ಉದ್ಯಾನವನದಲ್ಲಿ ಆಟವಾಡುತ್ತಿದ್ದ 8ನೇ ತರಗತಿ ಬಾಲಕಿ ಮೃತ್ಯು

ಕರಾವಳಿ ಕರ್ನಾಟಕ ವರದಿ
ಬೆಂಗಳೂರು:
ಪಾರ್ಕ್‌ವೊಂದರಲ್ಲಿ ಬಿಬಿಎಂಪಿ ತಂದಿಟ್ಟ ಕಬ್ಬಿಣದ ರಾಡ್‌ ಗಳಿಗೆ 13 ವರ್ಷದ ಬಾಲಕಿ ಬಲಿಯಾಗಿದ್ದಾಳೆ. ಆಟವಾಡಲೆಂದು ಉದ್ಯಾನಕ್ಕೆ ತೆರಳಿದ್ದ ಬಾಲಕಿಯ ತಲೆಯ ಮೇಲೆ ರಾಡ್‌ ಬಿದ್ದು ದುರ್ಘ‌ಟನೆ ಸಂಭವಿಸಿದೆ.  ಕೆ.ಆರ್‌.ಪುರದ ಆಕಾಶ್‌ ನಗರದ ಎಂವಿಜೆ ಬಡಾವಣೆಯ ಪಾರ್ಕ್‌ನಲ್ಲಿ ಈ ದುರಂತ ಸಂಭವಿಸಿದೆ.

ಕೆ.ಆರ್‌.ಪುರ ಸಮೀಪದ ಎಂಟಿಬಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಿಯಾಂಕ(13) ಮೃತ ಬಾಲಕಿ. ಪ್ರಿಯಾಂಕ ಕೃಷ್ಣಪ್ಪ ಲೇಔಟ್‌ ನಿವಾಸಿಗಳಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಸುಬ್ರಮಣ್ಯಂ ಹಾಗೂ ವಿಜಯ್‌ ಕುಮಾರಿ ದಂಪತಿಯ ಪುತ್ರಿ.

ಎಂವಿಜೆ ಪಾರ್ಕ್‌ನಲ್ಲಿ ನವೀಕರಣ ಕಾಮಗಾರಿ ಕೈಗೊಂಡಿರುವ ಬಿಬಿಎಂಪಿ  ಪಾರ್ಕ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿತ್ತು.

ಶನಿವಾರ ಸಂಜೆ 4ಗಂಟೆ ಸಮಯದಲ್ಲಿ ಪ್ರಿಯಾಂಕ ಉದ್ಯಾನವನಕ್ಕೆ ಆಟವಾಡಲು ತೆರಳಿದ್ದಳು. ಅಲ್ಲಿ ಉಯ್ಯಾಲೆ ನಿರ್ಮಿಸಲೆಂದು ತಂದಿಟ್ಟಿದ್ದ ಕಬ್ಬಿಣದ ರಾಡ್‌ಗಳ ಬಳಿ ಪ್ರಿಯಾಂಕ್‌ ಆಟವಾಡುತ್ತಿದ್ದಳು ಎನ್ನಲಾಗಿದೆ. ಆಗ ಒಂದು ರಾಡ್‌ ತಲೆ ಮೇಲೆ ಜೋರಾಗಿ ಬಿದ್ದಿದೆ.

ಗಂಭೀರ ಗಾಯಗೊಂಡ ಪ್ರಿಯಾಂಕಾಗೆ ತೀವ್ರ ರಕ್ತ ಸ್ರಾವವಾಗಿದ್ದು ರಕ್ತದ ಮಡುವಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಬೈಯ್ಯಪ್ಪನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದಿದ್ದಾರೆ. 

ಅಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಪ್ರಿಯಾಂಕ ಕೊನೆಯುಸಿರೆಳೆದಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Related Tags: Death in Park, BBMP, Priyanka
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ