ನಾನು ಚೆನ್ನಾಗಿದ್ದೇನೆ. ಚಿಂತೆ ಬೇಡ: ಸದಾಶಿವ್ ಬ್ರಹ್ಮಾವರ್ ಸ್ಪಷ್ಟನೆ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ನಾನು ಯಾವುದೇ ಸಂಕಷ್ಟದಲ್ಲಿಲ್ಲ. ಕುಟುಂಬದ ಜೊತೆ ಸಂತೋಷವಾಗಿದ್ದೇನೆ. ಯಾರೂ ಕೂಡ ಗಾಬರಿಯಾಗಬೇಡಿ ಎಂದು ಹಿರಿಯ ನಟ ಸದಾಶಿವ್ ಬ್ರಹ್ಮಾವರ್ ಹೇಳಿದ್ದಾರೆ.


ಕನ್ನಡದ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು ಕುಮಟಾ ಬಸ್ ಸ್ಟ್ಯಾಂಡ್‌ನಲ್ಲಿ ತಾನು ಬಸ್‌ಗಾಗಿ ಕಾಯುತ್ತಿದ್ದಾಗ ಕೆಲ ಹುಡುಗರು ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಸೃಷ್ಟಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಹಿರಿಯ ನಟ ಸದಾಶಿವ್ ಬ್ರಹ್ಮಾವರ್ ಅವರು ಬೀದಿಗೆ ಬಂದಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಸದಾಶಿವ್ ಬ್ರಹ್ಮಾವರ್ ಬೀದಿಯಲ್ಲಿರುವಂತಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲೂ ವ್ಯಾಪಕವಾಗಿ ಹರಿದಾಡಿತ್ತು. 

ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದಿರುವ ಸದಾಶಿವ ಬ್ರಹ್ಮಾವರ್ "ಕುಮಟಾ ಬಸ್ ನಿಲ್ದಾಣದಿಂದ ಬ್ರಹ್ಮಾವರ್‌ಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದೆ. ಬಸ್ ತಡವಾಗಿ ಬಂತು. ನನಗೂ ಹಸಿವಾಗಿತ್ತು. ಆ ಸಂದರ್ಭದಲ್ಲಿ ಕೆಲ ಸ್ಥಳೀಯರು ತನ್ನನ್ನು ಗುರುತು ಹಿಡಿದು ಬಳಿ ಬಂದು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದಾರೆ.

ಬಳಿಕ ತಾನು ಬ್ರಹ್ಮಾವರ್‌ಗೆ ಹೋಗಬೇಕೆಂದಾಗ ಬಸ್ ಹತ್ತಿಸಿ ಕಳುಹಿಸಿದ್ದಾರೆ.  ಕೆಲ ಹುಡುಗರನ್ನು ಬ್ರಹ್ಮಾವರ್‌ವರೆಗೂ ಬಂದು ಬೀಳ್ಕೊಟ್ಟು ಹೋದರು. ಆದ ವಿಷಯ ಇಷ್ಟೆ" ಎಂದು ಸದಾಶಿವ್ ಬ್ರಹ್ಮಾವರ್ ಹೇಳಿದ್ದಾರೆ.

ಬ್ರಹ್ಮಾವರ್‌ನಲ್ಲಿ ಮಗಳ ಮನೆ ಇದೆ. ಬೈಲಹೊಂಗಲದಲ್ಲಿ ಮಗನ ಮನೆ ಇದೆ. ನಾನು ಎರಡೂ ಕಡೆ ಓಡಾಡಿಕೊಂಡು ಆರಾಮವಾಗಿದ್ದೇನೆ. ಸುಖವಾಗಿದ್ದೇನೆ. ದುಡ್ಡಿಗೂ ತೊಂದರೆ ಇಲ್ಲ ಎಂದು ಸದಾಶಿವ್ ಬ್ರಹ್ಮಾವರ್ ಹೇಳಿದ್ದಾರೆ.

ಸದಾಶಿವ ಬ್ರಹ್ಮಾವರ್ ಮಗ-ಸೊಸೆ ಏನೆನ್ನುತ್ತಾರೆ?
ಅಪ್ಪ ಆರ್ಥಿಕವಾಗಿ ಚೆನ್ನಾಗೇ ಇದ್ದಾರೆ. ಆಗಾಗ ದೇವಸ್ಥಾನಕ್ಕೆ ಹೋಗುವುದಷ್ಟೇ ಅಲ್ಲ, ತಮ್ಮ ಜೇಬಿನಲ್ಲಿದ್ದ ಎಲ್ಲಾ ಹಣವನ್ನೂ ದೇವಸ್ಥಾನದ ಹುಂಡಿಗೇ ಹಾಕಿಬಿಡುತ್ತಾರೆ. ಬಳಿಕ ಜೇಬಿನಲ್ಲಿ ಹಣ ಖಾಲಿಯಾದಾಗ ವಾಪಸ್ ಬರಲು ಹಣವಿಲ್ಲದೇ ಒದ್ದಾಡುತ್ತಾರೆ ಎಂದು ಸದಾಶಿವ ಬ್ರಹ್ಮಾವರ್ ಅವರ ಪುತ್ರ ರವೀಂದ್ರ ಬ್ರಹ್ಮಾವರ್ ಹೇಳಿದ್ದಾರೆ.

"ಮಾವ ದೇವಸ್ಥಾನಕ್ಕೆ ಒಬ್ಬರೇ ಹೋಗುತ್ತಾರೆ. ವಯಸ್ಸಾಯಿತು ನೀವು ಎಲ್ಲೂ ಹೋಗಬೇಡಿ ಎಂದರೂ ನಾನು ತಿರುಗಾಡುತ್ತಾ ಇರುತ್ತೇನೆ ಎಂದು ಹಠ ಹಿಡಿಯುತ್ತಾರೆ. ಮಾವ ಈ ಮನೆಯ ಯಜಮಾನರು. ನಮ್ಮಿಂದ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು" ಸದಾಶಿವ ಬ್ರಹ್ಮಾವರ್ ಅವರ ಸೊಸೆ ಪ್ರೀತಿ ಹೇಳಿದ್ದಾರೆ.

ನಮಗೆ ಅವರು ಬೇಕು. ಇಲ್ಲಿ ಅವರನ್ನು ಪ್ರೀತಿ ಮಾಡುವ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಇದ್ದಾರೆ ಎಂದು ಪ್ರೀತಿ ಹೇಳಿದ್ದಾರೆ.

ಇದನ್ನೂ ಓದಿ:
►►ಬೀದಿಗೆ ಬಿದ್ದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ಅವರಿಗೆ ಸುದೀಪ್ ನೆರವಿನ ಹಸ್ತ:
http://bit.ly/2i45k7G

Related Tags: Sadashiva Brahmavar, Sudeep Help, Kannada Actor, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ