ಸ್ವರಾಜ್ ಮೈದಾನದಲ್ಲಿ ಜನಸ್ತೋಮ: ಮೋಹನ್ ಅಳ್ವರಿಗೆ ಭಾರೀ ಬೆಂಬಲ

ಕರಾವಳಿ ಕರ್ನಾಟಕ ವರದಿ
ಮೂಡಬಿದಿರೆ:
ಕಾವ್ಯಾ ಸಾವಿನ ಹಿನ್ನೆಲೆಯಲ್ಲಿ ಡಾ. ಮೋಹನ್ ಆಳ್ವ ಮತ್ತು ಅವರ ಶಿಕ್ಷಣ ಸಂಸ್ಥೆಯ ವಿರುದ್ಧ ನಡೆಯುತ್ತಿದೆ ಎನ್ನಲಾದ ಅಪಪ್ರಚಾರದ ಖಂಡಿಸಿ ಮೋಹನ್ ಆಳ್ವರನ್ನು ಬೆಂಬಲಿಸಲು ಮೂಡಬಿದಿರೆಯಲ್ಲಿ ನಡೆದ ಆಳ್ವಾ ಬೆಂಬಲಿಗರ ಸಭೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಸಭೆಯಲ್ಲಿ ಕರಾವಳಿಯ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ 8 ಸಾವಿರಕ್ಕೂ ಮಿಕ್ಕಿ ಜನರು ಹಾಜರಿದ್ದರು. ಸ್ವರಾಜ್ ಮೈದಾನದಲ್ಲಿ ನಡೆದ ಸಭೆಯಲ್ಲಿ ಡಾ. ಮೋಹನ್ ಆಳ್ವಾ ಅವರ ವಿರುದ್ಧ ನಡೆಯುತ್ತಿರುವ ನಿಂದನೆ ಮತ್ತು ಅಪಪ್ರಚಾರವನ್ನು ಒಕ್ಕೊರಲಿನಿಂದ ಖಂಡಿಸಲಾಯ್ತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ವಿನಯ ಹೆಗ್ಡೆ “ಕಾವ್ಯಾ ಸಾವಿನ ತನಿಖೆ ತಾರ್ಕಿಕ ಅಂತ್ಯ ಕಾಣಬೇಕಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಇದು ನಡೆಯಬೇಕಾಗಿದೆ. ಆದರೆ ಕಾವ್ಯಾಳ ಸಾವು ಡಾ. ಮೋಹನ್ ಆಳ್ವ ಮತ್ತು ಅವರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ  ತೇಜೋವಧೆಗಾಗಿ ಬಳಕೆಯಾಗುತ್ತಿದೆ. ಇದರ ಹಿಂದೆ ರಾಜಕೀಯ ಪಿತೂರಿಯೂ ಇದೆ.  ಆಳ್ವಾಸ್ ಶಿಕ್ಷಣ ಸಂಸ್ಥೆಗಳ  ಹಾಸ್ಟೆಲ್‌ಗಳ ಬಗ್ಗೆ ಮಾತನಾಡುವವರು ಮೊದಲು ಸರ್ಕಾರಿ ಹಾಸ್ಟೆಲ್‌ಗಳ ಸ್ಥಿತಿಗತಿಗಳ ಬಗ್ಗೆ ಮಾತನಾಡಬೇಕಾಗಿದೆ” ಎಂದು ಹೇಳಿದರು.

“ವ್ಯವಸ್ಥೆಯಲ್ಲಿ ತಪ್ಪುಗಳಾಗುವುದು ಸಹಜ. ಆದರೆ ಅಂತಹ ಸಂದರ್ಭದಲ್ಲಿ ಅಂತಹ ತಪ್ಪುಗಳನ್ನು ಸರಿಪಡಿಸಲು ನೆರವಿನ ಹಸ್ತ ನೀಡಬೇಕು. ಬದಲಾಗಿ ಅವರನ್ನು ಕೆಳಕ್ಕೆ ತಳ್ಳುವ ಕೆಲಸ ಮಾಡಬಾರದು. ಸಮಾಜ ಆಳ್ವ ಅವರ ತೇಜೋವಧೆ ಮಾಡುವವರನ್ನು ಬೆಂಬಲಿಸದೆ ಸತ್ಯವೇ ಪರಮೋಚ್ಛ ಎಂಬ ಸ್ಥಿತಿ ನಿರ್ಮಾಣವಾಗುವ ಸಮಾಜವನ್ನು ರೂಪಿಸುವಲ್ಲಿ ಸಮಾಜ ಕೈ ಜೋಡಿಸಬೇಕು” ಎಂದು ವಿನಯ್ ಹೆಗ್ಡೆ ಮನವಿ ಮಾಡಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆ ಸರ್ಕಾರಕ್ಕೆ ಮಾದರಿ: ಡಾ. ಬಿ. ಎ. ವಿವೇಕ್ ರೈ
ಸಭೆಯಲ್ಲಿ ಉಪಸ್ಥಿತರಿದ್ದ ಖ್ಯಾತ ಸಾಹಿತಿ ಮತ್ತು ಹಂಪಿ ವಿಶ್ವವಿದ್ಯಾನಿಲಯದ ಮಾಜಿ ಉಪ-ಕುಲಪತಿ ಡಾ. ಬಿ. ಎ. ವಿವೇಕ್ ರೈ ಮಾತನಾಡಿ “ಹೊಸ ಸಾಂಸ್ಕೃತಿಕ ನೀತಿಯನ್ನು ಅನುಷ್ಠಾನಕ್ಕೆ ತರಲಿರುವ ಕರ್ನಾಟಕ ಸಕಾರಕ್ಕೆ ಡಾ. ಮೋಹನ್ ಆಳ್ವ ಅವರ ಶಿಕ್ಷಣ ಸಂಸ್ಥೆ ಮಾದರಿಯಾಗಬೇಕು. ಈ ಸಂಸ್ಥೆ ಎಲ್ಲ ಸಮುದಾಯಗಳ ಜನರಿಗೆ ಉದ್ಯೋಗಾವಕಾಶಗಳ ಹೆಬ್ಬಾಗಿಲನ್ನು ತೆರೆದಿದೆ. ಕಲಿಕೆಯ ಹೊಸ ವಾತಾವರಣ ನಿರ್ಮಾಣ ಮಾಡಿದೆ. ಈ ಎಲ್ಲ ವಿಷಯಗಳ ಬಗ್ಗೆ ಸಂಸ್ಥೆಯಲ್ಲಿ ಪರಿಶೀಲನೆ ನಡೆಸಿದರೆ ಈ ಶಿಕ್ಷಣ ಸಂಸ್ಥೆಯ ಮಹತ್ವ ಗೊತ್ತಾಗಲಿದೆ” ಎಂದು ಹೇಳಿದರು.

“ಡಾ. ಆಳ್ವ ಮತ್ತು ಅವರ ಶಿಕ್ಷಣ ಸಂಸ್ಥೆಗಳ ವಿರುದ್ಧ ತೇಜೋವಧೆ ಮಾಡುವ ಉದ್ದೇಶದಿಂದ ವದಂತಿಗಳನ್ನು ಸೃಷ್ಟಿಸಿ ಹಬ್ಬಿಸುವುದು ನಿಜಕ್ಕೂ ತುಂಬಾ ಆತಂಕದ ಸಂಗತಿಯಾಗಿದೆ. ಜನರ ನಡುವೆ ಈ ಸಂಸ್ಥೆ ಸೃಷ್ಟಿಸಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಾಗಿದೆ” ಎಂದು ಡಾ. ರೈ ಹೇಳಿದರು.


ಸಾವಿನ ಚಿತೆಯ ಬೆಂಕಿಯಲ್ಲಿ ಅಡುಗೆ ಮಾಡುತ್ತಿರುವ ಅವಕಾಶವಾದಿಗಳು: ವೈದೇಹಿ
ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಲೇಖಕಿ ವೈದೇಹಿ “ಡಾ. ಮೋಹನ್ ಆಳ್ವ ಅವರ ಸ್ವಭಾವ ಮತ್ತು ನಿಲುವುಗಳೆ ಅವರ ಬೆಂಬಲಕ್ಕೆ ನಿಲ್ಲುವಂತವು. ಆಳ್ವ ಅವರ ಯಶಸ್ಸನ್ನು ಸಹಿಸಲಾಗದವರಿಗೆ ಕಾವ್ಯಾಳ ಸಾವು ಒಂದು ನೆಪವಾಗಿ ಸಿಕ್ಕಿದೆ. ಅವಕಾಶವಾದಿಗಳು ಕಾವ್ಯಾಳ ಸಾವಿನ ಚಿತೆಯಲ್ಲಿ ಅಡುಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮ ಟಿಆರ್ಪಿ ಮತ್ತು ಹಣಕ್ಕಾಗಿ ವಿಷಬೀಜಗಳನ್ನು ಯಾಕೆ ಬಿತ್ತುತ್ತಿದೆ” ಎಂದು ಆಕ್ರೋಶದಿಂದ ನುಡಿದರು.

ಸಭೆಯ ಸಂಚಾಲಕ ಮತ್ತು ಮಾಜಿ ಶಾಸಕ ಅಮರನಾಥ ಶೆಟ್ಟಿ ತಮ್ಮ ಮಾತುಗಳಲ್ಲಿ ಡಾ. ಮೋಹನ್ ಆಳ್ವಾ ಅವರನ್ನು ಕೊಂಡಾಡಿದರು. ಡಾ. ಆಳ್ವ ಅವರು ಮೂಡಬಿದಿರೆಯ ಹೆಸರನ್ನು ದೇಶದೆಲ್ಲೆಡೆ ಪ್ರಸಿದ್ಧರಾಗುವಂತೆ ಮಾಡಿದ್ದಾರೆ. ಅವರೊಬ್ಬ ಮಹಾನ್ ವ್ಯಕ್ತಿ. ಕ್ರೀಡಾ ಕೋಟಾದಲ್ಲಿ ಆಳ್ವಾಸ್ನಲ್ಲಿ ಸಾವಿರಾರು ವಿದ್ಯಾರ್ಥ್ಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಇಂತಹ ಪ್ರಯೋಗ ಭಾರತದ ಬೇರೆ ಎಲ್ಲಾದರೂ ನಡೆದಿದ್ದರೆ ತೋರಿಸಲಿ ಎಂದು ಅಮರನಾಥ ಶೆಟ್ಟಿ ಸವಾಲು ಹಾಕಿದರು.

“ಡಾ. ಮೋಹನ್ ಆಳ್ವ ಸರಳ ಮತ್ತು ಸಜ್ಜನರು. ಅವರ ಬಗ್ಗೆ ಏನನ್ನು ತಿಳಿಯದೆ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಕಾವ್ಯಾ ಸಾವಿಗೆ ಸಂಬಂಧಿಸಿ ತಾನು ಯಾವುದೇ ತನಿಖೆಗೆ ಸಿದ್ಧ ಎಂದು ಡಾ. ಮೋಹನ್ ಆಳ್ವ ಈಗಾಗಲೇ ಹೇಳಿದ್ದಾರೆ. ಆದರೂ ಮಾಧ್ಯಮಗಳು ಈ ವಿಷಯದಲ್ಲಿ ತಾವೇ ನ್ಯಾಯತೀರ್ಪು ನೀಡುವಂತೆ ವರ್ತಿಸುತ್ತಿವೆ. ಮಾಧ್ಯಮಗಳು ತನಿಖೆಯನ್ನು ಪೊಲೀಸ್ ಮತ್ತು ನ್ಯಾಯಾಲಯಕ್ಕೆ ಬಿಟ್ಟುಬಿಡಬೇಕು. ಕಾವ್ಯಾ ಸಾವಿಗೆ ನ್ಯಾಯ ಆಗ್ರಹಿಸಿ ಪ್ರತಿಭಟಿಸುವವರಿಗೆ ಇದೆಲ್ಲ ಅರ್ಥಮಾಡಿಕೊಳ್ಳುವಷ್ಟು ಬುದ್ದಿಮತ್ತೆ ಇಲ್ಲ” ಎಂದು ಅಮರನಾಥ ಶೆಟ್ಟಿ ಹೇಳಿದರು.

ಸಭೆಯಲ್ಲಿ ಭಾಗವಹಿಸಿದ ಮೂಲ್ಕಿ ಪ್ಯಾರಿಶ್ನ ಧರ್ಮಗುರು ಫಾದರ್ ಫ್ರಾನ್ಸಿಸ್ ಮಾತನಾಡಿ “ಡಾ. ಮೋಹನ್ ಆಳ್ವ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಮಾಧ್ಯಮಗಳು ವದಂತಿಗೆ ಕಿವಿಗೊಡದೆ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಾಗಿದೆ. ಮೋಹನ್ ಆಳ್ವ ಅನೇಕರ ಕನಸುಗಳನ್ನು ಸಾಕಾರಗೊಳಿಸಿದಂತಹ ವ್ಯಕ್ತಿ” ಎಂದು ಆಳ್ವ ಅವರನ್ನು ಪ್ರಶಂಸಿಸಿದರು.

ಸಭೆಯಲ್ಲಿ ಯನಪೋಯ ವಿಶ್ವವಿದ್ಯಾಲಯದ ಕುಲಪತಿ ವೈ. ಅಬುಲ್ಲಾ  ಕುಂಞ, ಬ್ರಿಗೇಡಿಯರ್ ಐ.ಎನ್.ರೈ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಮತ್ತು ಕಾಂಗ್ರೆಸ್ ಮುಖಂಡ ಮಂಜುನಾಥ ಭಂಡಾರಿ, ಮೂಡಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ, ಶಾರದಾ ವಿದ್ಯಾಲಯದ ಸಂಚಾಲಕ ಎಂ.ಬಿ.ಪುರಾಣಿಕ್, ಆಥ್ಲೀಟ್ ಸಹನಾ ಪೂಜಾರಿ ಮುಂತಾದವರು ಭಾಗವಹಿಸಿದ್ದರು.


ಸಭೆಯಲ್ಲಿ ಸ್ತ್ರೀಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 8 ಸಾವಿರ ಜನರು ಸ್ವರಾಜ್ ಮೈದಾನದಲ್ಲಿ ಸೇರಿದ್ದರು. ಕಾವ್ಯಾ ಸಾವಿನ ಹಿನ್ನೆಲೆಯಲ್ಲಿ ಮೊದಲಿನಿಂದಲೂ ಡಾ. ಆಳ್ವರ ಬೆಂಬಲಕ್ಕೆ ನಿಂತಿದ್ದ ಶಾಸಕ ಅಭಯಚಂದ್ರ ಜೈನ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ:
►►ಆಳ್ವರಂಥವರು ದೇಶದಲ್ಲೇ ಅಪರೂಪ: ಆ್ಯತ್ಲೆಟ್ ಸಹನಾ ಕುಮಾರಿ:
http://bit.ly/2uPx6pJ
►►ಆಳ್ವಾಸ್‌ಗೆ ಶುರವಾಯ್ತು ಮೊದಲ ಕಂಟಕ: ಅಕ್ರಮಗಳ ವಿರುದ್ಧ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ: http://bit.ly/2uLFrut
►►ಜಸ್ಟೀಸ್ ಫಾರ್ ಕಾವ್ಯಾ: ಮಂಗಳೂರಿನಲ್ಲಿ ನಡೆದಿದೆ ಬೃಹತ್ ಧರಣಿ. ಕಾವ್ಯಾ ತಾಯಿಯೂ ಭಾಗಿ: http://bit.ly/2wGOv5t
►►ಕಳೆದ ಹತ್ತು ವರ್ಷಗಳಲ್ಲಿ ಆಳ್ವಾಸ್ ಕ್ಯಾಂಪಸ್‌ನಲ್ಲಿ ಜೀವ ಕಳೆದುಕೊಂಡವರೆಷ್ಟು?: http://bit.ly/2uCHReT
►►ದೈಹಿಕ ಶಿಕ್ಷಕನನ್ನು ತಕ್ಷಣ ಬಂಧಿಸಿ. ಕೊಲೆಯ ರಹಸ್ಯ ಬಯಲಾಗುತ್ತದೆ: ಕಾವ್ಯಾ ತಾಯಿ ಬೇಬಿ: http://bit.ly/2vHZtdw
►►ಆಗಸ್ಟ್ 10ರಂದು “ಆಳ್ವರೊಂದಿಗೆ ನಾವು”: ಸಂಸ್ಕಾರ ಭಾರತಿಯಿಂದ ಆಳ್ವರಿಗೆ ಫುಲ್ ಸಪೋರ್ಟ್: http://bit.ly/2wmNm3p
►►ಕಾವ್ಯಾ ಸಾವಿನ ಹಿನ್ನೆಲೆ: ಆಗಸ್ಟ್ 12ರಂದು ಡಾ. ಮೋಹನ್ ಆಳ್ವ ಬೆಂಬಲಿಸಿ ಬೃಹತ್ ಸಭೆ: http://bit.ly/2v3M92n
►►ಆಳ್ವಾಸ್ ಮೂಡಬಿದಿರೆ. ಹಾಸ್ಟೆಲೋ ಅಥವಾ ವಿದ್ಯಾರ್ಥಿನಿಯರ ನೇಣು ಬಿಗಿವ ತಾಣವೊ?: http://bit.ly/2vwtw8X
►►ಕಾವ್ಯಾ ಸಾವು: ಮೋಹನ್ ಆಳ್ವರಿಗೆ ಬಹಿರಂಗ ಬೆಂಬಲ ಸಾರಿದ ಬಿಜೆಪಿ: http://bit.ly/2f8OinS
►►ಕಾವ್ಯಾ ಪ್ರಕರಣದ ಗೊಂದಲಗಳಿಗೆ ತೆರೆ ಎಳೆಯಿರಿ: ಎಬಿವಿಪಿ ಕುಂದಾಪುರ: http://bit.ly/2hneo7i
►►ನುಡಿಸಿರಿ ಸಂಘಟಕರಿಗೆ ಕಾವ್ಯಾಳ ಕುರಿತು ನುಡಿಗಳೇ ಇಲ್ಲದಾಯಿತೆ?: http://bit.ly/2ugxOMo
►►ನನ್ನ ಮಗಳ ಸಾವಿಗೆ ದೈಹಿಕ ಶಿಕ್ಷಕ ಕಾರಣ: ಕಾವ್ಯಾ ತಾಯಿ ಬೇಬಿ ಆರೋಪ: http://bit.ly/2f3KqVo
►►ಜಸ್ಟೀಸ್ ಫಾರ್ ಕಾವ್ಯಾ: ಕುಂದಾಪುರದಲ್ಲಿ ಬೀದಿಗಳಿದ ಸಹಸ್ರಾರು ವಿದ್ಯಾರ್ಥಿಗಳು: http://bit.ly/2tZQlkU
►►ಕಾವ್ಯಾ ಸಾವು: ಮೋಹನ್ ಆಳ್ವಾ ಕಥೆ ಹೇಳುತ್ತಿದ್ದಾರೆಯೆ?: http://bit.ly/2wesUki
►►ಕಾವ್ಯಾಳದ್ದು ಆತ್ಮಹತ್ಯೆಯಂತೆ. ಮರಣೋತ್ತರ ವರದಿ ಬಂದಿದೆಯಂತೆ: ಪೊಲೀಸ್ ಮೂಲಗಳು: http://bit.ly/2ub16Mq
►►ಕಾವ್ಯಾ ಸಾವು: ಆಳ್ವಾಸ್ ಹೆಸರಿಗೆ 'ಮಸಿ ಬಳಿಯುವುದನ್ನು' ನಿಲ್ಲಿಸಲು ಎಚ್‌ಡಿಕೆ ಕರೆ: http://bit.ly/2u9pwWR
►►‘ಆಳ್ವಾಸ್’ ಕಾವ್ಯ ನಿಗೂಢ ಸಾವು: ಸಿಬಿಐ ತನಿಖೆಗೆ ಆಗ್ರಹ: http://bit.ly/2v8ZF5x
►►ಪೊಲೀಸರೆ ವಿದ್ಯಾರ್ಥಿನಿ ಕಾವ್ಯ ಪ್ರಕರಣ ಮುಚ್ಚಿಹಾಕದಿರಿ: ಸಿ.ಎಫ್.ಐ http://bit.ly/2vgush
►►ಕಾವ್ಯಾಳದು ಆತ್ಮಹತ್ಯೆ, ಕೊಲೆಯಲ್ಲ: ಮೂಡುಬಿದಿರೆ ಪೊಲೀಸ್: http://bit.ly/2hb2Xj0
►►ಕಾವ್ಯಾ ಸಾವಿಗೆ ಕೊಲೆ ಎನ್ನೋದಕ್ಕೆ ಅರ್ಥವಿದೆಯೆ? http://bit.ly/2uKVbzw
►►ಆಳ್ವಾಸ್ ವಿದ್ಯಾರ್ಥಿನಿ, ಬ್ಯಾಡ್ಮಿಂಟನ್ ಚಾಂಪಿಯನ್ ನಿಗೂಢ ಸಾವು: ಕೊಲೆ ಆರೋಪ http://bit.ly/2uDb0tB
►►ಆರನೇ ಮಹಡಿಯಿಂದ ಜಿಗಿದು ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2ev592K
►►ಆಳ್ವಾಸ್ ವಿದ್ಯಾರ್ಥಿನಿ ಕಾಲೇಜಲ್ಲೇ ಸಾವು! http://bit.ly/1KlK1AS
►►ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2tPy30R
►►ವಿದ್ಯಾರ್ಥಿನಿ ಆತ್ಮಹತ್ಯೆ: 4ನೇ ದಿನಕ್ಕೆ ಪ್ರತಿಭಟನೆ http://bit.ly/2mdZ4XZ
►►ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2nQnUB5
►►ಪರೀಕ್ಷೆ ಫಲಿತಾಂಶದಿಂದ ನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2qGXXDg
►►ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ: ಡೆತ್ ನೋಟಲ್ಲಿ ಏನಿದೆ? http://bit.ly/2nqiUEl

 

Related Tags: Kavya''s Death, Mohan Alva, Moodabidire Meeting, Alwa''s Supporters, Vaidehi, Vivek Rai, Vinay Hegde
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ