ದುಷ್ಕರ್ಮಿಗಳಿಂದ ನಟ ಜಗ್ಗೇಶ್ ಮಗನಿಗೆ ಚೂರಿ ಇರಿತ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಕನ್ನಡ ಚಲನಚಿತ್ರ ನಟ ಜಗ್ಗೇಶ್ ಅವರ ಹಿರಿಯ ಮಗ ಗುರುರಾಜ್ ಅವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿರುವ ಕಳವಳಕಾರಿ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಸದ್ಯ ಗುರು ಅವರನ್ನು ಆರ್.ಟಿ.ನಗರದ ಪೂರ್ಣಿಮಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಗುರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮಗನನ್ನು ಶಾಲೆಗೆ ಬಿಟ್ಟು  ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. 

ಚಾಕು ಇರಿತಕ್ಕೆ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರಾಪಿಕ್ ಸಂಬಂಧ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


ಶುಕ್ರವಾರ ತೆರೆಕಂಡ ಶಿವರಾಜ್‍ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಗುರುರಾಜ್ ಕಾಣಿಸಿಕೊಂಡಿದ್ದಾರೆ.

Related Tags: Jaggesh Son Stabbed, R.T.Nagar Police, Gururaj Injured, Traffic Problem, Kannada Actor Jaggesh, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ