ಕಲ್ಲಡ್ಕ ಶಾಲೆಗೆ ನೆರವು: ಭಿಕ್ಷಾಂ ದೇಹಿ ಅಭಿಯಾನ ಶುರು

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಆರ್‌ಎಸ್‌ಎಸ್‌ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಯಜಮಾನಿಕೆಯ ಶಾಲೆಗಳಿಗೆ ಕೊಲ್ಲೂರಿನಿಂದ ನೆರವು ಸ್ಥಗಿತಗೊಳಿಸಿರುವ ಬೆನ್ನಲ್ಲೆ ಮಕ್ಕಳ ಬಿಸಿಯೂಟಕ್ಕೆ ಆನ್‌ಲೈನ್‌ ಮೂಲಕ ದೇಣಿಗೆ ಸಂಗ್ರಹ ಆರಂಭವಾಗಿದೆ.

ಕಳೆದ 10 ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಿಂದ ಅನ್ನದಾನಕ್ಕಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಬಂಟ್ವಾಳ ಪುಣಚದ ಶ್ರೀದೇವಿ ಶಾಲೆಗೆ 3 ಕೋಟಿಯಷ್ಟು ಅನುದಾನ ಬಂದಿತ್ತು.

ಈ ಅನುದಾನಕ್ಕೆ ಧಾರ್ಮಿಕ ದತ್ತಿ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ರಾಜ್ಯ ಸರಕಾರ ಅನುದಾನವನ್ನು ಸ್ಥಗಿತಗೊಳಿಸಿತ್ತು.

ಮಂಗಳೂರು ಮೂಲದ ಯುವಕರ ತಂಡವೊಂದು ಭಿಕ್ಷಾಂ ದೇಹಿ ಎಂಬ ಆನ್‌ಲೈನ್‌ ಅಭಿಯಾನ ಆರಂಭಿಸಿ ದೇಣಿಗೆ ಸಂಗ್ರಹ ಮಾಡುತ್ತಿದೆ. ಯುವಕರ ಈ ಆಂದೋಲನಕ್ಕೆ ಭಾರಿ ಪ್ರತಿಕ್ರಿಯೆ ದೊರಕಿದ್ದು ಮೂರು ದಿನಗಳಲ್ಲಿ 5 ಲಕ್ಷಕ್ಕೂ ಮಿಕ್ಕಿ ದೇಣಿಗೆ ಸಂಗ್ರಹವಾಗಿದೆ.

ದೇಶ ವಿದೇಶಗಳ ಹಲವಾರು ದಾನಿಗಳು ಲಕ್ಷಾಂತರ ರೂಪಾಯಿ ನೆರವಿನ ಘೋಷಣೆ ಮಾಡಿದ್ದು ಅಕ್ಕಿ ಹಾಗೂ ಇನ್ನಿತರ ವಸ್ತುಗಳನ್ನು ಉಚಿತವಾಗಿ ನೀಡುವ ಭರವಸೆಯೂ ಬಂದಿದೆ. ಶಾಸಕ ಸಿ.ಟಿ. ರವಿ 1 ಲಕ್ಷ ರೂ. ನೆರವು ನೀಡುವುದಾಗಿ ಟ್ವೀಟರ್‌ನಲ್ಲಿ ಘೋಷಿಸಿದ್ದಾರೆ.

ಮುಂಬಯಿಯಲ್ಲಿ  ನೆಲೆಸಿರುವ ಮಂಗಳೂರಿನ ಮಹೇಶ್‌, ವಿಕ್ರಮ್‌ ಹಾಗೂ  ವಿವೇಕ್‌ ಶೆಟ್ಟಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಅಭಿಯಾನ ನಡೆಯುತ್ತಿದ್ದು ಒಟ್ಟು 80 ಲಕ್ಷ ರೂಗಳನ್ನು ಕಲ್ಲಡ್ಕ ಪ್ರಭಾಕರ್‌ ಭಟ್‌ ನಡೆಸುತ್ತಿರುವ ಶಾಲೆಗಳಿಗೆ ದೇಣಿಗೆ ರೂಪದಲ್ಲಿ ನೀಡಲು ತೀರ್ಮಾನಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇನ್ನು 8 ತಿಂಗಳ ಕಾಲವಿದ್ದು ಆ 8 ತಿಂಗಳಿಗೆ ಬೇಕಾಗುವ 80 ಲಕ್ಷ ರೂಗಳನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಇದನ್ನೂ ಓದಿ:
►►ಬಿಸಿಯೂಟ ಬೇಡವೆಂದು ಬರೆದುಕೊಟ್ಟಿದ್ದ ಭಟ್ಟರು. ಈಗಲೂ ಅರ್ಜಿ ಹಾಕಲಿ: ರಮಾನಾಥ ರೈ:
http://bit.ly/2uGdvcx
►►ಕಲ್ಲಡ್ಕ ಶಾಲೆಗೆ ನೆರವು ನಿಲ್ಲಿಸಿದ್ದು ಕ್ರೌರ್ಯ. ಭಟ್ಟರು ದರೋಡೆಕೋರರಲ್ಲ: ಜನಾರ್ದನ ಪೂಜಾರಿ: http://bit.ly/2vP11Db
►►ಕಲ್ಲಡ್ಕ ಶಾಲೆಗೆ ಕೊಟ್ಟ ಹಣ ದುರುಪಯೋಗವಾಗಿದೆ. ವಸೂಲಿ ಮಾಡಲಾಗುವುದು: ರಮಾನಾಥ ರೈ: http://bit.ly/2fzuV7C
►►ಕೊಲ್ಲೂರು ನೆರವು ಸ್ಥಗಿತ: ಕಲ್ಲಡ್ಕ ಶಾಲಾ ಮಕ್ಕಳಿಂದ ಖಾಲಿ ತಟ್ಟೆ ಬಡಿದು ಪ್ರತಿಭಟನೆ: http://bit.ly/2uunaqv
►►ಕೊಲ್ಲೂರು ದೇವಳದ ನೆರವು ಸ್ಥಗಿತ: ಕಲ್ಲಡ್ಕ ಪ್ರಭಾಕರ ಭಟ್ ಹಾಕಿದ ಸವಾಲು ಏನು ಗೊತ್ತೆ?: http://bit.ly/2vmrZ2l
►►ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!: http://bit.ly/2ukYD71

Related Tags: Bhiksandehi Campian, Kalladka School, Mangaluru, Bhat''s Schools, Prabhakar Bhat, Ramanath Rai, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ