ಶ್ರೀಲಂಕಾ ವಿರುದ್ದ 3ನೇ ಟೆಸ್ಟ್: ದಿನದಂತ್ಯಕ್ಕೆ ಭಾರತ 329/6

ಕರಾವಳಿ ಕರ್ನಾಟಕ ವರದಿ
ಕ್ಯಾಂಡಿ:
ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಶಿಖರ್ ಧವನ್ ಅವರ ಆಕರ್ಷಕ ಶತಕ(119) ಹಾಗೂ ಕೆಎಲ್ ರಾಹುಲ್ ಅವರ ಅರ್ಧ ಶತಕ(85)ದ ನೆರವಿನೊಂದಿಗೆ ಭಾರತ ದಿನದ ಅಂತ್ಯಕ್ಕೆ ನಿಗದಿತ 90 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 329ರನ್ ಗಳಿಸಿದೆ.


ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಭರ್ಜರಿ ಆಟವಾಡಿದ ಆರಂಭಿಕರಾದ ಧವನ್‌ 119 ರನ್‌ಗಳಿಸಿ ಔಟಾದರು. ಇದು ಅವರ ಟೆಸ್ಟ್‌ನ 6 ನೇ ಶತಕವಾಗಿದೆ. ಧವನ್‌ಗೆ ಸಾಥ್‌ ನೀಡಿದ ರಾಹುಲ್‌ 85 ರನ್‌ಗಳಿಸಿ ಔಟಾದರು.

ಶಿಖರ್ ಧವನ್‌ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 39.3 ಓವರ್‌ಗಳಲ್ಲಿ 188 ರನ್ ಜೋಡಿಸಿದರು. ಈ ಮೂಲಕ ಶ್ರೀಲಂಕಾ ವಿರುದ್ಧ ವಿದೇಶಿ ನೆಲದಲ್ಲಿ ಮೊದಲ ವಿಕೆಟ್‌ಗೆ ಅತ್ಯಧಿಕ ರನ್ ಗಳಿಸಿದ ಸಾಧನೆ ಮಾಡಿದರು. 1993ರಲ್ಲಿ ಮನೋಜ್ ಪ್ರಭಾಕರ್ ಮತ್ತು ನವಜೋತ್‌ ಸಿಂಗ್ ಸಿದ್ಧು ಗಳಿಸಿದ 173 ರನ್‌ಗಳು ಈ ವರೆಗಿನ ದಾಖಲೆಯಾಗಿತ್ತು.

ಬಳಿಕ ಪೂಜಾರಾ 8 ರನ್‌,ರೆಹಾನೆ 17 ರನ್‌ಗೆ ಔಟಾಗಿ ನಿರಾಶರಾದರು. ಇವರಿಬ್ಬರು ಔಟಾದ ನಂತರ ತಂಡ ಸ್ವಲ್ಪ ಹಿನ್ನಡೆ ಅನುಭವಿಸಿತಾದರೂ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಇನಿಂಗ್ಸ್‌ಗೆ ಮರುಜೀವ ತುಂಬಿದರು.

Related Tags: India vs Sri Lanka, 3rd Test, Day 1, Shikhar Dhawan''s Century, Sports News, Cricket News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ