ಬ್ಲೂ ವೇಲ್ ಸುಸೈಡ್ ಗೇಮ್: ಕೇರಳದಲ್ಲಿ ಇನ್ನೊಬ್ಬ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ
ತಿರುವನಂತಪುರಂ:
ಆಡುವವರನ್ನು ಆತ್ಮಹತ್ಯೆ ಮಾಡಿಕೊಳ್ಳಲು ಅಥವಾ ಕೊಲೆ ಮಾಡಲು ಸವಾಲೊಡ್ಡುವ ಬ್ಲೂವೇಲ್ ಸುಸೈಡ್ ಗೇಮ್ ಇನ್ನೊಬ್ಬ ಯುವಕನನ್ನು ಬಲಿತೆಗೆದುಕೊಂಡಿದೆ.

ಕೇರಳದಲ್ಲಿ  ನಡೆದ ಇನ್ನೊಂದು ಪ್ರಕರಣವೂ ಇದೇ ಬ್ಲೂವೇಲ್ ಸುಸೈಡ್ ಗೇಮ್‌ಗೆ ಸಂಬಂಧಿಸಿದೆ ಎಂದು ತಡವಾಗಿ ತಿಳಿದುಬಂದಿದ್ದು ಇದು ಕೇರಳದ ಎರಡನೆಯ ಪ್ರಕರಣ ಎನ್ನಲಾಗುತ್ತಿದೆ.

ಕೇರಳದ ರಾಜಧಾನಿ ತಿರುವನಂತಪುರಂ ಸಮೀಪದಲ್ಲೆ ಜುಲೈ 26ರಂದು ಈ ಘಟನೆ ನಡೆದಿದೆ. 16 ವರ್ಷ ಪ್ರಾಯದ ಮನೋಜಿ. ಸಿ. ಮನು ಎಂಬ ಹದಿಹರಯದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಈ ಸಾವು ಬ್ಲೂವೇಲ್ ಸುಸೈಡ್ ಗೇಮ್‌ಗೆ ಸಂಬಂಧಿಸಿದೆ ಎಂದು ಮನೋಜ್ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

“ಕಳೆದ ನವಂಬರ್ನಲ್ಲಿ ಆತ ಈ ಆಟ ಶುರು ಮಾಡಿದ್ದ. ಬಳಿಕ ಆತನ ತನಗೆ ತಾನೇ ಗಾಯ ಮಾಡಿಕೊಳ್ಳುವುದು ಇತ್ಯಾದಿ ಮಾಡಿಕೊಳ್ಳುತ್ತಿದ್ದ. ಕೈ ಮೇಲೆ “ABI” ಎಂದು ಇಂಗ್ಲೀಷ್ನಲ್ಲಿ ಕೆತ್ತಿಕೊಂಡಿದ್ದ. ಇದರ ಅರ್ಥವೇನೆಂದು ನನಗೂ ತಿಳಿದಿಲ್ಲ” ಎಂದು ಮನೋಜ್ ತಾಯಿ ಹೇಳಿದ್ದಾರೆ.

“ಈ ಗೇಮ್‌ನ ಕೊನೆಯ ಸವಾಲು ಯಾರನ್ನಾದರೂ ಕೊಲ್ಲುವುದು ಅಥವಾ ಸ್ವತಃ ಆತ್ಮಹತ್ಯೆ ಮಾಡಿಕೊಳ್ಳುವುದು ಎಂದು ಆತ ನನಗೆ ಹೇಳಿದ್ದ. ನಾನು ಆಗ ಭಯಭೀತಳಾಗಿ ಈ ಗೇಮ್ ಆಡಬೇಡ ಎಂದು ಹೇಳಿದ್ದೆ” ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾರೆ.

“ಕೆಲ ವಾರಗಳ ಹಿಂದೆ ಅಮ್ಮ ನಾನು ಆತ್ಮಹತ್ಯೆ ಮಾಡಿಕೊಂಡರೆ ನಿನಗೆ ಹೇಗೆ ಫೀಲ್ ಆಗತ್ತೆ ಎಂದು ನನ್ನು ಪ್ರಶ್ನಿಸಿದ್ದ. ಸಾಯುವ ಎರಡು ವಾರಗಳ ಹಿಂದೆ ತುಂಬಾ ಹಾರರ್ ಮೂವಿಗಳನ್ನು ನೋಡಿದ್ದ” ಎಂದು ಮನೋಜ್ ತಾಯಿ ಹೇಳಿದ್ದಾರೆ.

ಮನೋಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.ಇನ್ನೊಂದು ಆತ್ಮಹತ್ಯೆ ಕೂಡ ಒಂದು ತಿಂಗಳ ಹಿಂದೆ ನಡೆದಿದ್ದು 22 ವರ್ಷ ಪ್ರಾಯದ ಯುವಕ, ಸಾವಂತ್ ಎಂಬಾತ ಕೂಡ ಬ್ಲೂವೇಲ್ ಸುಸೈಡ್ ಗೀಳು ಹಚ್ಚಿಕೊಂಡಿದ್ದ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಒದಿ:
►► 'ಭಾರತದಲ್ಲೂ ಬ್ಲೂವೇಲ್' ಆತ್ಮಹತ್ಯೆಗಳು': ಗೇಮ್ ನಿಷೇಧಕ್ಕೆ ಸರ್ಕಾರದ ಖಡಕ್ ಆದೇಶ:
http://bit.ly/2wd1nTD
►►ಪೋಷಕರೆ ಎಚ್ಚರ. ನಿಮ್ಮ ಮಗು 'ಬ್ಲೂ ವೇಲ್' ಸೂಸೈಡ್ ಗೇಮ್ ಆಡುತ್ತಿರಬಹುದು: http://bit.ly/2wOdzYn

Related Tags: Blue Whale Suicide Gane, Death, Kerala Boy, Manoj C Mohan Suicide
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ