ಅಮ್ಮ-ಅಪ್ಪನಿಗೆ ಹಲ್ಲೆಗೈದ: ಸತ್ತೇ ಹೋದರೇನೊ ಎಂದು ಮಗ ಆತ್ಮಹತ್ಯೆಗೈದ
ಧರ್ಮಸ್ಥಳ ಯಾತ್ರೆಯ ಆಯಾಸದಿಂದ ಗಾಢ ನಿದ್ರೆಯಲ್ಲಿದ್ದ ''ತಪ್ಪಿ''ಗೆ ಹೆತ್ತವರಿಗೆ ಮಾರಣಾಂತಿಕವಾಗಿ ಥಳಿಸಿದ ಮಗ ಆತ್ಮಹತ್ಯೆಗೆ ಶರಣು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ:
ತಂದೆ-ತಾಯಿ ಬಾಗಿಲು ತೆರೆಯಲು ವಿಳಂಬಿಸಿದರು ಎಂಬ ಕಾರಣಕ್ಕೆ ಕೋಪಗೊಂಡ ಮಗ ಅವರಿಗೆ ಹಲ್ಲೆಗೈದ ಬಳಿಕ, ಅವರು ಸತ್ತಿರಬಹುದೆಂಬ ಭೀತಿಯಿಂದ ಆತ್ಮಹತ್ಯೆಗೈದ ಕಳವಳಕಾರಿ ಘಟನೆ ಬೈಂದೂರು ಸಮೀಪ ಬಿಜೂರು ಎಂಬಲ್ಲಿ ವರದಿಯಾಗಿದೆ.


ಹೆರಿಯಕ್ಕ ಮತ್ತು ಮಂಜು ದಂಪತಿ ಮಗ ರಾಘವ ಮನೆ ಸಮೀಪದ ಬಾವಿಗೆ ಜಿಗಿದು ಸಾವಪ್ಪಿದ ಯುವಕ.

ಹೆರಿಯಕ್ಕ(55) ಮತ್ತು ಮಂಜು(67) ಅವರು ಎರಡು ದಿನ ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು. ಶನಿವಾರ ಬೆಳಿಗ್ಗೆ ಮಗ ರಾಘವ ಮನೆ ಬಾಗಿಲು ಬಡಿದಾಗ ಪ್ರಯಾಣದ ಆಯಾಸದಿಂದ ಗಾಢ ನಿದ್ರೆಯಲ್ಲಿದ್ದು, ತಕ್ಷಣ ಎಚ್ಚರಗೊಂಡಿರಲಿಲ್ಲ.

ಇದರಿಂದ ರೊಚ್ಚಿಗೆದ್ದ ಮಗ ರಾಘವ ಅವರು ಬಾಗಿಲು ತೆರೆಯುವುದನ್ನೇ ಕಾದಿದ್ದು, ಬಾಗಿಲು ತೆರೆದ ತಕ್ಷಣ ಮರದ ದೊಣ್ಣೆಯಿಂದ ಯದ್ವಾತದ್ವಾ ಥಳಿಸಿದ್ದಾನೆ ಎನ್ನಲಾಗಿದೆ.

ಈತನ ಹಲ್ಲೆಯಿಂದ ವೃದ್ಧ ದಂಪತಿ ಕುಸಿದು ಬಿದ್ದಾಗ ಈತ ಅವರು ಸತ್ತರೆಂದು ಭಾವಿಸಿದವನೇ ಹೆದರಿ ಓಡಿ ಹೋಗಿ ಬಾವಿಗೆ ಹಾರಿದ್ದಾನೆ.

ರಾಘವ ಕಳೆದ ಎರಡು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಈತನ ತಂದೆ-ತಾಯಿ ಈತನಿಗಾಗಿಯೇ ಧರ್ಮಸ್ಥಳದ ಮಂಜುನಾಥನಿಗೆ ಪ್ರಾರ್ಥನೆ ಸಲ್ಲಿಸಿ ಬಂದಿದ್ದರೆನ್ನಲಾಗಿದೆ.

ವೆನ್ಲಾಕ್ ಆಸ್ಪತ್ರೆಗೆ ದಾಖಲು
ಮಗನಿಂದಲೇ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದ ದಂಪತಿಗಳು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೆರಿಯಕ್ಕ ಅವರ ತಲೆಗೆ ಗಂಭೀರವಾದ ಏಟಾಗಿದೆ ಎಂದು ಕುಂದಾಪುರ ಆಸ್ಪತ್ರೆಯ ಸಿಬ್ಬಂದಿಗಳು 'ಕರಾವಳಿ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related Tags: Byndoor police, Son Commits Suicide, Raghv Bijoor Suicide, Raghav Death, Youth Suicide, Dharmasthala, Son Assaults Parents, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ