ಗೆಳತಿ ಎರಡು ದಿನ ಮಾತನಾಡಲಿಲ್ಲವಂತೆ: ಅಷ್ಟಕ್ಕೆ ಪ್ರಾಣ ಬಿಟ್ಟ

ಕರಾವಳಿ ಕರ್ನಾಟಕ ವರದಿ
ಉಡುಪಿ:
ಎರಡು ದಿನ ಗೆಳತಿ ಮಾತನಾಡಲಿಲ್ಲವೆಂದು ಬೇಸರಗೊಂಡ ಯುವಕನೋರ್ವ ರೈಲ್ವೇ ಹಳಿಗಳ ಮೇಲೆ ಆತ್ಮಹತ್ಯೆಗೆ ಶರಣಾದ ಕಳವಳಕಾರಿ ಘಟನೆ ವರದಿಯಾಗಿದೆ.

ಇಂದ್ರಾಳಿಯಲ್ಲಿ ಆತ್ಮಹತ್ಯೆಗೈದ ವಿದ್ಯಾರ್ಥಿಯನ್ನು ನಿಟ್ಟೂರಿನ ಪ್ರತೀಕ್(20) ಎಂದು ಗುರುತಿಸಲಾಗಿದೆ.

ಪ್ರತೀಕ್ ಗಾಢವಾಗಿ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಇತ್ತೀಚೆಗೆ ಸಣ್ಣ ಮುನಿಸು ಉಂಟಾಗಿತ್ತು ಎನ್ನಲಾಗಿದೆ. ಆಕೆ ಎರಡು ದಿನ ಮಾತು ಬಿಟ್ಟಾಗ ಚಿಂತಿತನಾದ ಈತ ಶುಕ್ರವಾರ ತಡ ರಾತ್ರಿ ಮನೆಯಿಂದ ಹೋಗಿದ್ದು, ಮತ್ತೆ ಮರಳಿ ಬಂದಿರಲಿಲ್ಲ.

ಯುವತಿ ತನ್ನ ಜೊತೆ ಮಾತು ಬಿಟ್ಟಿದ್ದಕ್ಕೆ ಭಾರೀ ಖಿನ್ನನಾದ ಪ್ರತೀಕ್ ಒಂದೆರಡು ದಿನಗಳಿಂದ ಯಾರೊಂದಿಗೂ ಹೆಚ್ಚು ಬೆರೆಯಲಿಲ್ಲ ಎನ್ನಲಾಗುತ್ತಿದೆ. ಆಕೆ ಮಾತನಾಡಬಹುದು ಎಂದು ಕಾಯುತ್ತಿದ್ದ ಪ್ರತೀಕ್ ಕೊನೆಗೂ ಇಂತಹ ಕಠೋರ ನಿರ್ಧಾರಕ್ಕೆ ಬಂದಿದ್ದಾನೆ.

ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರತೀಕ್ ಹೇಗೆ ಮತ್ತು ಎಲ್ಲಿ ಆ ಯುವತಿಯ ಜೊತೆ ಪರಿಚಿತನಾಗಿದ್ದ ಎಂದು ತಿಳಿದುಬಂದಿಲ್ಲ. ಆದರೆ ಆತ ಆಕೆಯನ್ನು ತುಂಬಾ ಹಚ್ಚಿಕೊಂಡಿದ್ದ ಎನ್ನಲಾಗುತ್ತಿದೆ.

ಪ್ರತೀಕ್ ಬರೆದಿಟ್ಟ ಡೆತ್‌ನೋಟ್ ಸಿಕ್ಕಿದ್ದು ಅದರಲ್ಲೇನಿದೆ ಎಂದು ತಿಳಿದಿಲ್ಲ.

ಆತನ ಮೃತದೇಹವನ್ನು ಸಂಬಂಧಿಕರು ಇಂದ್ರಾಳಿಯಲ್ಲಿ ರೈಲ್ವೇ ಹಳಿಗಳ ಮೇಲೆ ಪತ್ತೆಹಚ್ಚಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Tags: Prateek Death, Youth Suicide, Depressed Love Failure ,Indrali Railway Track, Nittur Prateek, Manipal Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ