ಮರವಂತೆ ಸಮುದ್ರದ ಅಲೆಯಿಂದ ವಿದ್ಯುತ್ ಉತ್ಪಾದನೆ

ಕರಾವಳಿಕರ್ನಾಟಕ ವರದಿ
ಉಡುಪಿ:
ಜಿಲ್ಲೆಯ ಮರವಂತೆಯಲ್ಲಿ ವಿಜ್ಞಾನಿ ವಿಜಯ ಕುಮಾರ್ ಹೆಗ್ಡೆ ಯವರ ಪೆರಂಪಳ್ಳಿಯ ಸುಸಿ ಗ್ಲೋಬಲ್ ಸಂಶೋಧನಾ ಸಂಸ್ಥೆ ವತಿಯಿಂದ 10 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಘಟಕ ನಿರ್ಮಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್)  ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.

ಮರವಂತೆಯಲ್ಲಿ 60 ಕೋ.ರೂ. ವೆಚ್ಚದಲ್ಲಿ ಪ್ರಾಥಮಿಕ ಹಂತದಲ್ಲಿ 10 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡಿ ಮೆಸ್ಕಾಂ ಗ್ರಿಡ್ಗಳಿಗೆ ವಿದ್ಯುತ್  ಸರಬರಾಜು ಮಾಡಲು ಸರಕಾರದೊಂದಿಗೆ ಒಪ್ಪಂದಮಾಡಿಕೊಳ್ಳಲಾಗುವುದು. ಪೈಲಟ್ ಯೋಜನೆಯಾಗಿ ಇದನ್ನು ಸರಕಾರ ಸ್ವೀಕರಿಸಲಿದೆ.

ಸರಕಾರದ ಸೂಕ್ತ ಸಹಕಾರ ದೊರೆತಲ್ಲಿ ಮುಂದಕ್ಕೆ 500 ಮೆ.ವ್ಯಾ. ವಿದ್ಯುತ್ ಉತ್ಪಾದನೆಯ ಗುರಿಯನ್ನೂ ಹೊಂದಲಾಗಿದೆ ಎಂದು  ಬೆಂಗಳೂರಿನ ಎನರ್ಜಿ ಆ್ಯಂಡ್ ಡೆವಲಪ್ಮೆಂಟ್ ಸೆಂಟರ್ ಎಂಜಿನಿಯರ್ ಧೀರೇಂದ್ರ ಆಚಾರ್ಯ ಹಾಗೂ ಸುಸಿ ಗ್ಲೋಬಲ್ ರಿಸರ್ಚ್ ಅಧ್ಯಕ್ಷ ವಿಜಯ್ ಕುಮಾರ್ ಹೆಗ್ಡೆ  ಅವರು ಮಾಹಿತಿ ನೀಡಿದರು.

ಮರವಂತೆಯಲ್ಲಿ ಕಡಲಿನ ಅಲೆಗಳ ಶಕ್ತಿ ಉತ್ತಮವಾಗಿದೆ. ಹಾಗಾಗಿ ಆ ಪ್ರದೇಶವನ್ನು ಆಯ್ಕೆ ಮಾಡಲಾಗಿದೆ. ಅಲೆಯ ಉಬ್ಬರವಿಳಿತದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಸಂಸ್ಥೆ ಕೆಮ್ಮಣ್ಣುವಿನಲ್ಲಿ ಪ್ರಾಯೋಗಿಕವಾಗಿ ನಡೆಸಿ ಯಶಸ್ವಿಯಾಗಿದೆ ಎಂದರು.

ಪೂರ್ಣಪ್ರಜ್ಞ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಎ.ಪಿ. ಭಟ್, ಕೆನರಾ ಎಂಜಿನಿಯರಿಂಗ್ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ| ಟಿ. ನಾರಾಯಣ ಶಾನುಭಾಗ್  ಉಪಸ್ಥಿತರಿದ್ದರು.

ಅಲೆಗಳಿಂದ ಇಂಧನ ಉತ್ಪಾದನೆ ಅತ್ಯಗತ್ಯ: ಪೇಜಾವರ  ಕಿರಿಯ ಶ್ರೀ
ಮಿತವ್ಯಯ ಇಂಧನ, ಪರಿಸರಸ್ನೇಹಿ ಯೋಜನೆ ಈಗಿನ ವಾತಾವರಣಕ್ಕೆ ಅತ್ಯಗತ್ಯವಾಗಿದೆ. ಪ್ರಪಂಚದಲ್ಲಿ ಅತೀ  ಹೆಚ್ಚು ಭಾಗ ಸಮುದ್ರವಿರುವುದರಿಂದ ಅಲೆಗಳ ಶಕ್ತಿಯಿಂದ ಇಂಧನ ಉತ್ಪಾದಿಸುವ ಯೋಜನೆಗಳಿಗೆ ಉತ್ತಮ ಭವಿಷ್ಯವಿದೆ. ಸರಕಾರ ಸಹಕಾರ ಕೊಡಬೇಕು ಎಂದು ಟೈಡಲ್ ಪವರ್ ಯೋಜನೆ ವೀಕ್ಷಿಸಿದ ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾರೈಸಿದರು.

6 ಕೋ.ರೂಗೆ 1 ಮೆ.ವ್ಯಾ. ವಿದ್ಯುತ್: ವಿಜಯ ಕುಮಾರ್ ಹೆಗ್ಡೆ
ಅಲೆಗಳ ಶಕ್ತಿಯಿಂದ ಉತ್ಪಾದಿಸುವ 1 ಮೆ.ವ್ಯಾ. ವಿದ್ಯುತ್ ಘಟಕಕ್ಕೆ 6 ಕೋ.ರೂ. ವೆಚ್ಚವಾಗುತ್ತದೆ. ಕಲ್ಲಿದ್ದಲು ಮತ್ತಿತರ ಮೂಲಗಳಿಂದ ಉತ್ಪಾದಿಸುವ 1 ಮೆ.ವ್ಯಾ. ವಿದ್ಯುತ್ಗೆ 25ರಿಂದ 30 ಕೋ.ರೂ. ವ್ಯಯವಾಗುತ್ತದೆ. ಸರಕಾರ ಕೈಜೋಡಿಸಿದರೆ ವಾರ್ಷಿಕ ಕೋಟ್ಯಾನುಗಟ್ಟಲೆ ಹಣ ಉಳಿಸಬಹುದು. ತಾನು 35ವರ್ಷಗಳಿಂದ ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ  ನಡೆಸುತ್ತಿದ್ದು, ಯಶಸ್ಸಿನ ವಿಶ್ವಾಸ ಇದೆ ಎಂದು ಹೆಗ್ಡೆ ಹೇಳಿದ್ದಾರೆ.

ಕರಾವಳಿಯ ಎಲ್ಲೆಡೆ ವಿದ್ಯುತ್ :   ಧೀರೇಂದ್ರ ಆಚಾರ್ಯ, ಎಂಜಿನಿಯರ್
ಕರಾವಳಿಯಲ್ಲಿ ಸೋಲಾರ್, ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದನೆಗೆ ಪೂರಕ ವಾತಾವರಣವಿಲ್ಲ. ಆದರೆ ಸಮುದ್ರದ ಅಲೆಯಿಂದ ವಿದ್ಯುತ್ ಉತ್ಪಾದನೆಗೆ ಒತ್ತು ಕೊಟ್ಟರೆ ಕೊಡಲು ಸಾಧ್ಯವಾಗುತ್ತದೆ. ಇಲ್ಲೇ ಉತ್ಪಾದನೆ ಮಾಡಿ ಗ್ರಿಡ್ಗಳಿಗೆ ನೇರವಾಗಿ ಕೊಡುವುದರಿಂದ ಸರಬರಾಜು ವೆಚ್ಚ ಉಳಿಯುತ್ತದೆ.


ಗಂಟೆಗೆ 120ಕಿ.ಮೀ ಧಾವಿಸುವ ಡೀಸೆಲ್ ಬೈಕ್

ಗಂಟೆಗೆ 120ಕಿ.ಮೀ ಧಾವಿಸುವ ಡೀಸೆಲ್ ಬೈಕ್ ಸಂಶೋಧನೆ ನಿರತನಾಗಿರುವುದಾಗಿ ವಿಜಯ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಇದನ್ನೂ ಓದಿ:

ಸಮುದ್ರದಲೆಗಳಿಂದ ವಿದ್ಯುತ್ ಉತ್ಪಾದನೆಗೆ ಚಾಲನೆ: http://bit.ly/2uRAZKH

Related Tags: Maravathe Beach, Power Generation Pla, Vijay Kumar Shetty
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ