ಬೀದಿಗೆ ಬಿದ್ದ ಸದಾಶಿವ ಬ್ರಹ್ಮಾವರ್ ಅವರಿಗೆ ಸುದೀಪ್ ನೆರವಿನ ಹಸ್ತ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ತಮ್ಮ ಸ್ವಂತ ಮಕ್ಕಳಿಂದಲೇ ಬೀದಿಗೆ ಬಿದ್ದ ವಿಚಾರ ತಿಳಿದ ಖ್ಯಾತ ನಟ ಸುದೀಪ್ ಸದಾಶಿವ ಬ್ರಹ್ಮಾವರ್ ಅವರ ನೆರವಿಗೆ ಧಾವಿಸಿದ್ದಾರೆ.

ಸದಾಶಿವ ಬ್ರಹ್ಮಾವರ್ ನಿರ್ಗತಿಕರಾಗಿ ಬೀದಿಗಳಲ್ಲಿ ಅನ್ನ, ವಸತಿಗಾಗಿ ಅಲೆದಾಡುತ್ತಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನು ಗಮನಿಸಿದ ಸುದೀಪ್ ಸದಾಶಿವ ಬ್ರಹ್ಮಾವರ್ ಅವರ ನೆರವಿಗೆ ಧಾವಿಸುವಂತೆ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಸದಾಶಿವ ಬ್ರಹ್ಮಾವರ್​ ಅವರನ್ನು ಹುಡುಕುವಂತೆ ಸುದೀಪ್​ ತಮ್ಮ ಫ್ಯಾನ್ಸ್​ ಅಸೋಸಿಯೇಷನ್​ಗೆ ತಿಳಿಸಿದ್ದಾರೆ. ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ನಲ್ಲಿ ತೊಡಗಿರುವ ನಟ ಸುದೀಪ್‍ ಸದಾಶಿವ ಬ್ರಹ್ಮಾವರ್ ಅವರಿಗೆ ಜೀವನೋಪಾಯ ಕಲ್ಪಿಸುವ ಭರವಸೆ ನೀಡಿದ್ದಾರೆ.

ಸದಾಶಿವ ಬ್ರಹ್ಮಾವರ್ ಅವರು ಸುದೀಪ್ ಅಭಿನಯದ 'ಸ್ವಾತಿಮುತ್ತು', 'ಕಿಚ್ಚ' ಚಿತ್ರಗಳಲ್ಲಿ ಅಭಿನಯಿಸಿದ್ದರು.

ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಸದಾಶಿವ ಬ್ರಹ್ಮಾವರ್ ನಟಿಸಿದ್ದು ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಪುನೀತ್ ರಾಜ್​ಕುಮಾರ್, ಸುದೀಪ್, ದರ್ಶನ್ ಮುಂತಾದ ಖ್ಯಾತ ನಟರೊಂದಿಗೆ ಪಾತ್ರ ನಿರ್ವಹಿಸಿದ್ದಾರೆ.

Related Tags: Sadashiva Brahmavar, Sudeep Help, Kannada Actor, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ