ಶರತ್ ಹತ್ಯೆ: ಇನ್ನೂ ಮೂವರು ಪಿಎಫ್‌ಐ ಕಾರ್ಯಕರ್ತರ ಬಂಧನ

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಬಂಟ್ವಾಳದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಾಡಿವಾಳ ಹತ್ಯೆಗೆ ಸಂಬಂಧಿಸಿದಂತೆ ಇನ್ನೂ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಿಯಾಝ್ ಪರಾಂಕಿ, ಸಾಧಿಕ್ ನೆಲ್ಯಾಡಿ ಮತ್ತು ಖಲೀಂ ಅಲಿಯಾಸ್ ಖಲೀಮುಲ್ಲಾ ಚಾಮರಾಜನಗರ ಬಂಧಿತ ಆರೋಪಿಗಳು.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್, ಪಿಎಫ್ಐ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಇವರು ಕೊಲೆ ಆರೋಪಿಗಳಿಗೆ ಬೆಂಬಲ ಹಾಗೂ ಆಶ್ರಯವನ್ನು ನೀಡಿದ್ದಾರೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಹತ್ಯೆಗೆ ಸಂಬಂಧಿಸಿ ಅಗಸ್ಟ್ 15ರಂದು ಇಬ್ಬರನ್ನು ಬಂಧಿಸಲಾಗಿದ್ದು ಒಬ್ಬ ಪಾಪ್ಯೂಲರ್ ಫ್ರಂಟ್ ಸಂಘಟನೆಯ (ಪಿಎಫ್ಐ) ಚಾಮರಾಜ ನಗರ ಜಿಲ್ಲಾಧ್ಯಕ್ಷ ಖಲೀಲುಲ್ಲಾ. ಇನ್ನೋರ್ವ ಆರೋಪಿ ಸಜೀಪಮುನ್ನೂರು ನಿವಾಸಿ ಅಬ್ದುಲ್ ಶಾಫಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಪತ್ರಿಕಾಗೋಷ್ಟಿಯಲ್ಲಿ ಅರೋಪಿಗಳ ಬಂಧನಗಳ ಬಗ್ಗೆ ನಿಖರವಾದ ಮಾಹಿತಿಯನ್ನು ನೀಡಿದ್ದರು.

7 ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪೊಲೀಸ್ ತಂಡಗಳನ್ನು  ಶರತ್ ಮಡಿವಾಳ ಹತ್ಯೆಯ ತನಿಖೆ ನಡೆಸುವ ಸಲುವಾಗಿ ರಚಿಸಲಾಗಿತ್ತು. ಎಸಿಪಿ ವೆಲಂಟೈನ್ ಡಿ’ಸೋಜಾ, ಡಿಸಿಐಬಿ ಇನ್ಸ್‌ಪೆಕ್ಟರ್ ಸುನೀಲ್ ನಾಯ್ಕ್, ಪುತ್ತೂರು ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಬೆಳ್ತಂಗಡಿ ಇನ್ಸ್‌ಪೆಕ್ಟರ್ ರವಿ ಮತ್ತು ಡಿಸಿಐಬಿ ಇನ್ಸ್‌ಪೆಕ್ಟರ್ ಅಮಾನುಲ್ಲಾ ಅವರು ಪ್ರತ್ಯೇಕ ತನಿಖಾ ತಂಡಗಳಾಗಿ ಆರೋಪಿಗಳ ಪತ್ತೆಗೆ ವ್ಯಾಪಕವಾದ ಜಾಲ ಹೆಣೆದಿದ್ದರು.

ಶರತ್ ಹತ್ಯೆ ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳ ಬಂಧನವಾಗಿದ್ದು, ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡ ಆರೋಪಿಗಳನ್ನು ಶೀಘ್ರದಲ್ಲೆ ಬಂಧಿಸುವುದಾಗಿ ಎಸ್ಪಿ ಸುಧೀರ್ ಕುಮಾರ್ ತಿಳಿಸಿದ್ದಾರೆ.

ಜುಲೈ 4 ರಂದು ರಾತ್ರಿ ಬಂಟ್ವಾಳ ತಾಲೂಕಿನ ಬಿಸಿರೋಡ್ ಬಳಿ ತಾನು ನಡೆಸುತ್ತಿದ್ದ ಉದಯ ಲಾಂಡ್ರಿಯ ಬಾಗಿಲು ಹಾಕಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಶರತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಜುಲೈ 7 ರಂದು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು.

ಇದನ್ನೂ ಓದಿ:
ಶರತ್ ಕೊಲೆಗೆ ಸಬಂಧಿಸಿದ ಎಲ್ಲ ಸುದ್ದಿಗಳ ಲಿಂಕ್ ಇಲ್ಲಿದೆ.
►►ಶರತ್ ಮಡಿವಾಳ ಹತ್ಯೆ: ಇಬ್ಬರ ಬಂಧನ ಖಚಿತಪಡಿಸಿದ ಪೊಲೀಸರು:
http://bit.ly/2w6BQw6
►►ಆರಸ್ಸೆಸ್ ಶರತ್ ಬರ್ಬರ ಹತ್ಯೆ: ತಿಂಗಳಾದರೂ ಆರೋಪಿಗಳ ಬಂಧನವಿಲ್ಲ: http://bit.ly/2hwDLUx
►►ಶರತ್ ಶವಯಾತ್ರೆಯಲ್ಲಿ ಕಲ್ಲು ತೂರಾಟ: ಸಂಘಪರಿವಾರದ ವಿರುದ್ಧ ಸಾಕ್ಷ್ಯಕ್ಕಾಗಿ ಪೊಲೀಸರ ಪರದಾಟ: http://bit.ly/2vL1feu
►►ಶರತ್ ಸಾವಿನ ಸುದ್ದಿ ಪ್ರಕಟಿಸಲು ವಿಳಂಬವಾಯಿತೆ? ಸೋಷಿಯಲ್ ಮೀಡಿಯಾದಲ್ಲಿ ಗುಸು ಗುಸು:
http://bit.ly/2uUdUs5
►►ಕರಾವಳಿಯ ಮನೆಗಳು ಹೀಗೆ ಖಾಲಿಯಾಗಲು ಬಿಡದಿರೋಣ: http://bit.ly/2tAbleC
►►ಇರಿತಕ್ಕೊಳಗಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತನನ್ನು ಆಸ್ಪತ್ರೆಗೆ ಸಾಗಿಸಿದ ಮುಸ್ಲಿಂ ವ್ಯಾಪಾರಿ: http://bit.ly/2urULxo
►►ಮುಂದುವರಿದ ಹಲ್ಲೆಗಳು: ಮಂಗಳೂರಿನ ಕುತ್ತಾರಿನಲ್ಲಿ ಯುವಕನಿಗೆ ಮಾರಕ ಹಲ್ಲೆ: http://bit.ly/2u54ugc
►►ಆರೆಸ್ಸೆಸ್ ಕಾರ್ಯಕರ್ತ ಶರತ್ ಮೃತದೇಹ ಅಂತಿಮ ಯಾತ್ರೆ: ಹಲವೆಡೆ ಕಲ್ಲು ತೂರಾಟ: http://bit.ly/2sXCh6c
►►ಬಂಟ್ವಾಳ: ಇರಿತಕ್ಕೊಳಗಾಗಿದ್ದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮೃತ್ಯು: http://bit.ly/2u02LZx
►►ಕಲ್ಲು ತೂರಾಟಕ್ಕೆ ರಸ್ತೆಯುದ್ದಕ್ಕೂ ಕಲ್ಲು ಸಂಗ್ರಹಿಸಿದ ಹಿಂದೂತ್ವ ‘ಕಾರ್ಯಕರ್ತರು’. ವಿಡಿಯೊ ವೈರಲ್: http://bit.ly/2tvcR34
►►ಕಲ್ಲು ತೂರಾಟಕ್ಕೆ ಸಂಚು ನಡೆಸಿದ್ದ ಆರೋಪ: ಸತ್ಯಜಿತ್ ಸುರತ್ಕಲ್‌ಗಾಗಿ ಪೊಲೀಸರಿಂದ ಶೋಧ: http://bit.ly/2tz9f07
►►ದಕ್ಷಿಣ ಕನ್ನಡ ಜಿಲ್ಲೆಯವರು ಷಂಡರಾ? ಜಿಲ್ಲೆಯ ಜನರ ಪುರುಷತ್ವಕ್ಕೆ ಸವಾಲ್ ಎಸೆದ ಉಡುಪಿ ಸಂಸದೆ!: http://bit.ly/2sYY961
►►ನನ್ನನ್ನು ನೋಡಲು ರಮಾನಾಥ ರೈ ಇನ್ನೂ ಬಂದಿಲ್ಲ: ಶರತ್ ತಂದೆ ತನ್ನಿಯಪ್ಪ ಅಳಲು: http://bit.ly/2v662mJ
►►ಕಲ್ಲು ತೂರಾಟ: ಹಿಂದೂತ್ವ ಸಂಘಟನೆಗಳ ಮುಖಂಡರ ವಿರುದ್ದ ಎಫ್ಐಆರ್: http://bit.ly/2sZaGq3
►►ಬಿಜೆಪಿ ನಾಯಕರು ಷಂಡರೊ, ಗಂಡಸರೊ ಗೊತ್ತಿಲ್ಲ. ನಾನು ಅಂಥ ಭಾಷೆ ಬಳಸುವುದಿಲ್ಲ: http://bit.ly/2sOnb3D
►►ಕ್ಷುಲ್ಲಕ ವಿಚಾರಕ್ಕೆ ವಾಗ್ವಾದ: ಚಾಲಕನಿಗೆ ಚೂರಿ ಇರಿತ: http://bit.ly/2ugRK6k
►►ದ.ಕ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜು.21ರ ತನಕ ನಿಷೇಧಾಜ್ಞೆ ಮುಂದುವರಿಕೆ: http://bit.ly/2tcNz6z
►►ಊರನ್ನು ಉರಿಯಲು ಬಿಟ್ಟು ರಷ್ಯಾಕ್ಕೆ ತೆರಳಿದ ಸಂಸದ ನಳಿನ್ ಒತ್ತಾಯಕ್ಕೆ ಮಣಿದು: http://bit.ly/2tGZnBL
►►ಮೃತ ಆರೆಸ್ಸೆಸ್ ಕಾರ್ಯಕರ್ತ ಶರತ್ ಮನೆಗೆ ಉಸ್ತುವಾರಿ ಸಚಿವ ರಮಾನಾಥ ರೈ:
http://bit.ly/2vbOPIK
►►ಶರತ್ ಹಂತಕರ ಮಹತ್ವದ ಸುಳಿವು ಲಭ್ಯ. ಶೀಘ್ರವೇ ಬಂಧನ: ಎಡಿಜಿಪಿ ಅಲೋಕ್ ಮೋಹನ್: http://bit.ly/2ugF2Uk

Related Tags: Mangaluru, Police Arrest Three Accused, Sharath Madivala Murder Case, Mangaluru Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ