ಜಲ್ಲಿ ಬಂಕರ್ ಕುಸಿತ: ಇಬ್ಬರು ಕಾರ್ಮಿಕರು ಸಾವು

ಕರಾವಳಿ ಕರ್ನಾಟಕ ವರದಿ
ಕಾರ್ಕಳ:
ಆಕಸ್ಮಿಕವಾಗಿ ಜಲ್ಲಿ ಬಂಕರ್ ಕುಸಿದು ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ಖೇದಕರ ಘಟನೆ ತಾಲೂಕಿನ ಶಿವಪುರದ ಮೂಕಾಂಬಿಕಾ ಕ್ರಷರ್‌ನಲ್ಲಿ ಸಂಭವಿಸಿದೆ.

ಈ ಭೀಕರ ದುರಂತದಲ್ಲಿ ಕಾರ್ಮಿಕ ಸಂಜೀವ(35) ಮತ್ತು ಲಾರಿ ಚಾಲಕ ಉತ್ತರ ಪ್ರದೇಶ ಮೂಲದ ಜಗದೀಶ್(43) ಸಾವನ್ನಪ್ಪಿದ ದುರ್ದೈವಿಗಳು.

ಜಲ್ಲಿ ಪುಡಿ ತುಂಬಿಸುತ್ತಿದ್ದ ವೇಳೆ ಈ ದುರಂತ ನಡೆದಿದ್ದು ಉಸಿರುಗಟ್ಟಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಕ್ರಷರ್‌ನಲ್ಲಿ ದೊಡ್ಡ ಪ್ರಮಾಣದ ಬಂಡೆ ಕಲ್ಲುಗಳನ್ನು ಪುಡಿ ಮಾಡಿ ಜಲ್ಲಿಯಾಗಿ ಪರಿವರ್ತಿಸಲಾಗುತ್ತಿತ್ತು.

ಬಳಿಕ ಜಲ್ಲಿಯನ್ನು ಬಂಕರ್ ಒಳಗೆ ತುಂಬಿಸಿಟ್ಟು ಬಂಕರ್‌ನಿಂದ ಟಿಪ್ಪರ್‌ಗೆ ಜಲ್ಲಿಯನ್ನು ತುಂಬಿ ಸಾಗಾಟ ಮಾಡಲಾಗುತ್ತಿತ್ತು.

ಇಂದು ಟಿಪ್ಪರ್‌ಗೆ ಬಂಕರ್‌ನಿಂದ ಜಲ್ಲಿ ತುಂಬಿಸುತ್ತಿದ್ದ ವೇಳೆ ಬಂಕರ್ ತಗಡು ಶೀಟ್ ಕುಸಿದಿದೆ. ಪರಿಣಾಮ ಜಲ್ಲಿ ರಾಶಿಯ ಕೆಳಗೆ ಸಿಲುಕಿಕೊಂಡ ಇಬ್ಬರೂ ಸಹ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ತಕ್ಷಣವೇ ಬುಲ್ಡೋಜರ್ ಮೂಲಕ ಕುಸಿದ ಬಂಕರ್ ತೆರವುಗೊಳಿಸಲಾಗಿತ್ತಾದರೂ ಅಷ್ಟರಲ್ಲಾಗಲೇ ಕಾರ್ಮಿಕರಿಬ್ಬರು ಕೊನೆಯುಸಿರೆಳೆದಿದ್ದಾರೆ.

ಉಡುಪಿ ಎಸ್‍ಪಿ ಡಾ. ಸಂಜೀವ್ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags: Karkala, Two Workers Crushed to Death, Quarry, Hebri, Hebri Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ