ಮಂಡಿ ಕೀಲು ಚಿಕಿತ್ಸೆಯಾಗಲಿದೆ ಭಾರೀ ಅಗ್ಗ

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ತೀವ್ರ ಮಂಡಿ ನೋವಿನಿಂದ ಬಳಲುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮೂಲಕ ಅಳವಡಿಸಲಾಗುವ 15 ಬಗೆಯ ಕೃತಕ ಮಂಡಿ ಕೀಲು ಉಪಕರಣಗಳ ಬೆಲೆಯ ಗರಿಷ್ಠ ಮಿತಿಯನ್ನು ನಿಗದಿಗೊಳಿಸಿ ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಇಂದಿನಿಂದಲೇ ಪರಿಷ್ಕೃತ ಬೆಲೆಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶದಲ್ಲಿ ಪ್ರತಿವರ್ಷ 1.2 ಲಕ್ಷ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು ಇನ್ನು ಮುಂದೆ ಅಂದಾಜು 1,500 ಕೋಟಿ  ರೂ.ಉಳಿತಾಯವಾಗಲಿದೆ ಎಂದರು.

ಕೃತಕ ಮಂಡಿಚಿಪ್ಪುಗಳ ಬೆಲೆ ಶೇ 60ಕ್ಕಿಂತಲೂ ಅಗ್ಗವಾಗಲಿದ್ದು, ಇನ್ನು ಮುಂದೆ 4,090ರೂ. ಯಿಂದ ಗರಿಷ್ಠ  62,770 ಬೆಲೆಗೆ ಉಪಕರಣ ದೊರೆಯಲಿವೆ.

ಹೆಚ್ಚು ಬಳಕೆಯಲ್ಲಿರುವ ಕೋಬಾಲ್ಟ್ ಕ್ರೋಮಿಯಂ, ಅತ್ಯಂತ ಉತ್ತಮ ಗುಣಮಟ್ಟದ ಟಿಟಾನಿಯಂ ಆಕ್ಸಿಡೈಸ್ಡ್, ಸುಲಭವಾಗಿ ಕಾಲನ್ನು ಮಡಚಲು ಅನುಕೂಲವಾಗುವ ಜಿಕ್ರೋನಿಯಂ ಲೋಹದ ಕೃತಕ ಮಂಡಿಚಿಪ್ಪುಗಳ ಬೆಲೆ ಶೇ 69ರಷ್ಟು ಅಗ್ಗವಾಗಲಿವೆ. ಇನ್ನುಳಿದ ಸಾದಾ  ಉಪಕರಣಗಳ ಬೆಲೆ ಶೇ 59ರಷ್ಟು ಕಡಿಮೆಯಾಗಲಿದೆ.


ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರ, ಹೃದಯದಲ್ಲಿ ಅಳವಡಿಸುವ ಸ್ಟೆಂಟ್ಗಳ ಬೆಲೆಗಳ ಮೇಲೆ ಕೂಡ ಗರಿಷ್ಠ ಮಿತಿ ಹೇರಿತ್ತು. ಈಗ ದುಬಾರಿಯಾದ ಕೃತಕ ಮಂಡಿ ಕೀಲು ಉಪಕರಣಗಳ ಬೆಲೆಗಳ ಮೇಲೂ ನಿಯಂತ್ರಣ ಹೇರಿದೆ.

ಹೆಚ್ಚಿನ ವಿವರಗಳಿಗೆ http://www.nppaindia.nic.in/order/order_knee_160817.pdf ಸಂಪರ್ಕಿಸಬಹುದು.

Related Tags: Knee Replacement, National Pharmaceutical Pricing Authority (NPPA), Orthopedic-Knee Implants, Osteoarthritis, Bhupendra Singh, Ananth Kumar, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ