ಒಕ್ಕಲಿಗರ ಸ್ವಾಮೀಜಿ ಎದುರು ಕಾಲಮೇಲೆ ಕಾಲು ಹಾಕಿ ಕುಳಿತ ಷಾ!

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಒಕ್ಕಲಿಗರ ಶ್ರದ್ಧಾಕೇಂದ್ರವಾದ  ಆದಿಚುಂಚನಗಿರಿ ಮಠಕ್ಕೆ ಬೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿರ್ಮಲಾನಂದನಾಥ ಸ್ವಾಮೀಜಿ ಅವರ ಎದುರು ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತು ಅವಮಾನ ಮಾಡಿದ್ದಾರೆ ಎಂದು   ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಿರ್ಮಲಾನಂದನಾಥ ಸ್ವಾಮೀಜಿ ಶೂದ್ರ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಷಾ ಈ ರೀತಿ ವರ್ತಿಸಿದ್ದಾರೆ. ಪೇಜಾವರ ಶ್ರೀಗಳು ಅಥವಾ ಬ್ರಾಹ್ಮಣ ಸ್ವಾಮೀಜಿ ಆಗಿದ್ದರೆ ಅವರು ಹೀಗೆ ಮಾಡುತ್ತಿದ್ದರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳು ಎದ್ದಿವೆ.

ಶಾ ಅವರು ಸ್ವಾಮೀಜಿಗಳ ಎದುರು ಕಾಲ ಮೇಲೆ ಕಾಲು ಹಾಕಿ ಕೂತ ಫೋಟೊ ಭಾರೀ ವೈರಲ್ ಆಗಿದೆ. ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ಅಮಿತ್‌ ಷಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ,. ಸಚಿವ ಡಿ.ಕೆ.ಶಿವಕುಮಾರ್ ಮುಂತಾದವರು ನಿರ್ಮಲಾನಂದ ಸ್ವಾಮೀಜಿಗಳ ಜೊತೆ ಕೂತ ಫೋಟೊಗಳನ್ನು ಸಹ ಹೋಲಿಕೆಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ.

ಟಿ. ಶಶಿಧರ್ -ಫೇಸ್‌ಬುಕ್‌ನಲ್ಲಿ
ಸಂಸ್ಕೃತಿ ಹೀನ , ಸಂಸ್ಕಾರ ಹೀನ , ಸೌಜನ್ಯ ಹೀನ ಅಸಭ್ಯ ವರ್ತನೆಯ ದುರಹಂಕಾರಿಯಿಂದ ಹಿಂದೂ ಧರ್ಮದ ಪಾಠ ಕಲಿಯಬೇಕೆ ?
ಗೌರವಾನ್ವಿತ ಗುರುಗಳ ಮುಂದೆ ಈ ರೀತಿ ಕುಳಿತುಕೊಳ್ಳುವದು ಹಿಂದೂ ಧರ್ಮದ ಸಂಸ್ಕೃತಿಯೆ ?
ವಕ್ಕಲಿಗ ಸಮುದಾಯದ ಭಾವನೆಗೆ ಧಕ್ಕೆ ತಂದಿರುವ ಈ ದುರಹಂಕಾರಿ ಮನುಷ್ಯನ ಭಂಗಿ ಬಗ್ಗೆ ತುಟಿ ಬಿಚ್ಚದ ಬಿಜೆಪಿಯ ಭಟ್ಟಂಗಿಗಳೂ ಸೇರಿದಂತೆ, ಮೋದಿಯ ಜೀತದಾಳುಗಳಾಗಿರುವ ಕೆಲವು ಮಾಧ್ಯಮಗಳ ಮತಿಗೇಡಿತನಕ್ಕೆ ಏನೆಂದು ಕರೆಯಬೇಕು ?

ಸಂಸ್ಕೃತಿ ,ಸಂಸ್ಕಾರ , ಸಭ್ಯತೆಯ ಬಗ್ಗೆ ಪುಂಖಾನುಪುಂಖವಾಗಿ ಬೊಂಬ್ಡಾ ಬಜಾಯಿಸುವ ಅಮಿತ್ ಶಾನ ಅಯೋಗ್ಯತನದ ಮತ್ತು ದುರಹಂಕಾರದ ವರ್ತನೆಗೆ ನನ್ನ ಧಿಕ್ಕಾರವಿರಲಿ.

ರಾಧಾಕೃಷ್ಣ-ಫೇಸ್‌ಬುಕ್‌ನಲ್ಲಿ
ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಡಿ ಕೆ ಶಿವಕುಮಾರ್ ಮೇಲಿನ ಐ ಟಿ ಧಾಳಿಯನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೆಂದು ತಮ್ಮವರ ಮೇಲೆ ಹರಿಹಾಯ್ದ ಅಮಿತ್ ಶಾ ಮುಂದುವರಿದು ಡಿ ಕೆ ಶಿವಕುಮಾರ್ ಜಾತಿಗೆ ಹೆದರಿದಿರಾ ಎಂದು ತಮ್ಮ ಪಕ್ಷದ ನಾಯಕರ ಮೇಲೆ ಕಿಡಿಕಾರಿದರು ಎಂದು ಟೀವಿಯಲ್ಲಿ ವರದಿಯಾಗಿತ್ತು, ಮರುದಿನವೆ ಅಮಿತ್ ಶಾ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದಾಗ ಮಠದ ಸ್ವಾಮಿಗಳ ಮುಂದೆ ಈ ರೀತಿ ಕುಳಿತು ಮಠದ ಭಕ್ತರಿಗೆ ಶಾಕ್ ನೀಡಿದ್ದಾರೆ, ಮಠದ ಗುರುಗಳು ಉನ್ನತ ವಿದ್ಯೆ ಪಡೆದು ಪೀಠ ಏರಿದವರು, ಮೆದು ಮಾತಿನವರು. ಹಿಂದೂ ಧರ್ಮದ ಉದ್ಧಾರಕರೆಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರು ಶೂದ್ರ ಸ್ವಾಮಿಗಳಿಗೆ ಎಷ್ಟರಮಟ್ಟಿನ ಗೌರವ ನೀಡುತ್ತಾರೆ ಎಂದು ಚಿತ್ರವೆ ಹೇಳುತ್ತದೆ, ಶೂದ್ರ ಅಥವಾ ದಲಿತ ರಾಜಕೀಯ ವ್ಯಕ್ತಿಗಳು ಬ್ರಾಹ್ಮಣ ಮಠಕ್ಕೆ ಭೇಟಿ ನೀಡಿದಾಗ ಈ ರೀತಿ ವರ್ತಿಸಿದ್ದನ್ನು ಎಲ್ಲಾದರು ನೋಡಿದ್ದೀರಾ ? ಅಥವಾ ಕೇಳಿದ್ದೀರಾ ? ಸಂಸ್ಕಾರ ಜಾತಿಯಲ್ಲಿರುವುದಿಲ್ಲ, ನಡತೆಯಲ್ಲಿರುತ್ತದೆ.

ಅಮ್ಜದ್ ಪಾಶಾ-ಫೇಸ್‌ಬುಕ್‌ನಲ್ಲಿ
ವೈಧಿಕ ಸ್ವಾಮಿಗಳಿಗೆ ಡೊಗ್ಗುಸಲಾಮು,ಶೂದ್ರ ಸ್ವಾಮಿಗಳ ಮುಂದೆ ಠೇಂಕಾರ..

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ