ಶೋಕ ಸಾಗರದ ನಡುವೆ ಅಮಿತ್ ಅಂತ್ಯಕ್ರಿಯೆ

ಶ್ರೀಕಾಂತ ಹೆಮ್ಮಾಡಿ/ಕರಾವಳಿ ಕರ್ನಾಟಕ ವರದಿ
ಕುಂದಾಪುರ:
ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ನಡೆಯತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದ ಬಿ.ಬಿ ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ಅಮಿತ್(18) ಮೃತದೇಹದ ಅಂತಿಮ ಸಂಸ್ಕಾರ ಇಂದು ಬೆಳಗ್ಗೆ ನಡೆಯಿತು.

ಸಹಸ್ರ ಸಂಖ್ಯೆಯಲ್ಲಿ ಅಮಿತ್ ಮನೆಗೆ ಆಗಮಿಸಿದ ಕಾಲೇಜು ವಿದ್ಯಾರ್ಥಿಗಳು ಮೃತದೇಹ ನೋಡಿ ಬಿಕ್ಕಿ ಬಿಕ್ಕಿ ಅತ್ತರು. ಈ ಸಂದರ್ಭದಲ್ಲಿ ಅಮಿತ್ ತಾಯಿ ಹಾಗೂ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

ಕಾಲೇಜಿನಲ್ಲಿ ಸಂತಾಪ ಸೂಚಕ ಸಭೆ
ಪ್ರಥಮ ವರ್ಷದ ಬಿ.ಕಾಂ. ವಿದ್ಯಾರ್ಥಿ ಅಮಿತ್ ಪೂಜಾರಿ ಸ್ವಾತಂತ್ರ್ಯ ದಿನಾಚರಣೆಯ ದಿನ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆಯ ಹಿನ್ನೆಲೆಯಲ್ಲಿ ಇಂದು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂತಾಪ ಸೂಚಕ ಸಭೆ ಏರ್ಪಡಿಸಲಾಯಿತು. www.karavalikarnataka.com

ಸಭೆಯನ್ನು ಉದ್ಧೇಶಿಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಸುಧೀರ್ ಕುಮಾರ್, ಕು. ಪ್ರಥ್ವಿಶ್ರೀ ಮಾತನಾಡಿದರು.

ಬಳಿಕ ಅಮಿತ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿ, ಮೌನ ಪ್ರಾರ್ಥನೆಗೈದು, ಆತ್ಮಕ್ಕೆ ಶಾಂತಿ ಕೋರಲಾಯಿತು.

ಅಮಿತ್ ಅಕಾಲಿಕ ಸಾವಿಗೆ ಕಾಲೇಜಿನ ಆಡಳಿತ ಮಂಡಳಿ, ಬೋಧಕ-ಬೋಧಕೇತರ ವೃಂದ ಹಾಗೂ ಸಹಸ್ರ ಸಂಖ್ಯೆಯ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದು, ಇಂದು ಕಾಲೇಜಿಗೆ ರಜೆ ಸಾರಲಾಗಿದೆ. www.karavalikarnataka.com


ಹಿಂದಿನ ವರದಿ:

ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆಯೆ ವಿದ್ಯಾರ್ಥಿಯ ಹಠಾತ್ ಸಾವು
ಶ್ರೀಕಾಂತ ಹೆಮ್ಮಾಡಿ/ಕರಾವಳಿ ಕರ್ನಾಟಕ ವರದಿ
ಕುಂದಾಪುರ:
ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದ ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ.

ಬಿ.ಬಿ ಹೆಗ್ಡೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಹಟ್ಟಿಕುದ್ರು ನಿವಾಸಿ ಅಮಿತ್ ಪೂಜಾರಿ(18) ಸಾವನ್ನಪ್ಪಿದ ದುರ್ದೈವಿ.

ಅಮಿತ್‌ಗೆ ಈ ಹಿಂದೆಯೇ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಇದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಇಂದು ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮ ಮುಗಿದ ಬಳಿಕ ಅಮಿತ್ ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ಕಾಲೇಜಿನ ಸಭಾಂಗಣಕ್ಕೆ ಬಂದು ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. www.karavalikarnataka.com


ಈ ಸಂದರ್ಭದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡು ಕುಳಿತಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಕಾಲೇಜಿನ ಪ್ರಾಧ್ಯಾಪಕವೃಂದ ಹಾಗೂ ಸಹಪಾಠಿಗಳು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಅಮಿತ್ ಕೊನೆಯುಸಿರೆಳೆದಿದ್ದಾರೆ.

ಶೋಕದಲ್ಲಿ ಮುಳುಗಿತು ಕಾಲೇಜು
71ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ಅಮಿತ್ ಬೆಳಗ್ಗೆ ಕಾಲೇಜಿಗೆ ತಯಾರಾಗಿ ನಗುನಗುತಾ ಬಂದಿದ್ದು, ತನ್ನ ಸ್ನೇಹಿತರ ಜೊತೆ ಲವಲಿಕೆಯಿಂದ ಇದ್ದಿದ್ದರು ಎನ್ನಲಾಗಿದೆ. ಸ್ವಾತ್ರ್ಯೋತ್ಸವ ಸಂಭ್ರಮದಲ್ಲಿದ್ದ ಇಡೀ ಕಾಲೇಜು ಅಮಿತ್ ಸಾವಿನ ಸುದ್ದಿ ಬಳಿಕ ಶೋಕದಲ್ಲಿ ಮುಳುಗಿದೆ.

ಹಟ್ಟಿಕುದ್ರು ಜಡ್ಡಿನಕುದ್ರು ನಿವಾಸಿ ಆನಂದ ಹಾಗೂ ಸುಗಂಧಿ ದಂಪತಿಗಳ ಪ್ರಥಮ ಪುತ್ರರಾಗಿರುವ ಅಮಿತ್ ಈ ಹಿಂದೆ ಆರ್.ಎನ್ ಶೆಟ್ಟಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದರು. www.karavalikarnataka.com

ತಂದೆ ಬಾಂಬೆಯಲ್ಲಿ ಹೊಟೇಲ್ ಉದ್ಯೋಗಿಯಾಗಿದ್ದಾರೆ. ಅಮಿತ್ ತಂದೆ-ತಾಯಿ ಹಾಗೂ ಇಬ್ಬರು ಸಹೋದರಿಯರಾದ ಐಶ್ವರ್ಯ ಹಾಗೂ ಅನುಶ್ರೀಯನ್ನು ಅಗಲಿದ್ದಾರೆ.

ಅಮಿತ್ ಅಕಾಲಿಕ ಸಾವಿಗೆ ಕಾಲೇಜಿನ ಪ್ರಾಧ್ಯಾಪಕವೃಂದ ಹಾಗೂ ಅವರ ಸ್ನೇಹ ಬಳಗ ಅಪಾರ ಕಂಬನಿ ಮಿಡಿದಿದೆ.

ಚಿತ್ರ: ಮುನ್ನ ಛಾಯಾ

Related Tags: Student Died of Cardiac Problem, Amith, BB Hegde College Kundapur, Independence Day, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ