ಲವ್ ಜಿಹಾದ್ ತನಿಖೆ: ಅಖಿಲಾ ಜೊತೆಗೂ ಮಾತನಾಡುವುದಂತೆ ಸುಪ್ರೀಂ

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಮತಾಂತರಗೊಂಡು ಮುಸ್ಲಿಮ್ ಯುವಕನನ್ನು ಮದುವೆಯಾದ ಹಿಂದೂ ಹುಡುಗಿಯ ಮದುವೆ ಲವ್ ಜಿಹಾದ್ ಆಗಿದೆಯೆ ಎಂದು ತನಿಖೆ ನಡೆಸಲು ಆದೇಶಿಸಿರುವ ಸುಪ್ರೀಮ್ ಕೋರ್ಟ್ ಆ ಯುವತಿಯ ಜೊತೆಗೂ ಮಾತನಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.

ಮುಸ್ಲಿಮ್ ಯುವಕನ ಜೊತೆ ಆಕೆಯ ಮದುವೆಯ ಬಗ್ಗೆ ಅಂತಿಮ ತೀರ್ಪು ಕೊಡುವ ಮುನ್ನ ‘ಅಖಿಲಾ’ ಯಾನೆ ‘ಹದಿಯಾ’ ಜೊತೆ ಮಾತನಾಡುವುದಾಗಿ ನ್ಯಾಯಮೂರ್ತಿ ಜೆ. ಎಸ್. ಕೇಹರ್ ಮುಖ್ಯಸ್ಥರಾಗಿರುವ ಸುಪ್ರೀಮ್ ಕೋರ್ಟ್ ಪೀಠ ಹೇಳಿದೆ.

ಶೆಫಿನ್ ಜಹಾನ್ ಎಂಬ ಯುವಕ ಒಂದು ಮುಸ್ಲಿಂ ವೈವಾಹಿಕ ಸಂಬಂಧಗಳ ಸೈಟ್ ಮೂಲಕ ಹದಿಯಾ(ಅಖಿಲಾ) ಅವರ ಪರಿಚಯ ಮಾಡಿಕೊಂಡಿದ್ದರು. ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವಾ ಇಸ್ಲಾಂಗೆ ಮತಾಂತಗೊಂಡಿದ್ದ ಅಖಿಲಾ ಬಳಿಕ ಜೆಹಾನ್ ಅವರನ್ನು ಭೇಟಿ ಮಾಡಿದ್ದರು. ಜೆಹಾನ್ಗೆ ಹದಿಯಾಳ ಹಿನ್ನೆಲೆ ಗೊತ್ತಿತ್ತು ಎಂದು ಜೆಹಾನ್ ಹೇಳಿದ್ದರು. 

ಶೆಫಿನ್ ಜಹಾನ್ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ಇಂದಿರಾ ಜೈಸಿಂಗ್ ನ್ಯಾಯಮೂರ್ತಿಗಳ ಬಳಿ ಆ ಯುವತಿಯ ಪ್ರಮಾಣ ಪತ್ರವನ್ನಾದರೂ ಪಡೆಯಬೇಕು ಎಂದು ಕೇಳಿತು. ಇದನ್ನು ಒಪ್ಪದ ನ್ಯಾಯಾಲಯ ಅಂತಿಮ ತೀರ್ಪು ನೀಡುವ ಮುನ್ನ ಆಕೆಯನ್ನು ಸಹ ಮಾತನಾಡಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿತು.

ಬಳಿಕ ಎನ್ಐಎ ಯಿಂದ ಪ್ರಕರಣದ ತನಿಖೆಗೆ ಆದೇಶಿಸಿತು. ಲವ್ ಜಿಹಾದ್ ಅನ್ನುವುದು ಇದೆ ಎಂದು ಎನ್ಐಎ ಸುಪ್ರೀಮ್ ಕೋರ್ಟ್‌ಗೆ ತಿಳಿಸಿತ್ತು.

ಹಿಂದಿನ ವರದಿ
‘ಲವ್ ಜಿಹಾದ್’ ತನಿಖೆಗೆ ಸುಪ್ರೀಮ್ ಕೋರ್ಟ್ ಮಹತ್ವದ ಆದೇಶ್
ನವದೆಹಲಿ: ಅತ್ಯಂತ ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಛ ನ್ಯಾಯಾಲಯವು ಕೇರಳದಲ್ಲಿ ನಡೆದಿದೆ ಎನ್ನಲಾದ ‘ಲವ್ ಜಿಹಾದ್’ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ (ಎನ್ಐಎ) ತನಿಖೆ ನಡೆಸುವಂತೆ ಆದೇಶ ನೀಡಿದೆ. ಈ ತನಿಖೆಯನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಮೂರ್ತಿ ರಾ. ವಿ. ರವೀಂದ್ರನ್ ಅವರ ಉಸ್ತುವಾರಿಯಲ್ಲಿ ನಡೆಸುವಂತೆ ಸೂಚಿಸಿದೆ.

ಕೇರಳದ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನ ಜೊತೆ ಮದುವೆಯಾಗಿದ್ದಳು. ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಆದ ಈ ಮದುವೆಯನ್ನು ಕೇರಳ ಹೈಕೋರ್ಟ್ ಅನೂರ್ಜಿತಗೊಳಿಸಿ ಯುವತಿಯನ್ನು ತಂದೆಯ ಜೊತೆ ಕಳುಹಿಸುವಂತೆ ಆದೇಶಿಸಿತ್ತು.

“ಲವ್ ಜಿಹಾದ್ ನಿಜವಾಗಿಯೂ ನಡೆಯುತ್ತಿದೆ. ಮುಸ್ಲಿಮ್ ಯುವಕರನ್ನು ಮದುವೆಯಾಗುವ ಸಲುವಾಗಿಯೇ ಮತಾಂತರಗೊಳಿಸುವುದು ನಡೆಯುತ್ತಿದೆ” ಎಂದು ಎನ್ಐಎ ಸರ್ವೋಚ್ಛ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಬಳಿಕವೇ ಈ ಆದೇಶ ಹೊರಬಿದ್ದಿದೆ.

ಈ ವಿಷಯದಲ್ಲಿ ಮತಾಂತರಗೊಂದು ಮದುವೆಯಾದ ಯುವತಿ, ಕೇರಳ ಪೊಲೀಸರು ಮತ್ತು ಎನ್ಐಎ ಇಂದ ಮಾಹಿತಿ ಪಡೆದ ಬಳಿಕ ಮತ್ತೆ ಪರಿಶೀಲನೆ ನಡೆಸುವುದಾಗಿ ಹೇಳಿದೆ.

ಪ್ರಕರಣದ ಸಂಪೂರ್ಣ ವಿವರ
ಹಿಂದೂ ಯುವತಿಯಾಗಿದ್ದ ಅಖಿಲಾ ಇಸ್ಲಾಂಗೆ ಮತಾಂತರಗೊಂಡು ಹದಿಯಾ ಎಂದು ಹೆಸರನ್ನು ಬದಲಿಸಿಕೊಂಡಿದ್ದಳು. ಆದರೆ ತನ್ನ ಬದುಕಿನಲ್ಲಿ ಮತಾಂತರದಂತಹ ಮಹತ್ವದ ನಿರ್ಧಾರವನ್ನು ಅಖಿಲಾ ತನ್ನ ಹೆತ್ತವರ ಜೊತೆ ಸಮಾಲೋಚಿಸಿ ತೆಗೆದುಕೊಳ್ಳಬೇಕಾಗಿತ್ತು ಎಂದು ಕೇರಳ ಹೈಕೋರ್ಟ್ ಅಪರೂಪದ ಕಾರಣ ಹೇಳಿ ಈ ಮದುವೆಯನ್ನು ರದ್ದು ಮಾಡಿತ್ತು. ಮಾತ್ರವಲ್ಲ ಈ ಮದುವೆಯಲ್ಲಿ ಏನೋ ಅಸಹಜವಾದದ್ದು ಇದೆ ಎಂದು ಹೈಕೋರ್ಟ್ ಹೇಳಿತ್ತು.

ಶೆಫಿನ್ ಜಹಾನ್ ಒಂದು ಮುಸ್ಲಿಂ ವೈವಾಹಿಕ ಸಂಬಂಧಗಳ ಸೈಟ್ ಮೂಲಕ ಹದಿಯಾ(ಅಖಿಲಾ) ಅವರ ಪರಿಚಯ ಮಾಡಿಕೊಂಡಿದ್ದರು. ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವಾ ಇಸ್ಲಾಂಗೆ ಮತಾಂತಗೊಂಡಿದ್ದ ಅಖಿಲಾ ಬಳಿಕ ಜೆಹಾನ್ ಅವರನ್ನು ಭೇಟಿ ಮಾಡಿದ್ದರು. ಜೆಹಾನ್ಗೆ ಹದಿಯಾಳ ಹಿನ್ನೆಲೆ ಗೊತ್ತಿತ್ತು ಎಂದು ಜೆಹಾನ್ ಹೇಳಿದ್ದರು.

ಅಖಿಲಾ(ಹದಿಯಾ) ಮತಾಂತರಗೊಂಡ ನಂತರ ಹಾಸ್ಟೆಲ್ ಒಂದರಲ್ಲಿ ವಾಸವಾಗಿದ್ದಳು. ಆಕೆಯ ತಂದೆ ಅಶೋಕನ್ ಆಕೆಯನ್ನು ಹುಡುಕಿಕೊಡುವಂತೆ ಮೂರು ಬಾರಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. 

ಡಿಸೆಂಬರ್ 19ರಂದು ಜೆಹಾನ್ ಮತ್ತು ಹದಿಯಾ ಇಸ್ಲಾಂನ ಧಾರ್ಮಿಕ ವಿಧಿಗಳಂತೆ ಮದುವೆಯಾಗಿದ್ದರು. ಮದುವೆಯ ನೋಂದಣಿಗಾಗಿ ಓಡಾಡುತ್ತಿರುವಾಗಲೆ ಹದಿಯಾ ಹೈಕೋರ್ಟ್ಗೆ ಹಾಜರಾಗಬೇಕೆಂದು ಆದೇಶ ಹೊರಬಿದ್ದಿತ್ತು.

“ನನ್ನ ಮಗಳನ್ನು ಐಸಿಸ್ ಉಗ್ರಗಾಮಿ ಸಂಘಟನೆಯಲ್ಲಿ ಕೆಲಸ ಮಾಡಲು ಸಿರಿಯಾಕ್ಕೆ ಕಳುಹಿಸುವ ಸಲುವಾಗಿ ಮತಾಂತರಿಸಲಾಗಿದೆ” ಎಂದು ಅಖಿಲಾ ತಂದೆ ಅಶೋಕನ್ ದೂರಿಕೊಂಡಿದ್ದರು. ಆದರೆ ಪೊಲೀಸರು ಈ ಕುರಿತು ತನಿಖೆ ನಡೆಸಿ ಆಕೆ ಸಿರಿಯಾಕ್ಕೆ ಹೋಗುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು.

ಅಖಿಲಾ ಕೂಡ ತನ್ನ ತಂದೆಗೆ ಈ ಕುರಿತು ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು. ತಾನು ಬಾರತದಲ್ಲೆ ಇರುತ್ತೇನೆ ಮತ್ತು ಇಲ್ಲಿಂದ ಎಲ್ಲೂ ಹೋಗುವುದಿಲ್ಲ ಎಂದು ಸಹ ಅಖಿಲಾ ಯಾನೆ ಹದಿಯಾ ಹೇಳಿದ್ದರು. ಆದರೆ ಹೈಕೋರ್ಟ್ ಇದೀಗ ಅಖಿಲಾ ಯಾನೆ ಹದಿಯಾ ಮತ್ತು ಜೆಹಾನ್ ಅವರ ಮದುವೆಯನ್ನು ಅನೂರ್ಜಿತಗೊಳಿಸಿ ಆದೇಶ ಹೊರಡಿಸಿದೆ. ಆಕೆಯ ತಂದೆಯ ಜೊತೆ ಆಕೆ ಹೋಗಬೇಕೆಂದು ಹೈಕೋರ್ಟ್ ಹೇಳಿತ್ತು.

ಹೈಕೋರ್ಟ್ನ ಈ ತೀರ್ಮಾನದಿಂದ ಅನ್ಯಾಯವಾಗಿದ್ದು ತಮ್ಮ ಹಕ್ಕನ್ನು ಕೇಳಲು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಅಖಿಲಾ ಯಾನೆ ಹದಿಯಾಳನ್ನು ಮದುವೆಯಗಿದ್ದ ಜೆಹಾನ್ ಹೇಳಿದ್ದರು. ಆಕೆ ತನ್ನ ಇಷ್ಟದ ಧರ್ಮವನ್ನು ಆಯ್ಕೆ ಮಾಡಿಕೊಂಡಿದ್ದಾಳೆ ತನ್ನಿಷ್ಟದಂತೆ ಮದುವೆಯಾಗಿದ್ದಾಳೆ. ಇದರಲ್ಲಿ ತಪ್ಪೇನಿದೆ ಎಂದು ಜೆಹಾನ್ ಪ್ರಶ್ನಿಸಿದ್ದರು.

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ