ಖಾಸಗಿ ಬಸ್-ಕ್ರೂಸರ್ ಮುಖಾಮುಖಿ ಢಿಕ್ಕಿ: ನಾಲ್ವರ ಸಾವು

ಕರಾವಳಿ ಕರ್ನಾಟಕ ವರದಿ
ಬಾಗಲಕೋಟೆ:
ಬಸ್ ಹಾಗೂ ಕ್ರೂಸರ್ ಮುಖಾಮುಖಿ ಢಿಕ್ಕಿಯಾಗಿ ನಾಲ್ಕು ಜನ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಧೋಳ ತಾಲೂಕಿನ ಲೋಕಪುರ ಕ್ರಾಸ್‌ನಲ್ಲಿ ಸೋಮವಾರ ಬೆಳಗಿನ ಜಾವ ವರದಿಯಾಗಿದೆ.

ಭಾರತಿ ಗಿಡ್ನಂದಿ(40), ಮಂಜವ್ವ(32), ಲಕ್ಷ್ಮಿಬಾಯಿ(28) ಮತ್ತು ಐದು ವರ್ಷದ ಬಾಲಕ ಸೇರಿ ನಾಲ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಮುಧೋಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಕೆರೂರು ಮೂಲದ ಗಿಡ್ನಂದಿ ಕಟುಂಬದ 15 ಸದಸ್ಯರು ಕ್ರೂಸರ್ ಮೂಲಕ ಆಥಣಿ ತಾಲೂಕಿನ ಕಳೆಗಾಂವ್ ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದರು.

ಬಸ್ ಬನಹಟ್ಟಿಯಿಂದ ಬೆಂಗಳೂರಿಗೆ ತೆರಳುವ ವೇಳೆ ಲೋಕಾಪುರ ಪಟ್ಟಣದ ಸಮೀಪ ಪೆಟ್ಲೂರ್ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.


ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags: Private Bus-Cruiser Accident, Four Dead, Mudhol Taluk, Bagalkot District, Lokapur Police, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ