲಾಗುತ್ತದೆ. ಸ್ಪೆಲ್ಲಿಂಗ್ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ರಾಹುಲ್ ಕಠಿಣ ಶಬ್ದಗಳನ್ನು ಕೂಡ ಸಮರ್ಪಕವಾಗಿ ಉಚ್ಛರಿಸಿದ್ದ.ಟೈಮ್ಸ್ ಮೆಮರಿ ಸುತ್ತಿನಲ್ಲಿ 15ಪ್ರಶ್ನೆಗಳಲ್ಲಿ 14ಕ್ಕೆ ಸರಿ ಉತ್ತರ ನೀಡಿದ್ದ ರಾಹುಲ್ ಗೆ ಅಂತಿಮ ಪ್ರಶ್ನೆಗೆ ಉತ್ತರಿಸಲು ಸಮಯಾವಕಾಶ ಇರಲಿಲ್ಲ.
 

Related Tags: Indian-origin kid, overnight hero, British TV, Twelve-year-old Rahul, IQ Of 162, Albert Einstein, Stephen Hawking
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ