ಆಳ್ವರಂಥವರು ದೇಶದಲ್ಲೇ ಅಪರೂಪ: ಆ್ಯತ್ಲೆಟ್ ಸಹನಾ ಕುಮಾರಿ
ಡಾ| ಆಳ್ವ ಸಮಾಜ ಹೆಮ್ಮೆ ಪಡುವಂತಹ ವ್ಯಕ್ತಿ. ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ಸಹಿಸಲಸಾಧ್ಯ: ಪ್ರಭಾಕರ ಜೋಶಿ.

ಕರಾವಳಿ ಕರ್ನಾಟಕ ವರದಿ
ಮಂಗಳೂರು:
ಕಾವ್ಯಾ ಅವರ ತಂದೆ ತಾಯಿಯವರಂತೆಯೇ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವೊಬ್ಬರನ್ನು ಕಳೆದುಕೊಂಡಿರುವುದರ ಬಗ್ಗೆ ನಮಗೂ ಬೇಸರವಿದೆ. ಆದರೆ ಇದೇ ವಿಚಾರವನ್ನು ಹಿಡಿದುಕೊಂಡು ಒಬ್ಬ ವ್ಯಕ್ತಿ- ಸಂಸ್ಥೆಯನ್ನು ಹಳಿಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ರಾಷ್ಟ್ರೀಯ ಆ್ಯತ್ಲೆಟ್ ಸಹನಾ ಕುಮಾರಿ ಹೇಳಿದ್ದಾರೆ.

ಪುರಭವನದಲ್ಲಿ "ನಾಡಸಿರಿಯ ಧ್ವನಿ ಆಳ್ವರೊಂದಿಗೆ ನಾವು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1992ರಿಂದ ಡಾ| ಆಳ್ವ ಅವರನ್ನು ನೋಡಿದ್ದೇನೆ. ನಾನು ಕಂಡಂತೆ ಡಾ| ಆಳ್ವ ಅವರದು ವಿಭಿನ್ನ ವ್ಯಕ್ತಿತ್ವ. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಡೀ ಭಾರತವನ್ನು ಸುತ್ತಿದ್ದೇನೆ.

ಆದರೆ ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಆಳ್ವರಂತಹ ಮಾದರಿ ವ್ಯಕ್ತಿಗಳನ್ನು ಎಲ್ಲೂ ನೋಡಿಲ್ಲ ಎಂದು ಸಹನಾ ಕುಮಾರಿ ನುಡಿದರು.

ಮೋಹನ ಆಳ್ವ ಸಮಾಜಕ್ಕೆ ಹೆಮ್ಮೆ: ಪ್ರಭಾಕರ ಜೋಶಿ
ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವು- ನೋವಿನ ವಿಷಯವನ್ನಿಟ್ಟುಕೊಂಡು ಹಲವು ವರ್ಷಗಳ ಶ್ರಮದಿಂದ ಕಟ್ಟಿ ಬೆಳೆಸಿದ ಸಂಸ್ಥೆ ಮತ್ತು ಡಾ| ಎಂ. ಮೋಹನ ಆಳ್ವರ ವ್ಯಕ್ತಿತ್ವದ ಬಗ್ಗೆ ದುರುದ್ದೇಶಪೂರಿತ ಅಪಪ್ರಚಾರ ಸರಿಯಲ್ಲ ಎಂದು ಡಾ| ಎಂ. ಪ್ರಭಾಕರ ಜೋಶಿ ಹೇಳಿದ್ದಾರೆ.



ಡಾ| ಆಳ್ವ ಸಮಾಜ ಹೆಮ್ಮೆ ಪಡುವಂತಹ ವ್ಯಕ್ತಿ. ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಎಲ್ಲಾ ರಂಗಕ್ಕೂ ಕೊಡುಗೆ ನೀಡಿದ ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ಸಹಿಸಲಸಾಧ್ಯ ಎಂದು ಹೇಳಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆ ಭಾರತೀಯ ಸೈನ್ಯಕ್ಕೆ ವಿದ್ಯಾರ್ಥಿಗಳು ಸೇರ್ಪಡೆ ನಿಟ್ಟಿನಲ್ಲಿಯೂ ಕೊಡುಗೆ ನೀಡಿದೆ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ದೇಶೀಯತೆಯನ್ನು ಬೆಳೆಸುವ ಕೆಲಸವನ್ನು ಸಂಸ್ಥೆ ಮಾಡಿಕೊಂಡು ಬಂದಿದೆ.

ಇಂತಹ ಸಂಸ್ಥೆ ಬಗ್ಗೆ ಕೀಳುಮಟ್ಟದ ಅಪಪ್ರಚಾರ ಸಲ್ಲದು ಎಂದು ದ.ಕ. ಜಿಲ್ಲಾ ಮಾಜಿ ಸೈನಿಕರ ಸಂಘದ ಪದಾಧಿಕಾರಿ ಬ್ರಿ| ಐ. ಎನ್. ರೈ ಹೇಳಿದರು.

ಮಾಜಿ ಸಚಿವ ನಾಗರಾಜ ಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ನಿರ್ದೇಶಕ ವಾಸುದೇವ ರಾವ್, ಶ್ರೀದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಕ್ರೀಡಾ ತರಬೇತು ದಾರ ದಿನೇಶ್ ಕುಂದರ್, ಪುರುಷೋತ್ತಮ ಪೂಜಾರಿ, ಕಿಶೋರ್ ಡಿ. ಶೆಟ್ಟಿ. ವಿಜಯಲಕ್ಷ್ಮೀ ಬಿ. ಶೆಟ್ಟಿ, ರವಿರಾಜ್ ಶೆಟ್ಟಿ, ಶಶಿರಾಜ್ ಕಾವೂರು ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:
►►ಆಳ್ವಾಸ್‌ಗೆ ಶುರವಾಯ್ತು ಮೊದಲ ಕಂಟಕ: ಅಕ್ರಮಗಳ ವಿರುದ್ಧ ತನಿಖೆಗೆ ಸಮಿತಿ ರಚಿಸಿದ ಜಿಲ್ಲಾಧಿಕಾರಿ:
http://bit.ly/2uLFrut
►►ಜಸ್ಟೀಸ್ ಫಾರ್ ಕಾವ್ಯಾ: ಮಂಗಳೂರಿನಲ್ಲಿ ನಡೆದಿದೆ ಬೃಹತ್ ಧರಣಿ. ಕಾವ್ಯಾ ತಾಯಿಯೂ ಭಾಗಿ: http://bit.ly/2wGOv5t
►►ಕಳೆದ ಹತ್ತು ವರ್ಷಗಳಲ್ಲಿ ಆಳ್ವಾಸ್ ಕ್ಯಾಂಪಸ್‌ನಲ್ಲಿ ಜೀವ ಕಳೆದುಕೊಂಡವರೆಷ್ಟು?: http://bit.ly/2uCHReT
►►ದೈಹಿಕ ಶಿಕ್ಷಕನನ್ನು ತಕ್ಷಣ ಬಂಧಿಸಿ. ಕೊಲೆಯ ರಹಸ್ಯ ಬಯಲಾಗುತ್ತದೆ: ಕಾವ್ಯಾ ತಾಯಿ ಬೇಬಿ: http://bit.ly/2vHZtdw
►►ಆಗಸ್ಟ್ 10ರಂದು “ಆಳ್ವರೊಂದಿಗೆ ನಾವು”: ಸಂಸ್ಕಾರ ಭಾರತಿಯಿಂದ ಆಳ್ವರಿಗೆ ಫುಲ್ ಸಪೋರ್ಟ್: http://bit.ly/2wmNm3p
►►ಕಾವ್ಯಾ ಸಾವಿನ ಹಿನ್ನೆಲೆ: ಆಗಸ್ಟ್ 12ರಂದು ಡಾ. ಮೋಹನ್ ಆಳ್ವ ಬೆಂಬಲಿಸಿ ಬೃಹತ್ ಸಭೆ: http://bit.ly/2v3M92n
►►ಆಳ್ವಾಸ್ ಮೂಡಬಿದಿರೆ. ಹಾಸ್ಟೆಲೋ ಅಥವಾ ವಿದ್ಯಾರ್ಥಿನಿಯರ ನೇಣು ಬಿಗಿವ ತಾಣವೊ?: http://bit.ly/2vwtw8X
►►ಕಾವ್ಯಾ ಸಾವು: ಮೋಹನ್ ಆಳ್ವರಿಗೆ ಬಹಿರಂಗ ಬೆಂಬಲ ಸಾರಿದ ಬಿಜೆಪಿ: http://bit.ly/2f8OinS
►►ಕಾವ್ಯಾ ಪ್ರಕರಣದ ಗೊಂದಲಗಳಿಗೆ ತೆರೆ ಎಳೆಯಿರಿ: ಎಬಿವಿಪಿ ಕುಂದಾಪುರ: http://bit.ly/2hneo7i
►►ನುಡಿಸಿರಿ ಸಂಘಟಕರಿಗೆ ಕಾವ್ಯಾಳ ಕುರಿತು ನುಡಿಗಳೇ ಇಲ್ಲದಾಯಿತೆ?: http://bit.ly/2ugxOMo
►►ನನ್ನ ಮಗಳ ಸಾವಿಗೆ ದೈಹಿಕ ಶಿಕ್ಷಕ ಕಾರಣ: ಕಾವ್ಯಾ ತಾಯಿ ಬೇಬಿ ಆರೋಪ: http://bit.ly/2f3KqVo
►►ಜಸ್ಟೀಸ್ ಫಾರ್ ಕಾವ್ಯಾ: ಕುಂದಾಪುರದಲ್ಲಿ ಬೀದಿಗಳಿದ ಸಹಸ್ರಾರು ವಿದ್ಯಾರ್ಥಿಗಳು: http://bit.ly/2tZQlkU
►►ಕಾವ್ಯಾ ಸಾವು: ಮೋಹನ್ ಆಳ್ವಾ ಕಥೆ ಹೇಳುತ್ತಿದ್ದಾರೆಯೆ?: http://bit.ly/2wesUki
►►ಕಾವ್ಯಾಳದ್ದು ಆತ್ಮಹತ್ಯೆಯಂತೆ. ಮರಣೋತ್ತರ ವರದಿ ಬಂದಿದೆಯಂತೆ: ಪೊಲೀಸ್ ಮೂಲಗಳು: http://bit.ly/2ub16Mq
►►ಕಾವ್ಯಾ ಸಾವು: ಆಳ್ವಾಸ್ ಹೆಸರಿಗೆ 'ಮಸಿ ಬಳಿಯುವುದನ್ನು' ನಿಲ್ಲಿಸಲು ಎಚ್‌ಡಿಕೆ ಕರೆ: http://bit.ly/2u9pwWR
►►‘ಆಳ್ವಾಸ್’ ಕಾವ್ಯ ನಿಗೂಢ ಸಾವು: ಸಿಬಿಐ ತನಿಖೆಗೆ ಆಗ್ರಹ: http://bit.ly/2v8ZF5x
►►ಪೊಲೀಸರೆ ವಿದ್ಯಾರ್ಥಿನಿ ಕಾವ್ಯ ಪ್ರಕರಣ ಮುಚ್ಚಿಹಾಕದಿರಿ: ಸಿ.ಎಫ್.ಐ http://bit.ly/2vgush
►►ಕಾವ್ಯಾಳದು ಆತ್ಮಹತ್ಯೆ, ಕೊಲೆಯಲ್ಲ: ಮೂಡುಬಿದಿರೆ ಪೊಲೀಸ್: http://bit.ly/2hb2Xj0
►►ಕಾವ್ಯಾ ಸಾವಿಗೆ ಕೊಲೆ ಎನ್ನೋದಕ್ಕೆ ಅರ್ಥವಿದೆಯೆ? http://bit.ly/2uKVbzw
►►ಆಳ್ವಾಸ್ ವಿದ್ಯಾರ್ಥಿನಿ, ಬ್ಯಾಡ್ಮಿಂಟನ್ ಚಾಂಪಿಯನ್ ನಿಗೂಢ ಸಾವು: ಕೊಲೆ ಆರೋಪ http://bit.ly/2uDb0tB
►►ಆರನೇ ಮಹಡಿಯಿಂದ ಜಿಗಿದು ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2ev592K
►►ಆಳ್ವಾಸ್ ವಿದ್ಯಾರ್ಥಿನಿ ಕಾಲೇಜಲ್ಲೇ ಸಾವು! http://bit.ly/1KlK1AS
►►ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2tPy30R
►►ವಿದ್ಯಾರ್ಥಿನಿ ಆತ್ಮಹತ್ಯೆ: 4ನೇ ದಿನಕ್ಕೆ ಪ್ರತಿಭಟನೆ http://bit.ly/2mdZ4XZ
►►ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2nQnUB5
►►ಪರೀಕ್ಷೆ ಫಲಿತಾಂಶದಿಂದ ನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ http://bit.ly/2qGXXDg
►►ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ: ಡೆತ್ ನೋಟಲ್ಲಿ ಏನಿದೆ? http://bit.ly/2nqiUEl

Related Tags: B Nagaraj Shetty, District Kannada Sahitya Parishat President, S Pradeep Kumar Kalkura, Dr Vasanth Kumar Perla, Purushotham Poojary, Dinesh Kundar, Shashiraj Kavoor, Kishore D Shetty, Ashok Shetty, Ramachandar Bykappady, M R Vasudeva, Shashidhar Shetty, Vijayalaxmi
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ