ಆಸ್ಪತ್ರೆಯಲ್ಲಿ ಮಕ್ಕಳ ಸಾವು ದುರಂತವಲ್ಲ, ಹತ್ಯಾಕಾಂಡ: ಕೈಲಾಶ್ ಸತ್ಯಾರ್ಥಿ

ಕರಾವಳಿ ಕರ್ನಾಟಕ ವರದಿ
ನವದೆಹಲಿ:
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಆಸ್ಪತ್ರೆಯಲ್ಲಿ ನಡೆದಿರುವ ಮಕ್ಕಳ ಸಾವು ದುರಂತವಲ್ಲ, ಅದೊಂದು ಹತ್ಯಾಕಾಂಡ ಎಂದು ನೋಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಕಿಡಿಕಾರಿದ್ದಾರೆ.

ಗೋರಖ್‌ಪುರ ಬಾಬಾ ರಾಘವ್ ದಾಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಕ್ಕಳು ಸಾವನ್ನಪ್ಪಿರುವ ಘಟನೆಯನ್ನು ಕಟು ಶಬ್ದಗಳಿಂದ ಟೀಕಿಸಿದ್ದಾರೆ.

70 ವರ್ಷಗಳ ಭಾರತ ಸ್ವಾತಂತ್ರ್ಯದ ಅರ್ಥ ಇದೇ ಏನು ಎಂದು ಪ್ರಶ್ನಿಸಿದ ಕೈಲಾಶ್ ಸತ್ಯಾರ್ಥಿ, ಟ್ವಿಟರ್‌ನಲ್ಲಿ ಈ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಆಮ್ಲಜನಕ ಸಿಗದ ಕಾರಣಕ್ಕೆ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವುದು ದುರಂತವಲ್ಲ. ಬದಲಿಗೆ ಇದೊಂದು ಹತ್ಯಾಕಾಂಡ ಎಂದು ಹೇಳಿದ್ದಾರೆ.

ಸಿಎಂ ಯೋಗಿ ಆದಿತ್ಯಾನಾಥ್ ಅವರೇ ನಿಮ್ಮ ಕಠಿಣ ನಿರ್ಧಾರಗಳಿಂದ ಮಾತ್ರ ಇಂತಹ ಸಮಸ್ಯೆಗಳನ್ನು ಬಗೆಹರಿಸಬಹುದಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದಶಕಗಳಿಂದಲೂ ಇರುವ ಭ್ರಷ್ಟಾಚಾರ ಕೂಪವನ್ನು ಕೊನೆಗಾಣಿಸಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿ ಎಂದು ಸತ್ಯಾರ್ಥಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಸಿಎಂ ಯೋಗಿ ತುರ್ತು ಸಭೆ
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ 60ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಸ್ವಕ್ಷೇತ್ರದಲ್ಲಿ ನಡೆದಿರುವ ಮಕ್ಕಳ ಸಾವಿನ ಕುರಿತಾಗಿ ಮುಖ್ಯ ಮಂತ್ರಿ ಆದಿತ್ಯನಾಥ್‌ ಶನಿವಾರ ಅಧಿಕಾರಿಗಳು ಮತ್ತು ಸಚಿವರ ತುರ್ತು ಸಭೆ ಕರೆದಿದ್ದಾರೆ.

ಈ ಬಗ್ಗೆ 24 ಗಂಟೆಯೊಳಗೆ ವರದಿ ನೀಡುವಂತೆ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆರೋಗ್ಯ ಸಚಿವ ಸಿದ್ಧಾರ್ಥನಾಥ್‌ ಸಿಂಗ್‌, ಸಚಿವ ಅಶುತೋಷ್‌ ಟೆಂಡನ್‌ ಅವರು ಮುಖ್ಯಮಂತ್ರಿಯೊಂದಿಗಿನ ಸಭೆಯ ಬಳಿಕ ಗೋರಖ್‌ಪುರಕ್ಕೆ ತೆರಳಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಇದನ್ನೂ ಓದಿ:
►►ಆಕ್ಸಿಜನ್ ಬಿಲ್ ಬಾಕಿ ಇಟ್ಟುಕೊಂಡಿರುವ ಯೋಗಿ ಸರ್ಕಾರ: 60 ಮಕ್ಕಳು ಸಾವು:
http://bit.ly/2uP0TPf 

Related Tags: Not a Tragedy, It''s a Massacre, Kailash Satyarthi, Gorakhpur Hospital Deaths, Gorakhpur Hospital Tragedy, Non-Payment, Oxygen Bill, Death of 60 Children, Yogi Sarkar, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ