ಕಲ್ಲಡ್ಕ ಶಾಲೆಗೆ ನೆರವು ನಿಲ್ಲಿಸಿದ್ದು ಕ್ರೌರ್ಯ: ಜನಾರ್ದನ ಪೂಜಾರಿ ಗುಡುಗು
ರಮಾನಾಥ ರೈಗೂ ಸಿದ್ಧರಾಮಯ್ಯ ಶನಿ ಹಿಡಿದಿದೆ. ಸಿದ್ಧರಾಮಯ್ಯ ರಾಜೀನಾಮೆ ಕೊಡಿ. ಸಿಎಂಗೆ ಏನಿದೆ ಕೆಲಸ? ಇಸ್ಪೀಟ್ ಆಡುತ್ತಿರ್ತಾರಾ ಅಥವಾ ಬೇರೆ ಅಭ್ಯಾಸ ಇದೆಯಾ?

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಕಲ್ಲಡ್ಕ ಶಾಲೆಗೆ ಊಟ ನಿಲ್ಲಿಸಿದ್ದು ದೇವರು ಕೂಡಾ ಮೆಚ್ಚುವುದಿಲ್ಲ. ರಮಾನಾಥ ರೈ ಕುಮ್ಮಕ್ಕಿನಿಂದ ಈ ಕೆಲಸ ನಡೆದಿದೆ. ರಮಾನಾಥ ರೈಗೂ ಸಿದ್ಧರಾಮಯ್ಯ ಶನಿ ಹಿಡಿದಿದೆ ಎಂದು ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಕಲ್ಲಡ್ಕ ಪ್ರಭಾಕರ ಭಟ್ ಪರ ಮಾತನಾಡಿರುವ ಕುತೂಹಲಕಾರಿ ಸಂಗತಿ ವರದಿಯಾಗಿದೆ.

ಕಲ್ಲಡ್ಕ ಪ್ರಭಾಕರ ಭಟ್ ಅವರು ವಿದ್ಯಾರ್ಥಿಗಳಿಗೆ ಊಟ ಕೊಡುತ್ತಿರುವುದು ಶ್ಲಾಘನಾರ್ಹ ಕೆಲಸ. ಕಲ್ಲಡ್ಕ ಭಟ್ ದರೋಡೆಕೋರರಲ್ಲ. ಅವರು ತನ್ನ ಮಾನವೀಯತೆಯನ್ನು ತೋರಿಸಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಪೂಜಾರಿ ಬಾಯ್ತುಂಬಾ ಹೊಗಳಿದ್ದಾರೆ.

ರಮಾನಾಥ ರೈ ಶಾಲೆಗಳಿಗೆ ಅನುದಾನವನ್ನು ಯಾಕೆ ತಡೆದಿದ್ದಾರೆ? ರೈಗೆ ಏನಾಗಿದೆ? ರೈಯವರೇ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ಶಾಲೆಗಳಿಗೆ ಅನುದಾನ ನೀಡುವುದನ್ನು ತಡೆಯಬೇಡಿ ಎಂದು ಪೂಜಾರಿ ಹೇಳಿದರು.

ಸಿ.ಎಂ ಸಿದ್ದರಾಮಯ್ಯಗೆ ಏನಿದೆ ಕೆಲಸ? ಇಸ್ಪೀಟ್ ಆಡ್ತಾರಾ?
ಬರ ಅಧ್ಯಯನಕ್ಕೆ ಹೋಗಲು ಪುರುಸೊತ್ತು ಇಲ್ಲದ ಸಿಎಂಗೆ ಏನಿದೆ ಕೆಲಸ? ಇಸ್ಪೀಟ್ ಆಡುತ್ತಿರ್ತಾರಾ ಅಥವಾ ಬೇರೆ ಏನಾದರೂ ಅಭ್ಯಾಸ ಇದೆಯಾ ಎಂದು ಪೂಜಾರಿ ವ್ಯಂಗ್ಯವಾಡಿದ್ದಾರೆ. ಇಷ್ಟು ಕಷ್ಟಪಟ್ಟು ಯಾಕೆ ಆಡಳಿತ ನಡೆಸುತ್ತೀರಿ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಹರಿಹಾಯ್ದರು.

ಕರ್ನಾಟಕದಲ್ಲಿ ಭೀಕರ ಬರಗಾಲ ಇದೆ. ಆದರೆ ಸಿದ್ಧರಾಮಯ್ಯಗೆ ಬರಗಾಲ ಪೀಡಿತ ಪ್ರದೇಶಗಳಿಗೆ ಭೇಟಿಯಾಗಲು ಸಮಯವಿಲ್ಲ ಎಂದು ಪೂಜಾರಿ ಕುಟುಕಿದರು.

ಸಂಜೆಯೊಳಗೆ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸಂಜೆಯೊಳಗೆ’ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಫರ್ಮಾನು ಹೊರಡಿಸಿದ್ದಾರೆ.

ಓರ್ವ ದಲಿತ ಮುಖ್ಯಮಂತ್ರಿಯಾದರೆ ಕಾಂಗ್ರೆಸ್ ಉಳಿಯುತ್ತದೆ ಇಲ್ಲದಿದ್ದರೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದರು.

ಡಿಕೆಶಿ ಸಿಎಂ ಆಗಲಿ
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯಿಂದ ದಾಳಿಗೊಳಗಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಉತ್ತಮ ಅಭಿಪ್ರಾಯ ಹೊಂದಿದ್ದು, ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಪೂಜಾರಿ ಭವಿಷ್ಯ ನುಡಿದರು.

ಡಿಕೆಶಿಗೆ ಸಿಎಂ ಆಗುವ ಅರ್ಹತೆ ಇದೆ. ಅವರೇ ಸಿಎಂ ಆಗುತ್ತಾರೆ. ಕಾಂಗ್ರೆಸ್ ಹೈಕಮಾಂಡ್‌ಗೆ ಡಿಕೆಶಿ ಸಾಮರ್ಥ್ಯ ಗೊತ್ತಾಗಿದೆ ಎಂದು ಡಿಕೆಶಿಯನ್ನು ಪೂಜಾರಿ ಹೊಗಳಿದರು.

ಅಮಿತ್ ಷಾ ನಿಮ್ಮನ್ನು ಕೆಳಗಿಳಿಸಲಿಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷರು ಇದುವರೆಗೆ 18 ರಾಜ್ಯಗಳಿಗೆ ಭೇಟಿಕೊಟ್ಟಿದ್ದಾರೆ. ಭೇಟಿ ಕೊಟ್ಟಲೆಲ್ಲ ವಿರೋಧಿ ಮುಖ್ಯಮಂತ್ರಿಗಳು ಕೆಳಗೆ ಇಳಿದಿದ್ದಾರೆ. ಇಲ್ಲಿಯೂ ಅದೇ ಗತಿ ಆಗಲಿದೆ. ಅದನ್ನು ಅರ್ಥ ಮಾಡಿಕೊಳ್ಳಿ ಎಂದರು.

ಇದನ್ನೂ ಓದಿ:
►►ಕಲ್ಲಡ್ಕ ಶಾಲೆಗೆ ಕೊಟ್ಟ ಹಣ ದುರುಪಯೋಗವಾಗಿದೆ. ವಸೂಲಿ ಮಾಡಲಾಗುವುದು: ರಮಾನಾಥ ರೈ:
http://bit.ly/2fzuV7C
►►ಕೊಲ್ಲೂರು ನೆರವು ಸ್ಥಗಿತ: ಕಲ್ಲಡ್ಕ ಶಾಲಾ ಮಕ್ಕಳಿಂದ ಖಾಲಿ ತಟ್ಟೆ ಬಡಿದು ಪ್ರತಿಭಟನೆ: http://bit.ly/2uunaqv
►►ಕೊಲ್ಲೂರು ದೇವಳದ ನೆರವು ಸ್ಥಗಿತ: ಕಲ್ಲಡ್ಕ ಪ್ರಭಾಕರ ಭಟ್ ಹಾಕಿದ ಸವಾಲು ಏನು ಗೊತ್ತೆ?: http://bit.ly/2vmrZ2l
►►ಕಲ್ಲಡ್ಕ ಭಟ್ಟರ ಶಾಲೆಗೆ ಕೊಲ್ಲೂರಿನ ನೆರವು ಸ್ಥಗಿತ: ಸಂದಾಯವಾದ ಒಟ್ಟು ಮೊತ್ತವೆಷ್ಟು ಗೊತ್ತೆ? ಅಬ್ಬಬ್ಬ!: http://bit.ly/2ukYD71

Related Tags: Poojary Demands Siddaramaiah''s resignation, Resign ''By Evening'', Poojary backs D K Shivakumar, CM DKC, Kalladka Prabhakar Bhat, Janardhan Poojary, Kollur Temple, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ